ದಾವಣಗೆರೆ : ಎರಡನೇ ಹಂತದ ಮತದಾನಕ್ಕೆ ದಿನ ಬಾಕಿ ಉಳಿದಿವೆ. ಉತ್ತರ ಕರ್ನಾಟಕದಲ್ಲಿ ಬಿಡು ಬಿಟ್ಟಿರುವ ಕಾಂಗ್ರೆಸ್ ಬಿಜೆಪಿ ಹೊಸ ಹೊಸ ದಾಳ ಪ್ರಯೋಗಿಸಿ, ಭರ್ಜರಿ ಫ್ಲಾನ್ ಮಾಡಿ ಜನ ಸೆಳೆಯಲು ಸಜ್ಜಾಗಿದ್ದಾರೆ.
ಹದಿನಾಲ್ಕು ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮತ್ತೊಮ್ಮೆ ಮೇಲುಗೈ ಸಾಧಿಸುತ್ತಾ ಬಿಜೆಪಿ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೂರು ತಂತ್ರಗಾರಿಕೆ ವರ್ಕ್ಔಟ್ ಆಗುತ್ತಾ? ಗ್ಯಾರಂಟಿ ಮುಂದೆ ಮೋದಿ ಅಲೆ ಸಿಗುತ್ತಾ ಬೆಲೆ..? ರೈತರ ಅದಾನಿ, ಅಂಬಾನಿ ಉದ್ದಾರ ಆಗಿದ್ದಾರೆ ಅಂತ ಸವದಿ ಹೇಳಿದ್ಯಾಕೆ.?
ಉತ್ತರ ಕರ್ನಾಟಕದಲ್ಲಿ ರಣರಣ ಬಿಸಿಲು, ಜೊತೆಗೆ ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ.. ಅದು ಹೇಳಿ ಕೇಳಿ ಉತ್ತರ, ಮಧ್ಯ, ಕಲ್ಯಾಣ ಕರ್ನಾಟಕ ಬಿಜೆಪಿ ಭದ್ರಕೋಟೆಯಾಗಿದ್ದು, ಕದನಕಣದಲ್ಲಿ ಗೆಲುವಿನ ಉತ್ಸಾಹದಲ್ಲಿರುವ ಬಿಜೆಪಿಯನ್ನ ಖೆಡ್ಡಕ್ಕೆ ಕೆಡವಬೇಕು ಅಂತ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್, ಐದು ಗ್ಯಾರಂಟಿ ಪ್ರಯೋಗಿಸಿ ಮತಬೇಟೆ ಆರಂಭಿಸಿದೆ..
ಗ್ಯಾರಂಟಿಯಿಂದ ಎಲ್ಲರಿಗೂ ಅನುಕೂಲವಾಗಿದೆ.. ಬಸ್, ವಿದ್ಯುತ್, ಅಕ್ಕಿ, ಮಹಿಳೆಯರಿಗೆ ಆರ್ಥಿಕ ಸಹಾಯದಿಂದ ಬಡವರಿಗೆ ಅನುಕೂಲವಾಗಿದೆ. ಹೀಗಾಗಿ, ಕೈಗೆ ಬೆಂಬಲಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ. ಆದ್ರೆ, 2019ರ ಲೋಕಸಭೆ ಈ 14 ಲೋಕಸಭೆ ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನ ಗೆಲ್ಲದ ಕಾಂಗ್ರೆಸ್, ಈ ಬಾರಿ ಕನಿಷ್ಠ ಹತ್ತು ಸೀಟು ಗೆಲ್ಲುವ ಲೆಕ್ಕಾಚಾರ ಇಟ್ಟುಕೊಂಡು ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದೆ.
ಇನ್ನ ಉತ್ತರ, ಮಧ್ಯ ಕರ್ನಾಟಕ ಬಿಜೆಪಿ ಭದ್ರಕೋಟೆ.. ಈ ಬಲಿಷ್ಠ ಕೋಟೆಯಲ್ಲಿ ಮತ್ತೊಮ್ಮೆ ಗೆಲುವಿನ ಬಾವುಟ ಹಾರಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಜ್ಜಾಗಿದ್ದಾರೆ.. ಅಸಮರ್ಪಕ ಗ್ಯಾರಂಟಿ, ಹದಗೆಟ್ಟ ಕಾನೂನು ಸುವ್ಯವಸ್ಥೆ, ಓಲೈಕೆ ರಾಜಕಾರಣ, ನೇಹಾ ಹತ್ಯೆ ಪ್ರಕರಣದ ವಿಷಯವಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ..
ಜೊತೆಗೆ 2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು… ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ದಿಗ್ವಿಜಯ ಸಾಧಿಸಿತ್ತು..ತನ್ನದೇ ಹಾಲಿ ಸಂಸದರು ಇರುವುದರಿಂದ 10ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ..
ಪೈಪೋಟಿಯಿರುವ ಕ್ಷೇತ್ರಗಳಾದ ದಾವಣಗೆರೆ, ಬೆಳಗಾವಿ, ಕೊಪ್ಪಳ, ಬಳ್ಳಾರಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭರ್ಜರಿ ಪ್ರಚಾರ ನಡೆಸಿದ್ದಾರೆ ಜೊತೆಗೆ ಉತ್ತರ ಕರ್ನಾಟಕದಲ್ಲಿ ಪಿಎಂ ಮೋದಿ ಅವರ ಬಿರುಸಿನ ಪ್ರಚಾರ ನಡೆಸಿರುವುದು ಬಿಜೆಪಿಗೆ ಹುಮ್ಮಸ್ಸು ಹೆಚ್ಚಿಸಿದೆ..
ಮತ್ತೊಂದು ಕಡೆ ಕಾಂಗ್ರೆಸ್ ನಾಯಕ ಲಕ್ಷ್ಮಣ್ ಸವದಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದ ಮೋದಿ ಅವರು ಏನ್ ಮಾಡಿಲ್ಲ.. ಬದಲಿಗೆ ಉದ್ಯಮಿಗಳಾದ ಅದಾನಿ, ಅಂಬಾನಿಗೆ ಲಾಭ ಮಾಡಿಕೊಟ್ಟಿದ್ದಾರೆ ಅಂತ ಟಾಂಗ್ ಕೊಟ್ಟಿದ್ದಾರೆ.ಒಟ್ಟಾರೆ.. ಬಿಜೆಪಿ ವಿಜಯ ದುಂದುಬಿ ಮೊಳಗಸಲು ಸಜ್ಜಾಗಿದೆ..