ಶಿವಮೊಗ್ಗ: ಭದ್ರಾವತಿಯಲ್ಲಿ ಸಜ್ಜನರು ವಾಸಮಾಡುವಂತಹ ಪರಿಸ್ಥಿತಿಯೇ ಇಲ್ಲವಾಗಿದೆ. ಪೊಲೀಸ್ ಇಲಾಖೆ ಸೇರಿದಂತೆ ರಾಜಕಾರಣಿಗಳು ಕೂಡ ಭದ್ರಾವತಿ ನಗರವನ್ನು ಅಶಾಂತಿಯತ್ತ ಕೊಂಡೋಯ್ಯುತ್ತಿದ್ದಾರೆ ಎಂದು ಭದ್ರಾವತಿ ಹಿತರಕ್ಷಣಾ ವೇದಿಕೆಯ ಮುಖ್ಯಸ್ಥ ಸುರೇಶ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿಯಲ್ಲಿ ಗಾಂಜಾ, ಇಸ್ಪೇಟ್, ಓಸಿ, ಮುಂತಾದ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ. ಇದರ ಜೊತೆಗೆ ದಲಿತರ ಮೇಲೆ ಹಲ್ಲೆ ಕೂಡ ನಡೆಯುತ್ತಿರುವುದು ಆತಂಕದ ವಿಷಯವಾಗಿದೆ.

ಭದ್ರಾವತಿಯಲ್ಲಿ ದಲಿತ ಯುವಕರಿಬ್ಬರನ್ನು ಹೊಸಮನೆಯ ಪೊಲೀಸ್ ಸಬ್‌ಇನ್ಸ್ಫೆಕ್ಟರ್‌ರೊಬ್ಬರು ಚಿತ್ರ ಹಿಂಸೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ದಲಿತ ಯುವಕರಾದ ದೀಪಕ್ ಮತ್ತು ಅನಿಲ್ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್‌ಇನ್ಸ್ಫೆಕ್ಟರ್ ಅವರನ್ನು ಅಮಾನತ್ತುಗೊಳಿಸಬೇಕು. ಇಲ್ಲದಿದ್ದರೆ ಜಾಗೃತ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ತೀರ್ಥೇಶ್, ಅನಿಲ್‌ಕುಮಾರ್ ಇದ್ದರು.

Share.
Leave A Reply

Exit mobile version