ಜಗಳೂರು ಸುದ್ದಿ -: ದಾವಣಗೆರೆ ಲೋಕಸಭಾ ಚುನಾವಣೆಯ ಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಾಕ್ಟರ್ ಪ್ರಭಾ ಮಲ್ಲಿ ಕಾರ್ಜುನ್ ಗೆಲುವು ಸಾಧಿಸುತ್ತಿದ್ದಂತೆ ಜಗಳೂರು ಪಟ್ಟಣದ ಹಳೆ ಮಹಾತ್ಮ ಗಾಂಧೀಜಿ ವೃತದಲ್ಲಿ ಶಾಸಕ ಬಿ ದೇವೇಂದ್ರಪ್ಪ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಂಚಿದರು.

ಕಾಂಗ್ರೆಸ್ ಪಕ್ಷದ ಪ್ರಭಾ ಮಲ್ಲಿಕಾರ್ಜುನರವರು ದಾವಣಗೆರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಂತೆ ಜಗಳೂರು ವಿಧಾನಸಭಾ ಕ್ಷೇತ್ರದ ಈಶಾನ್ಯ ದಿಕ್ಕಿನ ಚಿಕ್ಕ ಉಜ್ಜಿನಿ ಗ್ರಾಮ ದಿಂದ ತಮ್ಮ ಪ್ರಚಾರವನ್ನು ಆರಂಭಿಸಿದರು. ಪ್ರಭಾ ಮಲ್ಲಿಕಾರ್ಜುನ್ ರವರು ಗೆಲುವು ಸಾಧಿಸುತ್ತಿದ್ದಂತೆ ಜಗಳೂರು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಅಭಿಮಾನಿ ಗಳು ಪಟಾಕಿ ಸಿಡಿಸಿ ಜಯ ಘೋಷಣೆಯೊಂದಿಗೆ ಸಿಹಿ ಹಂಚಿದರು

ನಂತರ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ತ್ರಿಬಲ್ ಇಂಜಿನ್ ಸರ್ಕಾರ ರಚನೆಯಾದಂತಾಗಿದೆ ಪ್ರಭಾ ಮಲ್ಲಿಕಾರ್ಜುನ್ ರವರ ಈ ಗೆಲುವು ಐತಿಹಾಸಿಕ ಗೆಲುವಾಗಿದೆ. ದಾವಣಗೆರೆ ಕ್ಷೇತ್ರವು ಸೇರಿದಂತೆ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಲಿದೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಜಗಳೂರು ತಾಲೂಕು ನಂಜುಂಡ ಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಮತ್ತು ಬರಪೀಡಿತ ತಾಲೂಕ ಆಗಿದೆ. ಈ ಕ್ಷೇತ್ರದಲ್ಲಿ ಏಕಲವ್ಯ ಶಾಲೆ.57 ಕೆರೆ ನೀರು ತುಂಬಿಸುವ ಯೋಜನೆ.ಅಪರ್ ಭದ್ರ ಮೇಲ್ದಂಡೆ ಯೋಜನೆ. ಜಲ್ ಜೀವನ್ ಮಿಷನ್ ಯೋಜನೆ ಮಹಿಳೆಯರಿಗೆ ಗಾರ್ಮೆಂಟ್ಸ್.ಆರೋಗ್ಯ ಸೇವೆ. ಸೇರಿದಂತೆ ಸಾಕಷ್ಟು ಯೋಜನೆ ಗಳಿಗೆ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ನೂತನ ಸಂಸದರಾಗಿ ಆಯ್ಕೆಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ಶ್ರಮಿಸಲಿದ್ದಾರೆ.

ಈಗ ದಾವಣಗೆರೆ ಜಿಲ್ಲೆಯಲ್ಲಿ ತ್ರಿಬಲ್ ಇಂಜಿನ್ ಸರ್ಕಾರ ರಚನೆ ಆದಂತಾಗಿದೆ ನಾನು ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕನಾಗಿದ್ದೇನೆ. ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಭೂಗಣಿ ಮತ್ತು ವಿಜ್ಞಾನ ಸಚಿವರಾಗಿ ಎಸ್.ಎಸ್ ಮಲ್ಲಿಕಾರ್ಜುನ್ ರವರು. ಕೇಂದ್ರದ ಸಂಸತ್ತಿನಲ್ಲಿ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗಳ ಬಗ್ಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ರವರುಅಭಿವೃದ್ಧಿಯ ಬಗ್ಗೆ ಸಂಸತ್ ಸದನದಲ್ಲಿ ಧ್ವನಿ ಎತ್ತಲಿ ದ್ದಾರೆ ಅದೇ ರೀತಿ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ಕೆಲಸ ಮಾಡುತ್ತಿದೆ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಮತ ನೀಡಿದ ಎಲ್ಲಾ ಮತದಾರರಿ ಗೆ ನಾವು ಯಾವಾಗಲೂ ಅಭಾರಿಯಾಗಿದ್ದೇವೆ. ಮುಂದೆ ಬರುವ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ನಮ್ಮ ವಿಧಾನಸಭಾ ಕ್ಷೇತ್ರದ ಮತದಾರರ ಮುಂದೆ ಅಭಿವೃದ್ಧಿ ಕೆಲಸವನ್ನು ಇಟ್ಟು ಮತ ಕೇಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಡಿ ಕೀರ್ತಿ ಕುಮಾರ್. ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಬಿ ಮಹೇಶ್ವರಪ್ಪ. ಮುಖಂಡರಾದ ವಾಲಿಬಾಲ್ ತಿಮ್ಮಾರೆಡ್ಡಿ. ಪ್ರಕಾಶ್ ರೆಡ್ಡಿ. ಸಿ ತಿಪ್ಪೇಸ್ವಾಮಿ. ನಿವೃತ್ತ ಉಪನ್ಯಾಸಕ ಶಂಶುದ್ದೀನ್.ಎಂ.ಎಸ್ ಪಾಟೀಲ್ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಂಜುನಾಥ್. ಹಟ್ಟಿ ತಿಪ್ಪೇಸ್ವಾಮಿ.ಗುತ್ತಿದುರ್ಗ ರುದ್ರೇಶ್.ವಿಜಯ್ ಕೆಂಚೋಳ್. ಗೊಲ್ಲರಹಟ್ಟಿ ರಮೇಶ್.ಹಿರೇಮಲ್ಲನಹಳ್ಳಿ ಲೋಕೇಶ್. ನರೇನ ಹಳ್ಳಿ ಕುಮಾರ್ ನಾಯ್ಕ್.ಸರ್ಕಲ್ ಕಾಟಪ್ಪ.ಕೆಳಗೋಟೆ ಬದ್ರಿಣ್ಣ

” ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಯಾವಾಗ ಎಂದು ಪತ್ರಕರ್ತರು ಶಾಸಕ ಬಿ.ದೇವೇಂದ್ರಪ್ಪ ಅವರನ್ನು ಕೇಳಿದಾಗ ಈ ಪ್ರಶ್ನೆಗೆ ಉತ್ತರಿಸಿದ ಶಾಸಕ ಬಿ.ದೇವೇಂದ್ರಪ್ಪ, ಈ ಬಗ್ಗೆ ಯಾವ ಸಂದೇಹವು ಕೂಡ ಬೇಕಾಗಿಲ್ಲ ನಾನು ನಿಮ್ಮ ಮುಖಾಂತರ ಈ ಒಂದು ಸಂಬಂಧಪಟ್ಟ ಡಾ ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಟೋಲ್ ರಸ್ತೆಯವರೆಗೆ ಎರಡು ಬದಿಯಲ್ಲಿರುವ ವ್ಯಾಪಾರಸ್ಥರು ಅವರು ಕೂಡ ಇಲ್ಲಿ ನಮ್ಮವರೇ ಸುಗಮವಾದ ಸಂಚಾರಕ್ಕೆ ಅವರಲ್ಲಿ ನಾನು ಮಾಧ್ಯಮದ ಮುಖಾಂತರ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಸಂಬಂಧಪಟ್ಟ ಇಲಾಖೆ ಯ ಎಲ್ಲಾ ಅಧಿಕಾರಿಗಳನ್ನು ಕರೆದು ನಾನು ಮಾರ್ಜಿನ್ ಎಲ್ಲಿವ ರೆಗೆ ಬರುತ್ತೆ ಅಲ್ಲಿಗೆ ರಸ್ತೆ ಅಗಲೀಕರಣ ಮಾಡುತ್ತೇನೆ . ಈಗಾಗ ಲೇ ಅನುದಾನ ಬಿಡುಗಡೆಯಾಗಿದೆ ಈ ನಿಟ್ಟಿನಲ್ಲಿ ಅವರ ಗಮ ನಕ್ಕೆ ನಾನೇನು ಅವರ ಶತ್ರು ಅಲ್ಲ ನಾನು ಜಗಳೂರಿನಲ್ಲಿ ಅಷ್ಟೇ ಪ್ರಯೋಗ ಮಾಡುತ್ತಿಲ್ಲ ಇಡೀ ರಾಜ್ಯದಲ್ಲಿ ಅದು ನಡೆದು ಕೊಂಡು ಬಂದಿದೆ. ಈ ಕೆಲಸ ಯಾವತ್ತೂ ಆಗಬೇಕಾಗಿತ್ತು ಆದರೆ ಸಾಕಷ್ಟು ವಿಳಂಬವಾಗಿದೆ ಕೆಲವರು ರಾಜಕೀಯ ಸ್ವಾರ್ಥಕ್ಕೋಸ್ಕರ ಈ ಕೆಲಸಕ್ಕೆ ಕೈ ಹಾಕಲಿಲ್ಲ. ಆದರೆ ನಾನು ಈ ಕೆಲಸವನ್ನು ಮಾಡುತ್ತೇನೆ ನನ್ನ ರಾಜಕೀಯ ನಾಳೆನೇ ಅವರು ಬಿಡಿಸಿದರು ಕೂಡ ಬಿಡುವುದಿಲ್ಲ, ಗೊಡ್ದು ಬೆದರಿಕೆಗೂ ಎದುರುವನಲ್ಲ ಮತ್ತು ಬೆದುರುವನು ಅಲ್ಲ ನೂರಕ್ಕೆ ನೂರರಷ್ಟು ರಸ್ತೆ ಅಗಲೀಕರಣ ಮಾಡುವುದು ಶತಸಿದ್ಧ ಎಂದರು “

Share.
Leave A Reply

Exit mobile version