ದಾವಣಗೆರೆ : ಶಾಸಕ ಶಾಮನೂರು ಶಿವಶಂಕರಪ್ಪ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಬಗ್ಗೆ ಹೇಳಿರೋದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಾಗೆ ಆಗಿದೆ ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಶಾಮನೂರ್ ಶಿವಶಂಕರಪ್ಪನವರು ಹಿರಿಯರು 40 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದವರು ಲ‌ ಆದರೆ ಸಿದ್ದೇಶ್ವರವರೆಗೆ ಎಷ್ಟು ಧಿಮಾಕು ಹಿರಿಯರ ಬಗ್ಗೆ ಮಾತನಾಡುತ್ತಾನೆ ಎಂದು ಹೇಳಿದ್ದೀರಿ. ಆದರೆ ಅದಕ್ಕಿಂತ ಮೊದಲು ನಿಮ್ಮ ಮಗ ಮಲ್ಲಿಕಾರ್ಜುನ್ ಮಂತ್ರಿ. ಅವನಿಗೆ ಬುದ್ಧಿ ಹೇಳಿ ಹಿರಿಯರ ಬಗ್ಗೆ ಯಾವ ರೀತಿ ನಡೆದುಕೊಳ್ಳಬೇಕೆಂಬುದನ್ನು.

ಮೊದಲು ನಿಮ್ಮ ಮಗನಿಗೆ ಪಾಠ ಹೇಳಿ ನಂತರ ಬೇರೆಯವರ ಬಗ್ಗೆ ಮಾತನಾಡಿ. ಜಿ ಎಂ ಸಿದ್ದೇಶ್ವರ ಅವರ ತಂದೆ ಮಾಜಿ ಲೋಕಸಭಾ ಸದಸ್ಯರಾದ ದಿವಂಗತ ಜಿ ಮಲ್ಲಿಕಾರ್ಜುನಪ್ಪನವರು ಹಿರಿಯರು ಮತ್ತು ಕಿರಿಯರಿಗೆ ಯಾವ ರೀತಿ ಗೌರವ ಕೊಡಬೇಕೆಂಬ ಸಂಸ್ಕಾರವನ್ನು ಅವರಿಗೆ ಹೇಳಿಕೊಟ್ಟಿದ್ದಾರೆ, ಈಗಿನ ಬೃಹತ್ ಕೈಗಾರಿಕಾ ಮಂತ್ರಿ ಹಿಂದಿನ ಗೃಹ ಸಚಿವರಾದ ಎಂ ಬಿ ಪಾಟೀಲ್ ಅವರು ತಮ್ಮ ಮನೆಗೆ ಅತಿಥಿಯಾಗಿ ಆಗಮಿಸಿದ ಸಂದರ್ಭದಲ್ಲಿ ತಮ್ಮ ಸುಪುತ್ರ ಈಗಿನ ಮಂತ್ರಿ ತಮ್ಮ ಕಣ್ಣೆದುರಿಗೆ ಯಾವ ರೀತಿ ಏಕವಚನದಿಂದ ಯಾವ ರೀತಿ ದಬ್ಬಾಳಿಕೆ ಯಿಂದ ಮಾತನಾಡಿದ್ದರು ಎನ್ನುವುದನ್ನು ರಾಜ್ಯದ ಜನರು ನೋಡಿದ್ದಾರೆ.

ಅವರು ಅದನ್ನು ಮರೆತಾ ಹಾಗೆ ಕಾಣಿಸುತ್ತದೆ. ಆದ್ದರಿಂದ ನಿಮ್ಮ ಉಪದೇಶ ಮೊದಲು ನಿಮ್ಮ ಮಗನ ಮತ್ತು ನಿಮ್ಮ ಮನೆಯಿಂದ ಪ್ರಾರಂಭವಾಗಲಿ

ನಿಮ್ಮ ಮಗನ ಹಾಗೆ ಜಿಎಂ ಸಿದ್ದೇಶ್ವರ ಎಲ್ಲೂ ಸಹಿತ ಬಿಜೆಪಿರಾಜ್ಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಆದರೆ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಲೋಕಸಭಾ ಚುನಾವಣೆ ಪೂರ್ವ ಭಾವಿ ಮೀಟಿಂಗ್ ಕರೆದಾಗ ದಾವಣಗೆರೆ ಜಿಲ್ಲೆಯಲ್ಲಿ ನಡೆತಂಕ್ಕತ ಜಿಲ್ಲೆಯ ವಿದ್ಯಮಾನಗಳ ಬಗ್ಗೆ ನನಗೆ ರಾಜ್ಯ ನಾಯಕರು ಮಾತನಾಡಲು ಅವಕಾಶ ಕೊಡಲಿಲ್ಲ ಎಂದು ತಮ್ಮ ಅಸಮಾಧಾನವನ್ನು ಪತ್ರಿಕಾ ಮುಖಾಂತರ ಹಂಚಿಕೊಂಡಿದ್ದಾರೆ.

ಶಾಮನೂರು ಶಿವಶಂಕರಪ್ಪನವರು ಕುಂಬಳಕಾಯಿ ಕಳ್ಳ ಅಂದ್ರೆ ನೀವೇಕೆ ಹೇಗಲು ಮುಟ್ಟಿಕೊಳ್ಳಿತ್ತಿರಿ,ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಮಟ್ಟದ ಕೆಲವು ಬಿ.ಜೆ.ಪಿ.ನಾಯಕರು ನಿಮ್ಮ ಎಂಜಲು ಕಾಸಿಗೆ ಆಸೆ ಬಿದ್ದು ನಿಮ್ಮ ಸೊಸೆಯ ಗೆಲುವು ಗೆ ಸಹಕರಿದ ನಾಯಕರ ಋಣ ತೀರಿಸಿಲು ಜಿ.ಎಂ.ಸಿದ್ದೇಶ್ವರ ಅವರ ಬಗ್ಗೆ ಇಲ್ಲ ಸಲ್ಲದ ಮಾತುಗಳನು ಆಡುತಿದ್ದಿರಿ ಮತ್ತು ಈ ಹಿಂದೆ ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಶ್ರೀಮಾನ್‌ ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಮಗ ವಿಜೇಂದ್ರ ಅವರ ಬಗ್ಗೆ ಇಬ್ಬರು ಭ್ರಷ್ಟಾಚಾರದ ಆರೋಪದ ಮೇಲೆ ಅಪ್ಪ ಮಕ್ಕಳ ಇಬ್ಬರೂ ಜೈಲಿಗೆ ಹೋಗತ್ತಾರೆ ಎಂದು ನೀವು ಹೇಳಿದ್ದನ್ನು ದಾವಣಗೆರೆ ಜಿಲ್ಲೆಯ ಜನತೆ ಮರೆತಿಲ್ಲ ,ನಿಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ನೋಡಿಕೊಳ್ಳದೆ ಇನ್ನೂಬ್ಬರ ತಟ್ಟೆಯಲ್ಲಿ ಬಿದ್ದ ನೊಣವನ್ನು ನೋಡಲು ಬರಬೇಡಿ
ಯಶವಂತರಾವ್ ಜಾಧವ್ ಹೇಳಿದ್ದಾರೆ.

Share.
Leave A Reply

Exit mobile version