ದಾವಣಗೆರೆ: ಡಿಸಿಸಿ ಬ್ಯಾಂಕ್ ಚುನಾವಣೆಗೆ ಭಾರೀ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಹಾಲು ಉತ್ಪಾದಕರ ಸಂಘಕ್ಕೆ ಸಾರಥಿಯಾಗಲು ಸಾಕಷ್ಟು ಹೋರಾಟ ನಡೆಯುತ್ತಿದೆ. ಈ ನಡುವೆ ಹೊನ್ನಾಳಿ-ನ್ಯಾಮತಿ ಡಿ ವರ್ಗಕ್ಕೆ ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಎಚ್.ಕೆ.ಬಸಪ್ಪ, ಸ್ಪರ್ಧೆ ಮಾಡುತ್ತಿದ್ದಾರೆ.

ಭಾರಿ ರೈತರ ಬೆಂಬಲದೊಂದಿಗೆ ಡಿಸಿಸಿ‌ ಬ್ಯಾಂಕ್ ಗೆ ಆಗಮಿಸಿದ್ದ ಬಸಪ್ಪರಿಗೆ ಸ್ಥಳೀಯ ನಾಯಕರ ಸಹಕಾರವು ಇದೆ. ಅಲ್ಲದೇ ರೈತರ ಅಭಿವೃದ್ಧಿಗೆ ಶ್ರಮಿಸುವ ನಾಯಕರಾಗಿದ್ದು, ಮತದಾರರ ಬೆಂಬಲ ಬೇಕಿದೆ.

ಸಹಕಾರ ನೀಡುವ ಕನಸು

ಬಿಇ ಸಿವಿಲ್ ಪದವೀಧರನಿಗೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಜನರಿಗೆ ಸಹಕಾರ ನೀಡುವ ಕನಸು ….ಈ ಕನಸಿಗೆ ಮೂರು ತಾಲ್ಲೂಕಿನ ಜನರ ಬೆಂಬಲವೂ ಸಿಕ್ಕಿದೆ.

ಹೊನ್ನಾಳಿ,ಚನ್ನಗಿರಿ ನ್ಯಾಮತಿಯ ಡಿವರ್ಗದ ಕ್ಷೇತ್ರವಾದ ಎಂಪಿಸಿಎಸ್ ನಿಂದ ಸ್ಪರ್ಧೆ ಮಾಡುತ್ತಿರುವ ಬಿಇ ಪದವೀಧರ ಹಾಗೂ ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಡಿ ವರ್ಗಕ್ಕೆ ಸ್ಪರ್ಧೆ ಮಾಡುತ್ತಿರುವ ಎಚ್.ಕೆ ಬಸಪ್ಪ ಆ ಕನಸನ್ನು ಹೊತ್ತು ನನಸು ಮಾಡಲು ಮುಂದಾಗಿದ್ದಾರೆ. ಇದೀಗ ಸ್ಪರ್ಧೆಗೆ ತಮ್ಮ ನಾಮಪತ್ರ ಕೂಡ ಸಲ್ಲಿಸಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು
ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ‌ ಸದಸ್ಯನಾಗಿದ್ದೇನೆ. ನಮ್ಮ ಬೆಂಬಲಕ್ಕೆ 100 ಮತದಾರರಿದ್ದಾರೆ.
ನಮ್ಮ ಎಂಪಿಸಿಎಸ್ ನಿಂದ ಡಿಸಿಸಿಗೆ ಬಂದರೆ ಸೌಲಭ್ಯಗಳನ್ನು ಸಮಮರ್ಪಕವಾಗಿ ತಲುಪಿಸುವುದಾಗಿದೆ. ಬೆಂಬಲವೂ ಉತ್ತಮವಾಗಿದೆ.ಎಲ್ಲಾ ಮೂರು ತಾಲ್ಲೂಕಿನ ಅಧ್ಯಕ್ಷ ರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಏನು ಪ್ರಣಾಳಿಕೆ

ನಮ್ಮ ಪ್ರಣಾಳಿಕೆ ಬಗ್ಗೆ ಹೇಳುವುದಾದರೆ ಚುನಾವಣೆಯಲ್ಲಿ ಗೆದ್ದರೆ ಸದಸ್ಯರಿಗೆ ಸಾಲಸೌಲಭ್ಯ ಸಮರ್ಪಕವಾಗಿ ಒದಗಿಸುವುದು. ಬ್ಯಾಂಕ್ ನಿಂದ ಲೋನ್ ಕೊಡಿಸಿ .ಹೈನುಗಾರಿಕೆ ಉತ್ಪಾದನೆ ಹೆಚ್ವು ಮಾಡುವುದೇ ನಮ್ಮ‌ಮುಖ್ಯ ಗುರಿ. ಎಂಪಿಸಿಎಸ್ ನಿಂದ ಬಂದಿದ್ದೇನೆ ಅದಕ್ಕೆ ಒತ್ತು ನೀಡಲಿದ್ದೇನೆ ಎಂದು ಬಸಪ್ಪ ಹೇಳಿದರು.

ಬಸಪ್ಪರಿಗೆ ಸೂಚಕರು ಯಾರು?

ನನಗೆ ಸೂಚಕರಾಗಿ ಸಂಗಾಹಳ್ಳಿಯ ಶಿವಮೂರ್ತಪ್ಪ ಹಾಗೂ ಕಾರಿಗನೂರಿನಿಂದ ಚಂದ್ರಶೇಖರ್ ಸೂಚಕರಾಗಿದ್ದಾರು. ಚುನಾವಣೆ ಪ್ರಚಾರ ಚೆನ್ನಾಗಿಯೇ ನಡೆಯುತ್ತಿದೆ.ನೂರಕ್ಕೆ ನೂರರಷ್ಟು ಗೆಲ್ಲುವ ನಿರೀಕ್ಷೆಯಿದೆ‌.
ರೈತರಿಗೆ ಒಳ್ಳೆಯದು  ಮಾಡುವ ಉದ್ದೇಶ ನಮ್ಮದು. ಒಕ್ಕೂಟದ ಸೌಲಭ್ಯ ಎಲ್ಲರಿಗೂ ತಲುಪಿಸುವುದಾಗಿದೆ ಎಂದರು.

ಕಾರಿಗನೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಹಾಗೂ ಉತ್ಪಾದಕ ಗ್ರಾ.ಪಂ ಸದಸ್ಯ ಬಸವೇಶ್ವರ ಪಾಟೀಲ್ ಮಾತನಾಡಿ ಹೆಚ್.ಕೆ ಬಸಪ್ಪ ಅವರು ಈ ಹಿಂದೆ ಶಿಮೂಲ್  ನ ಸದಸ್ಯರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಹಾಲು ಉತ್ಪಾದಕರ ಸಂಘದ ಜೊತೆ ಉತ್ತಮ ಒಡನಾಟದಲ್ಲಿದ್ದಾರೆ. ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸುತ್ತಾರೆ. ಸ್ನೇಹ ಪರರಾಗಿದ್ದಾರೆ.ಅವರ ಜೊತೆ ನಾವೆಲ್ಲ ನಾಮಿನೇಷನ್ ಸಲ್ಲಿಸಲು ಬೆಂಬಲವಾಗಿ ಆಗಮಿಸಿದ್ದೇವೆ ಅವರ ಗೆಲುವು ನಿಶ್ವಿತ ಎಂದರು. ಒಟ್ಟಾರೆ ಬಸಪ್ಪಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಮತದಾರರ ತೀರ್ಪು ಅಂತಿಮವಾಗಿದೆ.

Share.
Leave A Reply

Exit mobile version