ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ಹಾಗು ಸಿದ್ದಾಪುರದಲ್ಲಿ ಹಲವು ಸಮಸ್ಯೆ ಗಳಿದ್ದು, ಇಲ್ಲಿನ ಮತದಾರರು ಈ ಬಾರಿ ಲೋಕಸಭೆ ಚುನಾವಣೆ ಬಹಿಷ್ಕರಿಸುವ ಸಾಧ್ಯತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಜನ್ನಾಪುರ ಲಿಂಗಾಯಿತರ ಬೀದಿ ಹಾಗು ಸಿದ್ದಾಪುರ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಬೋರ್‌ವೆಲ್‌ ಗಳನ್ನು ದುರಸ್ತಿ ಮಾಡಿಸುವುದು. ಜನ್ನಾಪುರ ಜಯಶ್ರೀ ಕಲ್ಯಾಣ ಮಂದಿರ ಪಕ್ಕದ ರಸ್ತೆಯಲ್ಲಿ ಡಾ.ಹೆಗ್ಗಡೆ ಮನೆಯ ಹತ್ತಿರವಿರುವ ಕಿರು ನೀರು ಸರಬರಾಜು ಯೋಜನೆಯ ಮೋಟರ್ ಕೆಟ್ಟು ಹೋಗಿದ್ದು, ಈ ಮೋಟರ್ ಜೊತೆಗೆ ನಗರಸಭೆ ವ್ಯಾಪ್ತಿಯ ಎಲ್ಲಾ ಕಿರುನೀರು ಸರಬರಾಜು ಯೋಜನೆಯ ಮೋಟರ್‌ಗಳನ್ನು ತಪಾಸಣೆ ನಡೆಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

Share.
Leave A Reply

Exit mobile version