ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಖಜಾಂಚಿ ಹುದ್ದೆಗೆ ಇಂದು (ಡಿ.27) ಚುನಾವಣೆ ನಡೆದಿದ್ದು, ಹಾಲಿ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದು, ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗೂ ಅವರದ್ದೇ ಬಣದ ನಾಗರಾಜ ಜುಮ್ಮನ್ನನವರ ಖಜಾಂಚಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು, ಮಾಹಿತಿ ದೊರಕಬೇಕಿದೆ..
ಪ್ರಜಾಸತ್ತಾತ್ಮಕ ನೌಕರರ ವೇದಿಕೆಯಿಂದ ಅಧ್ಯಕ್ಷ ಹುದ್ದೆಗೆ ಬಿ.ಪಿ. ಕೃಷ್ಣೇಗೌಡ ಮತ್ತು ಖಜಾಂಚಿ ಹುದ್ದೆಗೆ ಶಿವರುದ್ರಯ್ಯ ವಿ.ವಿ ಅವರು ಕಣಕ್ಕೆ ಇಳಿದಿದ್ದರು.ಕಬ್ಬನ್ ಉದ್ಯಾನದಲ್ಲಿರುವ ಸಂಘದ ಕಚೇರಿಯ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಒಟ್ಟು 5.25 ಲಕ್ಷ ಸರ್ಕಾರಿ ನೌಕರರ ಸದಸ್ಯತ್ವ ಹೊಂದಿರುವ ಸಂಘದ 971 ಪ್ರತಿನಿಧಿಗಳು ಮತ ಚಲಾಯಿಸಲಿದ್ದು, 62 ಮತಗಳಿಂದ ಷಡಕ್ಷರಿ ಗೆಲುವು ಸಾಧಿಸಿದ್ದಾರೆ.
2024-2029ನೇ ಅವಧಿಗಾಗಿ ಸಂಘದ ವಿವಿಧ ಸ್ತರಗಳ ಚುನಾವಣಾ ಪ್ರಕ್ರಿಯೆ ಸೆ. 17ರಿಂದ ಆರಂಭವಾಗಿತ್ತು. ಮೊದಲ ಹಂತದಲ್ಲಿ ಮೂರು ಶೈಕ್ಷಣಿಕ ಜಿಲ್ಲೆ ಒಳಗೊಂಡ 33 ಜಿಲ್ಲೆಗಳು ಹಾಗೂ 191 ತಾಲ್ಲೂಕುಗಳ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದು, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು. ರಾಜ್ಯ ಪರಿಷತ್ನ 102 ಸ್ಥಾನಗಳಿಗೂ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತ್ತು.
ಡಿ. 6ರಿಂದ ಈ ಎರಡೂ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು. 31 ಜಿಲ್ಲೆಗಳ ಪೈಕಿ 27ರಲ್ಲಿ ನಮ್ಮವರೇ ಚುನಾಯಿತರಾಗಿದ್ದಾರೆ.ತಾಲ್ಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳ ಚುನಾವಣೆಯಲ್ಲಿ ನಮ್ಮ ಬಣ ಈಗಾಗಲೇ ಮೇಲುಗೈ ಸಾಧಿಸಿದೆ.
ನಾವು ಮಾಡಿರುವ ಕೆಲಸಗಳು ನಮ್ಮನ್ನು ಕೈ ಹಿಡಿಯಲಿವೆ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಷಡಕ್ಷರಿ ಹೇಳಿದ್ದರು. ಇನ್ನು ಎದುರಾಳಿ ಬಣದವರು ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಆಶ್ವಾಸನೆಗಳಲ್ಲಿ ಹಲವನ್ನು ಈಡೇರಿಸಿಲ್ಲ. ಹಳೆ ಪಿಂಚಣಿ ವ್ಯವಸ್ಥೆ ಬರಲಿಲ್ಲ. ವೇತನ ಆಯೋಗದ ಶಿಫಾರಸು ಜಾರಿಯಲ್ಲಿ ನೌಕರರಿಗೆ ಭಾರಿ ನಷ್ಟವಾಯಿತು. ಇದರಿಂದ ಎಲ್ಲ ನೌಕರರು ಅಸಮಾಧಾನಗೊಂಡಿದ್ದಾರೆ. ಈ ಬಾರಿ ನಾವು ಗೆಲ್ಲುತ್ತೇವೆ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿ.ಪಿ.ಕೃಷ್ಣೇಗೌಡ, ಅಭಿಪ್ರಾಯ ವ್ಯಕ್ತಪಡಿಸಿದ್ದರು.