ದಾವಣಗೆರೆ: : ತನ್ನ ಮನೆಯಿಂದಲೇ ಅಸಮಾನತೆಯನ್ನು ವಿರೋಧಿಸಿ ಇಡೀ ವಿಶ್ವದಲ್ಲೇ ಅಸಮಾನತೆ ವಿರೋಧಿಸಿದ ಬಸವಣ್ಣನವರು ಮೊದಲಿಗರಾಗಿದ್ದು, 12ನೇ ಶತಮಾನದಲ್ಲೇ ಸಾಂಸ್ಕೃತಿಕ ನಾಯಕರಾಗಿ ಕೆಲಸ ಮಾಡಿದವರು ಎಂದು ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ರಾಷ್ಟಿಯ ಅಧ್ಯಕ್ಷರು, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ತಿಳಿಸಿದರು. ದಾವಣಗೆರೆ ಜಿಲ್ಲಾ ವೀರಶೈವ-ಲಿಂಗಾಯಿತ ಮಹಾಸಭಾದ ವತಿಯಿಂದ ಎಂ.ಬಿ.ಎ. ಕಾಲೇಜು ಆವರಣದ ಮಹಾಸಭಾದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಅಸಮಾನತೆಯನ್ನು ಧಿಕ್ಕರಿಸಿ ಲಿಂಗಾಯಿತ ಧರ್ಮದ ಮೂಲಕ ಮಹಿಳೆಯರನ್ನು ಮುಂಚೂಣಿಗೆ ಬರುವಂತೆ ಮಾಡಿದ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಅಧಿಕೃತವಾಗಿ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು, ಆದರೆ ಅವರು ಅಂದೇ ಸಾಂಸ್ಕೃತಿಕ ನಾಯಕರತಾಗಿದ್ದವರು ಎಂದರು.ಮಹಾಸಭಾದ ರಾಷ್ಟಿಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಎಲ್ಲಾ ಜಾತಿ ವರ್ಗದವರಿಗೂ ಮನ್ನಣೆ ನೀಡಿ ಪ್ರಜಾಪ್ರಭುತ್ವ ಸ್ಥಾಪಿಸಿದರು ಎಂದರು.

ಮತ್ತೊರ್ವ ಮಹಾಸಭಾದ ರಾಷ್ಟಿçÃಯ ಉಪಾಧ್ಯಕ್ಷ ಅಥಣಿ ವೀರಣ್ಣನವರು ಮಾತನಾಡಿ ಮಹಾಸಭಾಕ್ಕೆ ದಾವಣಗೆರೆಯಲ್ಲಿ ನೀಡಿರುವ ನಿವೇಶನದಲ್ಲಿ ಶೀಘ್ರದಲ್ಲೇ ಕಾಮಗಾರಿಗೆ ಆರಂಭಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಐಗೂರು ಸಿ. ಚಂದ್ರಶೇಖರ್, ಕರೇಶಿವಪ್ಳರ ಸಿದ್ದೇಶ್, ಬಿ.ಜೆ.ರಮೇಶ್, ಪ್ರಕಾಶ್ ಪಾಟೀಲ್, ಶಂಭು ಉರೇಕೊಂಡಿ, ಶ್ರೀಮತಿ ಗೀತಾ ಚಂದ್ರಶೇಖರ್, ರಾಜೇಶ್ವರಿ, ನಿರ್ಮಲಾ ಸುಭಾಷ್, ಶುಭಮಂಗಳ, ಶಶಿಕಲಾಮೂರ್ತಿ, ಕೊರಟಗೆರೆ ಶಿವಕುಮಾರ್, ಯಶೋಧ, ಸುಷ್ಮಾ ಪಾಟೀಲ್, ದ್ರಾಕ್ಷಾಯಣಮ್ಮ, ಸುನೀತಾ ಭೀಮಣ್ಣ, ಕಾವ್ಯ, ವನಜಾ, ಸೌಮ್ಯ ಸತೀಶ್, ಅನುಷಾ,ಬಾತಿ ಶಿವಕುಮಾರ್, ಅಜಿತ್ ಆಲೂರು, ಅವಿನಾಶ್, ನಿಧಿ, ನವೀನ್, ಶಿವರತನ್, ಬಸವರಾಜ್ ಆವರಗೆರೆ, ಮತ್ತಿತರರಿದ್ದರು.

Share.
Leave A Reply

Exit mobile version