ಬೆಂಗಳೂರು.

2020-21ರ ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಕರ್ನಾಟಕದ ಖಾಸಗಿ ಶಾಲೆಗಳು ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಂದ 345.80 ಕೋಟಿ ರೂಪಾಯಿ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಿವೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತನ್ನ ಇತ್ತೀಚಿನ ವರದಿಯಲ್ಲಿ ಬಹಿರಂಗಪಡಿಸಿದೆ.

ವಿಧಾನಸಭೆಯಲ್ಲಿ ಮಂಡಿಸಲಾದ ವರದಿಯಲ್ಲಿ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶುಲ್ಕ ಸಂಗ್ರಹಣೆಯ ಮೇಲೆ ನಿಗಾ ಇಡಲು ಯಾಂತ್ರಿಕ ವ್ಯವಸ್ಥೆ ಇಲ್ಲದಿರುವುದು ನಿಯಂತ್ರಣಾ ಲೋಪಗಳಿಗೆ ಕಾರಣವಾಗಿದೆ ಎಂದು ಟೀಕಿಸಿದೆ.

ಆನ್‌ಲೈನ್ ಹೆಸರಿನಲ್ಲಿ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ತೆಗೆದುಕೊಳ್ಳಲಾಗಿದ್ದು, ಶಾಲೆಗಳಿಗೆ ನಿಯಂತ್ರಣ ಮಾಡಲಾಗಿಲ್ಲ. ಅಲ್ಲದೇ ಸಾಂಕ್ರಾಮಿಕ ಸಮಯದಲ್ಲಿ ಶಿಕ್ಷಣದಲ್ಲಿ ಅಸಮಾನತೆ ಹಾಗೂ ವಿಭಜನೆಯಾಗಿದೆ ಎಂದು ಸಿಎಜಿ ಹೇಳಿದೆ.
17.79 ಕೋಟಿ ಮೌಲ್ಯದ ಔಷಧ ವಿತರಿಸಲಾಗಿಲ್ಲ

ಆರೋಗ್ಯದ ಕುರಿತಾದ ಪ್ರತ್ಯೇಕ ವರದಿಯಲ್ಲಿ, ಸಿಎಜಿ ಕೋವಿಡ್-19 ಔಷಧಗಳು ಮತ್ತು ಸಲಕರಣೆಗಳ ಪೂರೈಕೆಯಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸಿದೆ. 665 ಕೋಟಿ ಮೌಲ್ಯದ ಆರ್ಡರ್‌ಗಳನ್ನು ಸರಕಾರ ನೀಡಿದ್ದರೂ, ಮಾರ್ಚ್ 2022 ರವರೆಗೆ 17.79 ಕೋಟಿ ಮೌಲ್ಯದ ಔಷಧಗಳನ್ನು ವಿತರಿಸಲಾಗಿಲ್ಲ. ಅಲ್ಲದೇ 415 ಕೋಟಿ ಮೌಲ್ಯದ ಸರಬರಾಜುಗಳಿಗೆ 1 ರಿಂದ 252 ದಿನಗಳವರೆಗೆ ಔಷಧ ವಿತರಣೆಯಲ್ಲಿ ವಿಳಂಬವಾಗಿದೆ. ಅದೇ ರೀತಿ, 288 ಕೋಟಿ ರೂಪಾಯಿ ಮೌಲ್ಯದ ಉಪಕರಣಗಳನ್ನು ಒದಗಿಸಲು 217 ದಿನಗಳವರೆಗೆ ವಿಳಂಬವಾಗಿದೆ. ಆದರೆ 405 ಕೋಟಿ ಮೌಲ್ಯದ ಉಪಕರಣಗಳ ವಿವರಗಳನ್ನು ಲೆಕ್ಕಪರಿಶೋಧಕರಿಗೆ ಶಾಲೆಗಳು ನೀಡಿಲ್ಲ.

ಅನುಪಾತದಲ್ಲಿ ವ್ಯತ್ಯಾಸ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಅನುಪಾತದಲ್ಲಿ ವ್ಯತ್ಯಾಸವಾಗಿದೆ. ಇದು ಬಜೆಟ್ ಕೊರತೆ ಅಂಶಗಳು ಮಕ್ಕಳ ಶಿಕ್ಷಣದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಶಿಕ್ಷಕರ ಖಾಲಿ ಹುದ್ದೆಯು ಮಂಜೂರಾದ ಒಟ್ಟು ಸಾಮರ್ಥ್ಯದ ಶೇ.10 ಮೀರಬಾರದು. ಆದರೆ ಗ್ರಾಮೀಣ ಪ್ರದೇಶದಲ್ಲಿ ಶೇ.27, ನಗರ ಪ್ರದೇಶದಲ್ಲಿ ಶೇ.21 ಹುದ್ದೆಗಳು ಖಾಲಿ ಇದೆ.

ಕೊಪ್ಪಳದಲ್ಲಿ ಶೇಕಡ.20.90, ವಿಜಯಪುರದಲ್ಲಿ ಶೇಕಡ.18.70 ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಆದರೆ ಶಾಲಾ ಶಿಕ್ಷಕರ ಕೊರತೆ ನೀಗಿಸಲು 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

31,770 ಶಿಕ್ಷಕರ ಅವಶ್ಯಕತೆ.

8 ಜಿಲ್ಲೆಗಳಲ್ಲಿ 31,770 ಶಿಕ್ಷಕರ ಅವಶ್ಯಕತೆಯಿದ್ದರೆ, ಉಳಿದ ಜಿಲ್ಲೆಗಳಲ್ಲಿ 18,391 ಹೆಚ್ಚುವರಿ ಶಿಕ್ಷಕರಿದ್ದಾರೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಇಂತಹ ಜಿಲ್ಲಾವಾರು ಅನುಪಾತದ ವ್ಯತ್ಯಾಸ ಸರಿಪಡಿಸಲು ಕ್ರಮ ಅಗತ್ಯವಾಗಿದೆ ಎಂದು ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಹಾಗೂ ಮಕ್ಕಳ ಅನುಪಾತದಲ್ಲಿ ವ್ಯತ್ಯಾಸ, ಬಜೆಟ್ ಕೊರತೆ, ಮಕ್ಕಳ ಶಿಕ್ಷಣದ ಗುಣಮಟ್ಟ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿ ಬಹಿರಂಗವಾಗಿದ್ದು, ಇದೀಗ ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತಪಡಿಸಿದೆ. ಆಡಳಿತ ವರ್ಗದವರ ಕರ್ತವ್ಯ, ಜಾಗರೂಕತೆ ಬಗ್ಗೆ ಸಾರ್ವಜನಿಕರು ಹೆಚ್ಚು ಪ್ರಶ್ನೆ ಮಾಡುವಂತೆ ಮಾಡಿದೆ.

ಬಿಜೆಪಿ ಸರ್ಕಾರದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ.

ಕಳೆದ ಬಿಜೆಪಿ ಸರ್ಕಾರ ಇದ್ದಾಗ ಕರ್ನಾಟಕದಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅಧಿüಸೂಚಿಸಿ, ನೇಮಕ ಪ್ರಕ್ರಿಯೆ ನಡೆಸಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರದಲ್ಲಿನ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೊಸ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಿದ್ದಾರೆ ಹೊರತು, ಅವರ ಮಾತಿನ ಮೇಲೆ ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಮೇಲೆ ಯಾವುದೇ ಭರವಸೆ ಇನ್ನೂ ಮೂಡಿಲ್ಲ. ಇನ್ನು ಪಾಠ ಕೇಳ ಬೇಕಾದ ಮಕ್ಕಳಿಗೆ ಶಿಕ್ಷಕರ ಕೊರತೆಯ ಬಗ್ಗೆ ಅರಿವು ಸಿಗುವುದಿಲ್ಲ.

14,527,91 ಕೋಟಿ ರೂ.ಅಗತ್ಯ.

ಶಿಕ್ಷಣ ವಲಯಕ್ಕೆ ಸಂಬAಧ ಮತ್ತೊಂದು ಮಹತ್ತರ ಅಂಶವನ್ನು ಗಮನಿಸುವುದಾದಲ್ಲಿ, ಇಲ್ಲಿ ಸಾರ್ವಜನಿಕ ವೆಚ್ಚದ ಶೇಕಡ.15-20 ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ಹಂಚಿಕೆ ಮಾಡುವಂತೆ ವಿಷನ್ 2030 ಡಾಕ್ಯುಮೆಂಟ್ ಶಿಫಾರಸು ಮಾಡಿತ್ತು. ಆದರೆ ಸರ್ಕಾರವು ಶೇಕಡ.12 ಮತ್ತು ಜಿಎಸ್‌ಡಿಪಿ’ಯ ಶೇಕಡ.2 ವ್ಯಯಿಸಿದೆ. ವಿಷನ್ ಡಾಕ್ಯುಮೆಂಟ್ ಪ್ರಕಾರ 14,527,91 ಕೋಟಿ ರೂ.ಅಗತ್ಯವಿದೆ ಇದರಿಂದ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಸಾಧ್ಯ ಎಂದು ಹೇಳಿದ್ದರೂ ಹೆಚ್ಚುವರಿ ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ತಂತ್ರಗಳನ್ನು ಖಚಿತಪಡಿಸಿಲ್ಲ ಎಂಬ ಅಂಶಗಳು ಕಂಡುಬAದಿವೆ.

ಸರಕಾರಿ ಶಾಲೆಗಳ ಬಗ್ಗೆ ರಾಜಕಾರಣಿಗಳಿಗೆ ಹಿತಾಸಕ್ತಿ ಕಡಿಮೆ.

ಶಿಕ್ಷಣ ಗುಣಮಟ್ಟ ಕುಸಿತದ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿರುವ ಸಾರ್ವಜನಿಕ ವಲಯವು ಹಲವು ಪ್ರಶ್ನೆಗಳನ್ನು, ಬೇಸರವನ್ನು ಸಹ ಮುಂದಿಟ್ಟಿದ್ದಾರೆ. ಆಡಳಿತದಲ್ಲಿ ಇರುವ ಕೆಲವು ಎಂಎಲ್‌ಎ’ಗಳು, ಎಂಪಿಗಳು ತಮ್ಮ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ ಹೊರತು, ಸರಕಾರಿ ಶಾಲೆಗಳು, ಕಾಲೇಜುಗಳ ಸಮಸ್ಯೆಗೆ ಪರಿಹಾರ ನೀಡುವ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ, ಹಾಗಿಯೂ ಪರಿಹಾರ ಒದಗಿಸದರೆ, ಅವರ ಸಂಸ್ಥೆಗಳಿಗೆ ಪ್ರವೇಶ ಸಂಖ್ಯೆ ಕಡಿಮೆ ಆಗಬಹುದು ಎಂಬ ದುರದ್ದೇಶ ಅವರದ್ದು ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಕಳಪೆ ಕೆಲಸ

2017-22ರ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆ” ಕುರಿತು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಬಗ್ಗೆ ಅಸಮಾದಾನ ವ್ಯಕ್ತಪಡಿಸಿದೆ. ಪಿಡಬ್ಲೂö್ಯಡಿ ಹಾಗೂ ಪಮಚಾಯತ್ ರಾಜ್ ಎಂಜಿನಿಯರಿAಗ್ ಇಲಾಖೆ ನಿರ್ಮಿಸಿದ ಬಹುತೇಕ ಶಾಲೆ ಮತ್ತು ಶೌಚಾಲಯಗಳು ಸರಿಯಾಗಿ ನಿರ್ವಹಣೆಯಾಗಿಲ್ಲ. ಅಲ್ಲದೇ ಕಳಪೆಯಾಗಿದೆ. ಸೋರುತ್ತಿರುವ ತರಗತಿ ಕೊಠಡಿಗಳು, ಗೋಡೆಗಳು, ಪ್ಲಾಸ್ಟರ್‌ಗಳು ಬೀಳುವ ಛಾವಣಿಗಳು ಇತ್ಯಾದಿಗಳು ಮಕ್ಕಳ ಕಲಿಕೆಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದೆ.

ಶೌಚಾಲಯ ಕೊರತೆ.

128 ಶಾಲೆಗಳಲ್ಲಿ ತಪಾಸಣೆ ನಡೆಸಿದಾಗ ಏಳು ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯವಿಲ್ಲ, 21 ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿಲ್ಲ, 22 ಶಾಲೆಗಳಲ್ಲಿ ಶೌಚಾಲಯದ ಬಳಿ ಕೈ ತೊಳೆಯುವ ವ್ಯವಸ್ಥೆ ಇಲ್ಲ. “ಶೌಚಾಲಯ ಸೌಲಭ್ಯಗಳ ಅನುಪಸ್ಥಿತಿ ಮತ್ತು ನಿರ್ವಹಣೆಯ ಕೊರತೆಯು ವಿದ್ಯಾರ್ಥಿಗಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದೆ. ಅನೈರ್ಮಲ್ಯ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿದೆ ಮತ್ತು ವಿದ್ಯಾರ್ಥಿಗಳ ಘನತೆ ಮತ್ತು ಸೌಕರ್ಯಗಳಿಗೆ ರಾಜಿ ಮಾಡುತ್ತದೆ” ಎಂದು ಸಿಎಜಿ ಹೇಳಿದೆ.

ಕ್ರೀಡೆ ಮತ್ತು ದೈಹಿಕ ಶಿಕ್ಷಣ.

ಸಮಗ್ರ ಶಿಕ್ಷಾ ಯೋಜನೆಯಡಿ, ಸರ್ಕಾರಿ ಶಾಲೆಗಳು ಕ್ರೀಡಾ ಸಲಕರಣೆಗಳ ವೆಚ್ಚಕ್ಕಾಗಿ ವಾರ್ಷಿಕ ಅನುದಾನವನ್ನು ಪಡೆಯುತ್ತವೆ. ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದಿರುವುದು ಲೆಕ್ಕ ಪರಿಶೋಧನೆಯಿಂದ ಕಂಡುಬAದಿದೆ. ಇನ್ನು 43,194 ಸರ್ಕಾರಿ ಶಾಲೆಗಳಲ್ಲಿ 19,799 ಶಾಲೆಗಳು (ಶೇ. 46) ಆಟದ ಮೈದಾನಗಳನ್ನು ಹೊಂದಿಲ್ಲ. ಆSಇಐ ನಿಂದ ನಡೆಸಲ್ಪಡುವ 90% ಶಾಲೆಗಳು ಗ್ರಂಥಾಲಯಗಳನ್ನು ಹೊಂದಿಲ್ಲ. “ಗ್ರಂಥಾಲಯದ ಅನುಪಸ್ಥಿತಿ ಮತ್ತು ಗ್ರಂಥಾಲಯದ ಅನುದಾನದ ಬಳಕೆಯಾಗದಿರುವುದು ವಿದ್ಯಾರ್ಥಿಗಳು ತಮ್ಮ ಓದುವ ಹವ್ಯಾಸ ಮತ್ತು ಸ್ವಯಂ ಕಲಿಕೆಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದರಿಂದ ವಂಚಿತರಾಗಿದ್ದಾರೆ” ಎಂದು ವರದಿ ಹೇಳಿದೆ.

ಹಳ್ಳಿಯಿಂದ ದೂರ.

ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್‌ನ ಭೂಗೋಳದ ವಿಶ್ಲೇಷಣೆ ಪ್ರಕಾರ 3,55,005 ಪ್ರಾಥಮಿಕ ಶಾಲೆಗಳು 1 ಕಿ.ಮೀ.(73%) ಉಳಿದ 1,29,952 (26%) ಪ್ರಾಥಮಿಕ ಶಾಲೆಗಳು 3 ಕಿಮೀ, 2,436 3 ರಿಂದ 5 ಕಿಮೀ ಒಳಗೆ ಮತ್ತು 536 5 ಕಿಮೀ ದೂರ ಪ್ರಾಥಮಿಕ ಶಾಲೆಗಳಿದೆ.

ಒಟ್ಟಾರೆ ವಾಸಸ್ಥಳದಿಂದ ಶಿಕ್ಷಣ ಸಂಸ್ಥೆಗಳಿಗೆ ಇರುವ ಅಂತರದ ಹೆಚ್ಚಳವು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಹಾಜರಾತಿ ಮತ್ತು ದಾಖಲಾತಿಯ ಮೇಲೆ ಪರಿಣಾಮ ಬೀರಿದೆ. ಮಕ್ಕಳ ದೀರ್ಘ ಪ್ರಯಾಣವು ದೈಹಿಕ ಮತ್ತು ಮಾನಸಿಕ ಆಯಾಸಕ್ಕೆ ಕಾರಣವಾಗಿದೆ ಎಂದು ಸಿಎಜಿ ಹೇಳಿದೆ

Share.
Leave A Reply

Exit mobile version