ಶಿವಮೊಗ್ಗ :  ಉಪ್ಪಾರ ಜನಾಂಗದ ಆರ್ಥಿಕ ಸಬಲೀಕರಣಕ್ಕಾಗಿ ಜಿಲ್ಲಾಮಟ್ಟದಲ್ಲಿ ಶ್ರೀ ಭಗೀರಥ ಸಹಕಾರ ಸಂಘ ನಿಯಮಿತವನ್ನು ಸ್ಥಾಪಿಸಿದ್ದು, ಇದರ ಉದ್ಘಾಟನಾ ಸಮಾರಂಭ ಸೆ.14ರ ಬೆಳಿಗ್ಗೆ 10ಗಂಟೆಗೆ ಕುವೆಂಪು ರಂಗಮAದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್.ಮಂಜುನಾಥ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘಕ್ಕೆ ಈಗಾಗಲೇ 715 ಸದಸ್ಯತ್ವ ಹೊಂದಿರುವ ಸಂಘ 15ಲಕ್ಷ ಮುಂಗಡ ಹಣ ಸಂಗ್ರಹಿಸಿದೆ. 1250 ರೂ. ಷೇರು ಶುಲ್ಕವಿದೆ. ಮುಂದಿನ 2ವರ್ಷದಲ್ಲಿ 5ಸಾವಿರ ಸದಸ್ಯತ್ವ ಪಡೆಯಲು ಗುರಿ ಹೊಂದಲಾಗಿದೆ. ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ವಾಹನ ಹಾಗೂ ಜಾಮೀನು ಸಾಲವನ್ನು ನೀಡಲಾಗುವುದು ಎಂದರು.

ಸಮಾಜದ ಕುಲಗುರುಗಳಾದ ಶ್ರೀ ಪುರುಷೋತ್ತಮನಂದ ಪುರಿ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸಂಘ ಉದ್ಘಾಟಿಸಲಿದ್ದಾರೆ. ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಎಂಐಡಿಬಿ ಆರ್.ಎಂ.ಮAಜುನಾಥ ಗೌಡ ಸಂಘದ ಸದಸ್ಯರುಗಳಿಗೆ ಷೇರುಪತ್ರ ವಿತರಿಸಲಿದ್ದಾರೆ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ. ಮದುವೆ ಆಗಿ 50 ವರ್ಷ ಪೂರೈಸಿರುವ 22 ಸಮಾಜದ ದಂಪತಿಗಳನ್ನು ಸುವರ್ಣದಾಂಪತ್ಯ ಸಂಭ್ರಮದ ಅಂಗವಾಗಿ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಹೆಚ್.ಬಲ್ಲಪ್ಪನವರು ಸನ್ಮಾನಿಸಲ್ಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕ ಪುಟ್ಟರಂಗಶೆಟ್ಟಿ, ಬಿ.ವೈ.ವಿಜಯೇಂದ್ರ, ಎಸ್.ಎನ್.ಚನ್ನಬಸಪ್ಪ, ಶಾರದಮರನಾಯ್ಕ, ಬಿ.ಕೆ.ಸಂಗಮೇಶ್, ಬೆಳ್ಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ, ಬಲ್ಕಿಶ್ ಬಾನು, ಡಿ.ಎಸ್.ಅರುಣ್, ಡಾ|| ಧನಂಜಯ ಸರ್ಜಿ, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಭಾಗವಹಿಸಲಿದ್ದಾರೆ ಎಂದರು.

ಸಮಾಜದ ಹೆಮ್ಮೆಯ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ|| ಕೆ.ಎಸ್.ರವೀಂದ್ರನಾಥ್, ಗುಲ್ಬರ್ಗಾ ಬಂಧೀಖಾನೆ ಮುಖ್ಯ ಅಧೀಕ್ಷಕ ಡಾ||ರಂಗನಾಥ್, ತುಮಕೂರು ಜಿಲ್ಲಾ ರಕ್ಷಣಾಧಿಕಾರಿ ಕೆ.ವಿ.ಅಶೋಕ್ ವೆಂಕಟ್, ಕರ್ನಾಟಕ ರಾಜ್ಯ ಹಿಂದುಳಿದ ಅಯೋಗದ ಮಾಜಿ ಸದಸ್ಯ ಕೆ.ಎನ್.ಲಿಂಗಪ್ಪ ಮೈಸೂರು ವಾಣ ಜ್ಯ ತೆರಿಗೆ ನಿವೃತ್ತ ಆಯುಕ್ತ ಜಗ್ನನಾಥ ಸಾಗರ್, ಹಾಸನ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಉದ್ಯಮಿಗಳಾದ ಹುಬ್ಬಳ್ಳಿ ಈಶ್ವರ ಶಿರುಕೋಳ್, ವಿಷ್ಣು ಲಾತೂರು, ಗೌರಿಬಿದನೂರು ನಾಗರಾಜ್‌ರನ್ನು ಸನ್ಮಾನಿಸಲಾಗುವುದು ಎಂದರು.

ಶ್ರೀ ಭಗೀರಥ ಸಹಕಾರ ಸಂಘವು ಜಿಲ್ಲಾ ಮಟ್ಟದಲ್ಲಿ ಆರಂಭವಾದ ಸಹಕಾರ ಸಂಘವಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿದೆ ಎಂದರು.

ಗೋಷ್ಠಿಯಲ್ಲಿ ನಿರ್ದೇಶಕರಾದ ಎಲ್.ಮಂಜುನಾಥ್, ಎಂ.ಜಿ.ಕೆ. ಹನುಮಂತಪ್ಪ, ಶಾಂತಮ್ಮ, ಜಿ.ಚಿದಾನಂದ, ಹೆಚ್.ರವಿ, ಯು.ಕೆ.ವೆಂಕಟೇಶ್, ಎಸ್.ಪಿ.ಸುಧಾಕರ್, ವೈ.ಬಿ.ಲೋಕೇಶ್, ಅರ್ಚನಾ, ಸಂಘದ ಪ್ರಭಾರ ಸಿಇಓ ಎಸ್.ಈ.ಕಿರಣ್‌ಕುಮಾರ್ ಉಪಸ್ಥಿತರಿದ್ದರು.

Share.
Leave A Reply

Exit mobile version