ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ದಾಳಿ ನಡೆಸಿರುವ ಬಗ್ಗೆ ತನಿಖೆ ಚುರುಕುಗೊಳಿಸಿರುವ ನಂದಿನಿ ಲೇಔಟ್ ಠಾಣೆ ಪೊಲೀಸರು, ಮೊಟ್ಟೆಯ ಸ್ಯಾಂಪಲ್‌ನ್ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ.
ಮುನಿರತ್ನ ಅವರ ತಲೆಯ ಮೇಲೆ ಬಿದ್ದಿದ್ದ ಮೊಟ್ಟೆಯ ಒಳಭಾಗದ ಬಂಡಾರವನ್ನು ಸಂಗ್ರಹಿಸಿ ಅದನ್ನು ಎಫ್‌ಎಸ್‌ಎಲ್ ಪ್ರಯೋಗಲಾಯಕ್ಕೆ ರವಾನಿಸಿದ್ದಾರೆ. ಮೊಟ್ಟೆಯೊಳಗೆ ಆ್ಯಸಿಡ್ ಇಂಜೆಕ್ಟ್ ಮಾಡಿ ದಾಳಿ ಮಾಡಿದ್ದಾರೆಂದು ಮುನಿರತ್ನ ಅವರು ಆರೋಪಿಸಿದ್ದರು. ಹಾಗಾಗಿ ಹೆಚ್ಚಿನ ತನಿಖೆಗಾಗಿ ಮೊಟ್ಟೆಯ ಸ್ಯಾಂಪಲ್ನುನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ವೇಳೆ ಆರೋಪಿಗಳು ಮೊಟ್ಟೆಯೊಳಗೆ ಆ್ಯಸಿಡ್ ಇಂಜೆಕ್ಟ್ ಮಾಡಿ ಎಸೆದಿದ್ದರೆ ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ಗೊತ್ತಾಗಲಿದೆ. ವರದಿ ಬಂದ ನಂತರವೇ ಮೊಟ್ಟೆಯೊಳಗೆ ಏನಿತ್ತು ಎಂಬುದು ಗೊತ್ತಾಗಲಿದೆ