ಭದ್ರಾವತಿ : ಮನೆಯೊಳಗಿನ ಕುಟುಂಬ ಒಟ್ಟಾಗಿ ನಡೆದರೆ ಕೊನೆ ತನಕ ಯಾವುದೇ ಒಡಕು ಇರೋದಿಲ್ಲ.ಇದಕ್ಕೆ ಮನೆ ಯಜಮಾನ ಸೇರಿ ಪ್ರತಿಯೊಬ್ಬರ ಸಹಕಾರ ಅಗತ್ಯ..ಅಂತೆಯೇ ಉಕ್ಕಿನ ಕೋಟೆಯಲ್ಲಿ ಸುಮಾರು 25 ವರ್ಷಗಳಿಂದ ಒಂದು ಕಪ್ಪು ಚುಕ್ಕಿಯಿಲ್ಲದೇ ತನ್ನದೇ ಆದ ಸಹಕಾರಿ ತತ್ವ ಹೊಂದಿರುವ ಸಂಸ್ಥೆಯೊಂದು ತನ್ನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ‌.

ಹೌದು…ಭದ್ರಾವತಿಯಲ್ಲಿನ ಶಿವ ವಿವಿಧೋದ್ದೇಶ ಸಹಕಾರ ಸಂಘ ನಗರದ ಬಸವೇಶ್ವರ ಸಭಾಭವನದಲ್ಲಿ ಸೆ‌22ಕ್ಕೆ ತನ್ನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಸಹಕಾರಿ ರಂಗದಲ್ಲಿನ ತನ್ನ ಯಶಸ್ಸು ತೋರುತ್ತಿದೆ.

ಸುಮಾರು 25 ವರ್ಷಗಳ ಹಿಂದೆ ಹಳೆನಗರದಲ್ಲಿ ಅಂಬೆಗಾಲಿಟ್ಟುಕೊಂಡು ಶುರುವಾದ ಈ ಸಂಘ ಇಂದು ತನ್ನದೇ ಸ್ವಂತ ಕಟ್ಟಡದಲ್ಲಿ ತನ್ನ ಕಾಲಿನ ಮೇಲೆ ತಾನೇ ನಿಂತುಕೊಳ್ಳುವ ಶಕ್ತಿಗೆ ಬೆಳೆದು ನಿಂತಿದೆ‌‌‌..ಷೇರುದಾರರ ನಂಬಿಕೆ ಉಳಿಸಿಕೊಂಡಿರುವ ಈ ಸೊಸೈಟಿಗೆ ಡಿಪಾಸಿಟ್ ಹಣ ಇಡಲು ತಾ ಮುಂದು, ನಾ ಮುಂದು ಎಂದು ಬರುತ್ತಾರೆ‌.

ಒಂದು ಸಂಘದ  ಅಭಿವೃದ್ಧಿಗೆ ಆಡಳಿತ ಮಂಡಳಿಯೂ ಕೂಡ ಅಷ್ಟೇ ಮುಖ್ಯವಾಗಿದ್ದು, ಅಧ್ಯಕ್ಷ ಸತೀಶ್ ಹಾಗೂ ತಂಡ ವ್ಯವಹಾರದಲ್ಲಿ ಯಾವುದೇ ಮೂಗು ತೋರಿಸದೇ ಸೊಸೈಟಿಯ ಶ್ರೇಯೋಭಿವೃದ್ಧಿ ನಮ್ಮ ಗುರಿಯಷ್ಟೇ ಎಂಬ ಆಶಯದೊಂದಿಗೆ ಸೊಸೈಟಿ ನಡೆಸುತ್ತಿದ್ದಾರೆ. ಪರಿಣಾಮ ಇದು ಸೊಸೈಟಿಗೆ ಸುಮಾರು 25 ಲಕ್ಷ ನಿವ್ವಳ ಲಾಭಗಳಿಸಿದೆ.

ಆರಂಭದಲ್ಲಿ ನೂರು ಇನ್ನೂರು ಸದಸ್ಯರನ್ನು ಹೊಂದಿದ್ದ ಶಿವ ಪತ್ತಿನ ಸಹಕಾರಸಂಘದಲ್ಲಿ ಇಂದು ಸುಮಾರು ಎರಡು ಸಾವಿರ  ಜನ ಇದ್ದಾರೆ. ಇದಕ್ಕೆ ವ್ಯವಹಾರದಲ್ಲಿನ ನಂಬಿಕೆ, ಶಿಸ್ತು, ವ್ಯವಹಾರಿಕ ತತ್ವ ಕಾರಣ..ಒಂದು ಪೈಸೆಗೂ ಇಲ್ಲಿ ಲೆಕ್ಕ ಇಡಲಾಗುತ್ತಿದ್ದು, ಅನಾವಶ್ಯಕ ಖರ್ಚಿಗೆ ಇಲ್ಲಿ ಜಾಗವೇ ಇಲ್ಲ. ಹಾಗಾಗಿ ಜನರು ಸಂಘದ ಶ್ರೆಯೋಭಿವೃದ್ಧಿ, ಸೊಸೈಟಿ ಬೆಳವಣಿಗೆಗಾಗಿ ಹೆಚ್ಚು ಡಿಪಾಸಿಟ್ ಇಡುತ್ತಿದ್ದಾರೆ.

ಈ ಶಿವಪತ್ತಿನ ಸಹಕಾರ ಸಂಘದಲ್ಲಿ ನಾಯಕರಾಗಿ ಕಾರ್ಯದರ್ಶಿ ಬಿ.ಜಿ.ಏಕಾಕ್ಷರಪ್ಲ ಈ ರಥವನ್ನು‌ಉನ್ನತ ಮಟ್ಟದಲ್ಲಿ ಏರಲು ತನ್ನದೇ ಪಾತ್ರವಹಿಸಿದರೆ, ಮಂತ್ರಿಯಾಗಿ ಕುಮಾರ್ ಲೆಕ್ಕದ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇನ್ನೂ ಸಂಘದ ಸೇವಕನಾಗಿ ಹಿರಿಯೂರಿನ ಕಿರಣ್ ಸೇವೆ ಸಲ್ಲಿಸುತ್ತಿದ್ದರೆ, ಸಚ್ಚೀ ಹಾಗೂ ಇನ್ನೊಬ್ಬರು ಅರ್ಥ ವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿದ್ದಾರೆ.

ಶಿವಪತ್ತಿನ ಸಹಕಾರ ಸಂಘ ಡಿಜಿಟಲೀಕರಣ, ಲಾಕರ್ ಸೌಲಭ್ಯ, ವಾಹನ, ಬಂಗಾರದ ಸಾಲ, ಯಶಸ್ವಿನಿ, ಕಡಿಮೆ ಬಡ್ಡಿ ಹೀಗೆ ಹತ್ತಾರು ಸೌಲಭ್ಯಗಳು ಶಿವ ಪತ್ತಿನ ಸಹಕಾರ ಸಂಘದಲ್ಲಿ ದೊರೆಯುತ್ತಿದೆ‌.

ದುರ್ಬಲ ವರ್ಗಗಳ ಹಿತಾಸಕ್ತಿ ಕಾಪಾಡಲು ಈ  ಸಹಕಾರಿ ಸಂಘ ರಚನೆಯಾಗಿದ್ದು, ಎಷ್ಟೋ ಜನರ ಕನಸನ್ನು ಈ ಸಂಘ ಸಾಲ ನೀಡಿ ನೆರವೇರಿಸಿದೆ‌‌‌ ಇದರ ಉದ್ದೇಶವು ಸದಸ್ಯರ ಕಲ್ಯಾಣವಾಗಿದ್ದು, ಇಂದು ಅನೇಕ ಜನರು ತಮ್ಮದೇ ಆದ ಜೀವನ ಕಟ್ಟಿಕೊಂಡಿದ್ದಾರೆ.

ವೀರಶೈವ ಲಿಂಗಾಯಿತ ಸಮಾಜದಲ್ಲಿ ಒಗ್ಗಟ್ಟು ಮೂಡಿಸುತ್ತಿರುವ ಸಂಘ, ತನ್ನ ಎಲ್ಲ ಒಳಪಂಗಡಗಳನ್ನು ತಾಯಿಯಂತೆ ಕಟ್ಟಿಕೊಂಡು ನಡೆಸಿಕೊಂಡು ಬರುತ್ತಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಮಾಜದ ಅಭಿವೃದ್ಧಿಗೆ, ಸಮಾಜದ ಬಲವರ್ಧನೆಗೆ ಶ್ರಮಿಸುತ್ತಿದೆ. ಒಟ್ಟಾರೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶಿವಪತ್ತಿನ ಸಹಕಾರ ಸಂಘ ಇನ್ನೇಷ್ಟು ಎತ್ತರಕ್ಕೆ ಬೆಳೆದು ಸಮಾಜದ, ಷೇರುದಾರರ ಕನಸನ್ನು ಈಡೇರಿಸಲಿ ಎಂಬುದೇ ಪ್ರತಿಯೊಬ್ಬರ ಆಶಯ..‌ಹಾಗಾದ್ರೆ ಈ ಸುವರ್ಣ ಮಹೋತ್ಸವಕ್ಕೆ ನೀವೂ ಬನ್ನಿ, ನಿಮ್ಮವರನ್ನು ಕರೆ ತನ್ನಿ ಎನ್ನುತ್ತಾರೆ ಕಾರ್ಯದರ್ಶಿ ಬಿ.ಜಿ.ಏಕಾಕ್ಷರಪ್ಪ. ಹೆಚ್ಚಿನ ಮಾಹಿತಿಗಾಗಿ  94485 51613 ಸಂಪರ್ಕಿಸಬಹುದು‌

….

ನಮ್ಮ ಶಿವ ವಿವಿಧೋದ್ದೇಶ ಸಹಕಾರ ಸಂಘದ ಜನರಲ್ ಬಾಡಿ ಇದೇ ಸೆ.22 ಕ್ಕೆ ಅಧ್ಯಕ್ಷ ಸತೀಶ್ ರವರ ನೇತೃತ್ವದಲ್ಲಿ ನಡೆಯುತ್ತಿದ್ದು, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಸಂಘದ ಅಭಿವೃದ್ಧಿಗೆ ಎಲ್ಲ ಸದಸ್ಯರು, ನಿರ್ದೇಶಕರು ಕಾರಣವಾಗಿದ್ದ ಕಾರಣ ಇಂದು ಎತ್ತರಕ್ಕೆ ಬೆಳೆದಿದೆ.

-ಬಿ.ಜಿ.ಏಕಾಕ್ಷರಪ್ಪ, ಕಾರ್ಯದರ್ಶಿ, ಶಿವಪತ್ತಿನ ಸಹಕಾರ ಸಂಘ, ಭದ್ರಾವತಿ,

Share.
Leave A Reply

Exit mobile version