ನಂದೀಶ್ ಭದ್ರಾವತಿ ದಾವಣಗೆರೆ

ಎಸ್ಪಿ ರಿಷ್ಯಂತ್ ಈ ಹೆಸರು ಕೇಳಿದ್ರೆ ಸಾಕು ಆರೋಪಿಗಳ ಹೃದಯ ಧಸಕ್ ಎನ್ನುತ್ತದೆ..ಪ್ರಾಮಾಣಿಕ, ಸಿಬ್ಬಂದಿಗಳ ಕಷ್ಟಕ್ಕೆ ಆಗುವ ಅಧಿಕಾರಿಗಳಲ್ಲಿ ಇವರು ಒಬ್ಬರು. ಮಂಗಳೂರಿನಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿದ ಇವರು ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಬಾಗಲಕೋಟೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡದ್ದಾರೆ. ಪ್ರತಿಯೊಂದು ಜಿಲ್ಲೆ ವಿಶಿಷ್ಟವಾಗಿದೆ. ಎಲ್ಲಿಯೇ ಆಗಲಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವುದು ನನ್ನ ಮೊದಲ ಆದ್ಯತೆ ಎಂಬುವುದು ಇವರ ವಾದ. ಹಾಗಾದ್ರೆ ಅವರ ಸಿಬ್ಬಂದಿಗಳು, ಅವರ ಅನುಯಾಯಿಗಳು ಏನು ಹೇಳುತ್ತಾರೆ. ನೀವೇ ಓದಿ.

ಕರ್ನಾಟಕ ಪೊಲೀಸ್ ಇಲಾಖೆ ಅನೇಕ ಖಡಕ್ ಐಪಿಎಸ್ ಆಫೀಸರ್ ಗಳನ್ನ ಕಂಡಿದೆ. ಅಂಥ ದಕ್ಷ ಅಧಿಕಾರಿಗಳಲ್ಲಿ ಸಿ.ಬಿ.ರಿಷ್ಯಂತ್ ಕೂಡ ಒಬ್ಬರು. ಈ ಸಾಕ್ಷಿಗೆ ಕಳೆದ ಹನ್ನೊಂದು ವರ್ಷಗಳ ನಿಮ್ಮ ಸರ್ವೀಸ್ ನ ಟ್ರ್ಯಾಕ್ ರೆಕಾರ್ಡ್ ಸಾಕು.ನೀವು ಎಲ್ಲೆಲ್ಲಿ ಸೇವೆ ಸಲ್ಲಿಸಿದ್ದೀರೋ ಅಲ್ಲಿ ನಿಮ್ಮ ಅಪ್ರತಿಮ ಹೆಜ್ಜೆ ಗುರುತು ಯಾರೂ ಅಳಿಸಲಾಗದು. ಹಾಗೇ ದಾವಣಗೆರೆ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾಲಿಟ್ಟ ದಿನದಿಂದ ನೀವು ಸಮಾಜ ಘಾತುಕ ಎಲಿಮೆಂಟುಗಳಿಗೆ ನಡುಕ ಹುಟ್ಟಿಸಿದವರು. ಇದು ನಿಮ್ಮದೇ ಆದ ಒಂದು ಡಿಫರೆಂಟ್ ಪೊಲೀಸಿಂಗ್ ಸ್ಟೈಲ್ ಕೂಡ. ನೀವು ಲಾ ಬ್ರೇಕರ್ಸ್ ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳೇ ಆಗಿರಲಿ. ಯಾರನ್ನೂ ದಯೆ ದಾಕ್ಷಿಣ್ಯ ಇಲ್ಲದೇ ಹೆಡೆಮುರಿ ಕಟ್ಟಿದವರು. 

ನಾನು ದಾವಣಗೆರೆ ಜಿಲ್ಲೆಯಲ್ಲಿ ಖುದ್ದಾಗಿ ನಿಮ್ಮ ಸೇವಾ ವೈಖರಿ ಕಂಡು ಅಚ್ವರಿ ಪಟ್ಟವನು. ನಿಮ್ಮಂಥ ಒಬ್ಬ ನಿಷ್ಠಾವಂತ, ಪ್ರಾಮಾಣಿಕ, ಕಾನೂನು ರಕ್ಷಕ ಅಧಿಕಾರಿಯ ಸ್ನೇಹ ದಕ್ಕಿದ್ದು ನನ್ನ ಪುಣ್ಯ ಎಂದೇ ಭಾವಿಸುವೆ. ತಾವೀಗ ಕಡಲ ತೀರದ ನಗರಿ ಮಂಗಳೂರು ಎಸ್ಪಿಯಾಗಿ ಅಲ್ಲಿನ ಪಾತಕ ಲೋಕದ ಪಾಲಿಗೆ ಸಿಂಹ ಸ್ವಪ್ನವಾಗಿದ್ದೀರಿ.

ಸಾರ್ , ನಾಳೆ ಏಪ್ರಿಲ್ 5 ನಿಮ್ಮ ಜನ್ಮದಿನ. ನೀವು ದಾವಣಗೆರೆಯಲ್ಲಿ ಇದ್ದ ಆ ಎರಡು ವರ್ಷದ ದಿನಗಳು ನನ್ನ ಮಟ್ಟಿಗೆ ಮರೆಯಲಾಗದ ಕ್ಷಣಗಳು. ನಾನು ಕಂಡಂತೆ, ನೀವು ಒಬ್ಬ ಗುಡ್ ಪೊಲೀಸ್ ಆಫೀಸರ್ ಹೇಗೋ  ಹಾಗೇ ಒಬ್ಬ ಜಿನೈನ್ ಫ್ಯಾಮಿಲಿ ಮ್ಯಾನ್ ಕೂಡ. ನಿಮ್ಮ ಧರ್ಮಪತ್ನಿ ಭಾರತಿ ಮೇಡಂ ಕಿಂಚಿತ್ತೂ ಅಹಂ ಇಲ್ಲದ ಸರಳ ವ್ಯಕ್ತಿತ್ವದ ಸಂಗಾತಿ.  ನಿಮ್ಮ ಇಬ್ಬರು ಮಕ್ಕಳು ಕೂಡ ಸಂಸ್ಕಾರವಂತರು. ನನಗೆ ನೀವೊಬ್ಬ ಅಧಿಕಾರಿಯಾಗಿ ಮಾತ್ರವಲ್ಲ, ಶುಭ್ರ ಮನಸಿನ ಒಬ್ಬ ಹೃದಯವಂತ ಸ್ನೇಹಿತರಾಗಿದ್ದಿರಿ. 

ನನ್ನನ್ನು ಒಬ್ಬ ಸಹೋದರನಂತೆ ಕಂಡಿದ್ದೀರಿ. ಅಂಥಾದ್ದೊಂದು ಸೋದರತ್ವದ ಬಾಂಧವ್ಯ ನಮ್ಮಲ್ಲಿತ್ತು. ನಿಮ್ಮ ಈ ಪ್ರೀತಿ, ಬೆಚ್ಚಗಿನ ಸ್ನೇಹದ ಒಡನಾಟದ ದಿನಮಾನಗಳನ್ನ ಯಾವತ್ತಿಗೂ ಮರೆಯಲಾರೆ. ಹಾಗೆ ಮರೆಯಲಾಗದು. ನಿಮ್ಮ ನಿಷ್ಕಳಂಕ ವ್ಯಕ್ತಿತ್ವದ ಈ ಸ್ನೇಹ, ಎಂದಿಗೂ ಮುಕ್ಕಾಗದೇ ನಿರಂತರವಾಗಿರಲಿ… ನಿಮಗೆ ತುಂಬು ಹೃದಯದ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಶಕ್ತಿ, ಸಾಮರ್ಥ್ಯಗಳೇ ನಿಮಗೆ ಅತ್ಯುನ್ನತ ಸ್ಥಾನಮಾನ, ಘನತೆ, ಗೌರವ, ತಂದು ಕೊಡಲಿ ಎಂದು ಮನಸಾರೆ ಹಾರೈಸುವೆ.

ಲಯನ್ ವಾಸುದೇವ ರಾಯ್ಕರ್, ಡಿಸ್ಟಿಕ್ ಕೋ ಆರ್ಡನೇಟರ್- ಜಿಲ್ಲೆ 317-c,ಅಧ್ಯಕ್ಷರು ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟ.

ರಿಷ್ಯಂತ್, ಐಪಿಎಸ್ ಅಧಿಕಾರಿಗಳಲ್ಲಿ ಟಫ್ ಎಂದು ಗುರುತಿಸಿಕೊಂಡಿದ್ರು, ಪ್ರಶಾಂತ ಮನಸ್ಥಿತಿಯ ವ್ಯಕ್ತಿತ್ವ. ಪ್ರಾಮಾಣಿಕತೆ ಪರಧಿ ಮೀರಿದನ್ನೂ ನಾವೆಂದೂ ಕಂಡಿಲ್ಲ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿಯಲಿಲ್ಲ. ಅನೈತಿಕ, ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ರು. ರೈತರಿಂದ ಬೆಳೆ ಖರೀದಿಸಿ ಮೋಸ ಮಾಡಿ  ತಪ್ಪಿಸಿಕೊಂಡಿದ್ರು ಕೆಲವರು. ಮೋಸಗಾರರ ಹೆಡೆಮುರಿ ಕಟ್ಟಿ ರೈತರ ಹಣ ವಸೂಲು ಮಾಡಿಸಿಕೊಟ್ಟಿದ್ದನ್ನು ಯಾರೂ ಮರೆತಿಲ್ಲ. ಅತ್ಯಂತ ಕ್ರಿಟಿಕಲ್ ಎಂಬಂಥ ಪರಿಸ್ಥಿತಿಯಲ್ಲೂ ಕೂಲಾಗಿ ಕಾರ್ಯನಿರ್ವಹಿಸಿದ್ರು. ಮಾನವೀಯ ಮೌಲ್ಯವುಳ್ಳ ಅಧಿಕಾರಿ ಎಂದ್ರೆ ತಪ್ಪಾಗಲ್ಲ….

ಸುರೇಶ್, ಪತ್ರಕರ್ತ, ದಾವಣಗೆರೆ.

ಎಸ್ಪಿ ರಿಷ್ಯಂತ್ ಸರ್…ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದು, ತನ್ನ ಸಹದ್ಯೋಗಿಗಳ ಬಗ್ಗೆ ಹೆಚ್ಚು ಕಳಕಳಿ ಹೊಂದಿದ್ದರು. ತನ್ನ ಅಧೀನ ಅಧಿಕಾರಿ, ಸಿಬ್ಬಂದಿಗಳ ಬಗ್ಗೆ ಇರುವ ನೈಜ ಕಳಕಳಿ ಇದೆ. ಇನ್ನು ಸಿಬ್ಬಂದಿಗಳನ್ನು ಸ್ನೇಹಿತರಂತೆ ನೋಡಿಕೊಂಡು ಕೆಲಸ ತೆಗೆಸುವ ರೀತಿ ಅನನ್ಯ. ಇವರು ಇತರೆ ಅಧಿಕಾರಿಗಳಿಗೆ ಆದರ್ಶ ಪ್ರಾಯಾರಾಗಿದ್ದಾರೆ. ಅವರು ಕೆಲಸ ಮಾಡುವ ರೀತಿ ವಿಶಿಷ್ಟವಾಗಿದ್ದು. ಅನುಭೂತಿ, ಅನುಭಾವ ವಿಶಿಷ್ಟವಾಗಿದೆ. ಆದ್ದರಿಂದ ಇಂತಹ ಅಧಿಕಾರಿಗೆ ಆರೋಗ್ಯ, ಆಯುಷ್ಯ ಕೊಡಲಿ. ಹ್ಯಾಪಿ ಬರ್ತಡೇ ಸರ್.

ಪ್ರಕಾಶ್ , ಡಿಆರ್ ಡಿಎಸ್ಪಿ, ಶಿವಮೊಗ್ಗ

ರಿಷ್ಯಂತ್ ಸರ್ ದಾವಣಗೆರೆಯಲ್ಲಿ ಇದ್ದಾಗ ಸಾಕಷ್ಟು ಪ್ರಕರಣಗಳನ್ನು ಭೇದಿಸಿದ್ದೇವೆ. ಕೋಟಿಗಟ್ಟಲೇ ಮೆಕ್ಕೆಜೋಳ ಹಣ ವಾಪಸ್, ಮರಳು ದಂಧೆ ಕೋರ ಸಿದ್ದಕ್ಕಿ ಪ್ರಕರಣ ಯಶಸ್ವಿಯಾಗಿ ಮುಗಿಸಿದೇವು. ರಿಷ್ಯಂತ್ ಸರ್  ಮಹಾನ್ ಸಹಾನುಭೂತಿ, ಕಾಳಜಿಯುಳ್ಳ ಸ್ವಭಾವ ಮತ್ತು ಜನರೊಂದಿಗೆ ಬೆರೆಯುವ ಉತ್ತಮ ವ್ಯಕ್ತಿ. ದೇವರು ನೂರ್ಕಾಲ ಚೆನ್ನಾಗಿ ಇಟ್ಟಿರಲಿ

—ಬಿ.ಎಸ್.ಬಸವರಾಜ್, ಡಿಎಸ್ಪಿ, ಧಾರವಾಡ

 ನಮ್ಮ ನೆಚ್ಚಿನ ಪೊಲೀಸ್ ಅಧಿಕಾರಿಗಳಾದ ಶ್ರೀ ರಿಷ್ಯಂತ್ ಐಪಿಎಸ್ ಸರ್ ರವರು ದಕ್ಷ ಪೊಲೀಸ್ ಅಧಿಕಾರಿ ಹಾಗೂ ಸರಳ, ಸಜ್ಜನಿಕೆಯ ವ್ಯಕ್ತಿ, ನೊಂದವರಿಗೆ ನೆರವು ನೀಡುವ ಕಾರ್ಯದಲ್ಲಿ ಮೊದಲಿಗರು… ಅವರ ಜನುಮ ದಿನಕ್ಕೆ ಹೃದಯಪೂರ್ವಕ ಶುಭಾಶಯಗಳನ್ನು ಕೋರುತ್ತಾ  ಅವರಿಗೆ ಆಯುಷ್ಯ ಆರೋಗ್ಯ ಇನ್ನೂ ಹೆಚ್ಚು ಹೆಚ್ಚು ಜನ ಸೇವೆಯಲ್ಲಿ ತಮ್ಮನ್ನು ವಿಭಿನ್ನ ಅವಕಾಶಗಳು ಲಭಿಸಲಿ, ಅವರ ಕುಟುಂಬಕ್ಕೂ ದೇವರ ಆಶೀರ್ವಾದ ಸದಾ ಇರಲಿ ಎಂದು ಈ ಮೂಲಕ ಕೋರುತ್ತೇನೆ.

ಪ್ರಶಾಂತ್ ಕುಮಾರ್, ಪೊಲೀಸ್ ಸಿಬ್ಬಂದಿ, ದಾವಣಗೆರೆ

 ರಿಷ್ಯಂತ್ ಸರ್ ಒಬ್ಬ ಉತ್ತಮ ಅಧಿಕಾರಿಯಾಗಿದ್ದು, ನಾನು ನೋಡಿದ ಅಧಿಕಾರಿಗಳಲ್ಲಿ ಇವರು ಕೂಡ ಒಬ್ಬರು. ಮೈಸೂರಿನಲ್ಲಿ ಕೊರೊನಾ ಸಮಯದಲ್ಲಿ ಜೀವ ಪಣಕ್ಕಿಟ್ಟು ಸಾಕಷ್ಟು ಕೆಲಸ ಮಾಡಿದ್ದಾರೆ.

ಪ್ರತಿಯೊಂದು ಸಮಸ್ಯೆಯನ್ನು ತಾಳ್ಮೆಯಿಂದ ಕೇಳುತ್ತಾರೆ. ಸ್ಥಳದಲ್ಲಿಯೇ ಪರಿಹಾರ ನೀಡುತ್ತಾರೆ. ಪ್ರತಿಯೊಂದು ವಿಷಯದಲ್ಲೂ ನಿಪುಣರು, ಸ್ಪಷ್ಟ, ನೇರ ನುಡಿ ಗೂಂಡಾ ಗಳಿಗೆ ಸಿಂಹ ಸಪ್ನದಂತೆ ಎಲ್ಲಾ ಮಕ್ಕಳಿಗೂ ಅಚ್ಚುಮೆಚ್ಚಿನ ಅಧಿಕಾರಿ ಯಾಗಿದ್ದಾರೆ.

ಇಂತಹ ಅಪರೂಪದ ದಕ್ಷ ಮತ್ತು ನಿಷ್ಪಕ್ಷಪಾತ ಅಧಿಕಾರಿ ರವರಿಗೆ  ಹುಟ್ಟು ಹಬ್ಬದ ಶುಭಾಶಯಗಳು. ದೇವರು ನಿಮಗೂ ನಿಮ್ಮ ಕುಟುಂಬದವರಿಗೂ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ…..

ಸುಭಾಸ್ ಆರ್ ಶೆಟ್ಟಿ, ನ್ಯೂಸ್ ಪೇಪರ್ಸ್ ಅಸೋಸಿಯೇಷನ್ of ಇಂಡಿಯಾ  ಕರ್ನಾಟಕ ರಾಜ್ಯದ ಉಪ ಕಾರ್ಯದರ್ಶಿ  ಪೊಲೀಸ್ ವಾರ್ತೆ ಪತ್ರಿಕೆ ಯ ಪ್ರಧಾನ ಸಂಪಾದಕರು

ಜನರ ಸಮಸ್ಯೆಗಳನ್ನು ಅತ್ಯಂತ ಸಮಾಧಾನದಿಂದ ಆಲಿಸುವ ಅಲ್ಲದೆ  ಅಧಿಕಾರಿಗಳಿಗೆ ಅತ್ಯಂತ ಸಮಾಧಾನದಿಂದ ಮಾರ್ಗದರ್ಶನ ಮಾಡುವ ಪೊಲೀಸ್ ಇಲಾಖೆಯಲ್ಲಿ  ಅಪರೂಪದ ಪ್ರಬುದ್ಧ ಅಧಿಕಾರಿ.

.ಮಲ್ಲೇಶ್ , ದಾವಣಗೆರೆ  ನಗರ ಡಿಎಸ್ಪಿ

ಜೀವನದಲ್ಲಿ ಯಾವುದೇ ಸಂದರ್ಭದಲ್ಲೂ ಹೊಂದಾಣಿಕೆ ಮಾಡಿಕೊಳ್ಳದೇ, ನೇರ ನಿಷ್ಟೂರ ಹಾಗೂ ಪ್ರಾಮಾಣಿಕವಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ನ್ಯಾಯ ಒದಗಿಸುವಂತಹ ಸಮಾಜಮುಖಿ ವ್ಯಕ್ತಿತ್ವ ಹೊಂದಿರುವ ಸದಾ ಹಸನ್ಮುಖಿಗಳಾದ ಮತ್ತು ಸದಾ ಕಾಲವೂ ಸಹ ಇಂತಹ ವ್ಯಕ್ತಿಯ ಅದೀನದಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಹಂಬಲಿಸುವ ಮನಸ್ಥಿತಿ ಹುಟ್ಟು ಹಾಕಿದ ನಾಡು ಕಂಡ ಅಮೂಲ್ಯ  ರತ್ನರಾದ ಶ್ರೀ ಸಿ.ಬಿ ರಿಷ್ಯಂತ್ ಐಪಿಎಸ್ ಸಾಹೇಬರಿಗೆ ಜನ್ಮ ದಿನದ ಶುಭಾಷಯಗಳು, ನೂರು ಕಾಲ ಸುಖ ಸಂತೋಷದಿಂದ ಬಾಳಲೆಂದು ಭಗವಂತನಲ್ಲಿ ಪ್ರಾರ್ಥನೆ

ದೇವರಾಜ್ ಸಂಗೇನಹಳ್ಳಿ , ಪೊಲೀಸ್ ಕಾನ್ಸ್ ಟೇಬಲ್, ದಾವಣಗೆರೆ

 ಪೊಲೀಸ್ ಅಧಿಕಾರಿ ಎಂದರೆ ಪುಸ್ತಕ ಭಂಡಾರ ವಿದ್ದಂತೆ, ನಮ್ಮ ದಾವಣಗೆರೆಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ರಿಷ್ಯಂತ್ ಸರ್ ರವರು  ಹಿರಿಯರು,ಕಿರಿಯರು ,ಮತ್ತು ಮಹಿಳೆಯರಿಗೆ ತುಂಬಾ  ಗೌರವ ಕೊಡುತ್ತಿದ್ದರು,   ಕಳ್ಳತನ,ಇಸ್ಪೀಟ್, ಜೈಜಾಟ, ಮಹಿಳೆಯರಿಗೆ ಮತ್ತು ಮಕ್ಕಳ ಮೇಲಿನ  ದೌರ್ಜನ್ಯಗಳು  ಕಡಿಮೆಯಾಗಿದ್ದವು, ಹಾಗಾಗಿ ದಾವಣಗೆರೆ ಜನತೆ ಕೂಡ ನೆಮ್ಮದಿ ಜೀವನ ಸಾಗಿಸುತ್ತಿದ್ದರು, ದಾವಣಗೆರೆ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು ತಿಳಿಸುತ್ತಾ ದೇವರು,ಆರೋಗ್ಯ, ಆಯಸ್ಸು, ನನ್ನ ಹೆಚ್ಚಿನ ಅಧಿಕಾರ ನೀಡಲೆಂದು ಹಾರೈಸುತ್ತೇವೆ.

ಚೇತನ ಶಿವಕುಮಾರ್ ಪ್ರೇರಣ ಸಂಸ್ಥೆ ಸಂಸ್ಥಾಪಕರು ಸಮಾಜ ಸೇವಕರು ದಾವಣಗೆರೆ.

ನಮ್ಮ ಪೊಲೀಸ್ ಇಲಾಖೆಯಲ್ಲಿ ನಾವು ಕಂಡಂತಹ ದಕ್ಷ ಹಾಗೂ ಪ್ರಾಮಾಣಿಕ ನಿಷ್ಠಾವಂತ ಅಧಿಕಾರಿಗಳ ಸಾಲಿನಲ್ಲಿ ಸಿಬಿ ರಿಶಂತ್  ಸಾಹೇಬರು ಸಹ ಅಗ್ರಸ್ಥಾನದಲ್ಲಿ ಸೇರಿಕೊಳ್ಳುತ್ತಾರೆ. ದಯೆ ಕರುಣೆ ಸಾಹೇಬರ ಮಾತೃ ಹೃದಯ ಯಾವುದೇ ಕಷ್ಟ ಕಾರ್ಪಣ್ಯಗಳಿಗೆ ಬೇಗನೆ ಸ್ಪಂದಿಸುವ ತಾಯಿ ಹೃದಯ ಹಾಗೂ ನೊಂದು ಬಂದ ಬಡವರ ಶೋಷಿತರ ಕಣ್ಣೀರುವರೆಸುವ ಮೇರುವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿ‌.   ಯಾವೊಬ್ಬ ವ್ಯಕ್ತಿಯು ಸಹ ಅವರೊಂದಿಗೆ ಕೆಲಸ ಮಾಡಿದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ಧೈರ್ಯ ಸಾಹಸ ಹಾಗೂ ಯಾವುದಕ್ಕೂ ಅಂಜದ ವ್ಯಕ್ತಿತ್ವ ಮೇಲು-ಕೀಳು ನಾನು ಉನ್ನತ ಅಧಿಕಾರಿ ಎಂಬ ಭಾವನೆ ಅವರ ಮನಸ್ಸಿನಲ್ಲಿ ಕನಸಿನಲ್ಲಿ ಸಹ ಬರುತ್ತಿರಲಿಲ್ಲ. ಎಲ್ಲರೂ ಒಂದೇ ಎಂಬ ಭಾವನೆ ಹತ್ತಿರದಲ್ಲಿ ಕಂಡಂತಹ  ತಾಳ್ಮೆ ಯಾವ ಒಬ್ಬ ವ್ಯಕ್ತಿಗೂ ಸಹ ಬರುವುದಿಲ್ಲ.

.-ಟಿ.ವಿ.ದೇವರಾಜ್, ಮಣಿಪಾಲ್ ಸಿಪಿಐ.

….

 ನಾಡಿನಲ್ಲಿ ಬೆರಳೆಣಿಕೆಯಷ್ಟು ಟಫ್ ಕಾಪ್ ಪೋಲಿಸ್ ಅಧಿಕಾರಿಗಳಲ್ಲೊಬ್ಬರಾದ ದಾವಣಗೆರೆ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ಜನಮೆಚ್ಚಿದ ಪೋಲಿಸ್ ಅಧಿಕಾರಿಯೆಂದ ಹೆಸರಾಗಿದ್ದ ರಿಷ್ಯಂತ್ ರವರು ಕಾನೂನಿನ ಅರಿವು ಮೂಡಿಸಿದ್ದು ಪ್ರೀತಿಯಿಂದಲೇ ಎಂದು ದಾವಣಗೆರೆ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಅವರ ಕಾರ್ಯವನ್ನ ಹಾಡಿ ಹೊಗಳಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಸಮಾಜಘಾತಕ ಶಕ್ತಿಗಳನ್ನು ಮಟ್ಡಹಾಕುವಲ್ಲಿ ಯಶಸ್ವಿಯಾಗಿದ್ದಾರೆ.ಅದೇರೀತಿ ಸಮಾಜ ಪಿಡುಗುಗಳಾದ ಮಟ್ಕಾ ಇಸ್ಪೀಟು ಜೂಜುಕೋರರನ್ನ ಮಟ್ಟಹಾಕಿದ್ದರು.ಜಿಲ್ಲೆ ಶಾಂತಿಯುತವಾಗಿರಲು ಹಗಲಿರುಳು ಶ್ರಮಸಿದ ಕೀರ್ತಿ ಮಾನ್ಯ ರಿಷ್ಂತ್ ರವರಿಗೆ ಸಲ್ಲುತ್ತದೆ.

ದಾವಣಗೆರೆ ಪೋಲಿಸ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯದಂತೆ ದಿಟ್ಟಕ್ರಮ ಕೈಗೊಂಡ ಹೆಗ್ಗಳಿಕೆ ರಿಷ್ಂತ್ ರವರದ್ದು.

ಅವರು ವರ್ಗಾವಣೆಗೊಂಡಾಗ ಜಿಲ್ಲೆಯ ಜನತೆ  ದುಃಖದಿಂದಲೇ ಆನಂದಭಾಷ್ಪವವಾಗಿ ಇಂತಹ ಪ್ರಾಮಾಣಿಕ ಅಧಿಕಾರಿಗಳ ಸೇವೆ ನಾಡಿನಾದ್ಯಂತ ಸಿಗಲಿ ಎಂದು ಶುಭ ಹಾರೈಸಿದ್ದು ಮಾತ್ರ ಯಾರೂ ಮರೆಯುವಂತಿಲ್ಲ .ಇಂದಿನ ಯುವ ಪೀಳಿಗೆಗೆ ಮಾದರಿ ಅಧಿಕಾರಿ ಶ್ರೀ ರಿಷ್ಯಂತ್ ರವರು.

*ಬಾಡದ ಆನಂದರಾಜ್* ಜಿಲ್ಲಾಧ್ಯಕ್ಷರು ಶೋಷಿತ ವರ್ಗಗಳ ಒಕ್ಕೂಟ. ದಾವಣಗೆರೆ

Share.
Leave A Reply

Exit mobile version