ಬೆಂಗಳೂರು.

ಮದ್ಯದ ಅಮಲಿನಲ್ಲಿ ಬೈಕ್‌ಗೆ ಬೆಂಕಿ ಹಚ್ಚಿ 20 ದಿನಗಳ ಶಿಶುವನ್ನು ಚಾಕು ಹಿಡಿದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಭಾವನನ್ನು ಬಾಮೈದರೇ ಕೊಲೆ ಮಾಡಿರುವ ಘಟನೆ ನಗರದ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ
ಸಿದ್ದಾಪುರ ನಿವಾಸಿ ಸಲ್ಮಾನ್ ಖಾನ್ (30) ಮೃತ ವ್ಯಕ್ತಿ.

ಈತನನ್ನು ಕೊಲೆ ಮಾಡಿದ ಭಾಮೈದರಾದ ಉಮರ್ ಖಾನ್, ಸೈಯದ್ ಅನ್ವರ್ ಹಾಗೂ ಅವರ ಸ್ನೇಹಿತ ಶೊಯೇಬ್‌ನನ್ನು ಬಂಧಿಸಲಾಗಿದೆ. ಕೊಲೆಯಾದವ ಬೀರು ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷದ ಹಿಂದೆ ಆಯಿಷಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ 20 ದಿನಗಳ ಹಿಂದೆ ಮಗುವೊಂದು ಜನಿಸಿತ್ತು. ಮದ್ಯ ಸೇವನೆ ಚಟಕ್ಕೆಬಿದ್ದ ಸಲ್ಮಾನ್ ಖಾನ್ ನಾಲ್ಕೆöÊದು ತಿಂಗಳಿನಿAದ ಪ್ರತಿದಿನ ಕುಡಿದು ಬರುತ್ತಿದ್ದ. ಕೆಲಸಕ್ಕೂ ಸರಿಯಾಗಿ ಹೋಗದೇ ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ. ಬುದ್ದಿವಾದ ಹೇಳಿದರೂ ಯಾವುದೇ ಪ್ರಯೋಜನವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್‌ಗೆ ಬೆಂಕಿ

ಕೊಲೆಯಾದ ಸಲ್ಮಾನ್ ಖಾನ್ ಕೆಲ ದಿನಗಳ ಹಿಂದೆ ಸ್ಥಳೀಯ ನಿವಾಸಿ ಶೋಯೆಬ್ ಎಂಬಾತನ ಜತೆ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ. ಈ ವೇಳೆ ಪತ್ನಿ ಆಯಿಷಾ ಸಹೋದರರು, ರಾಜಿ-ಸಂಧಾನ ಮಾಡಿದ್ದರು. ಆಗ ಶೋಯೆಬ್ ಪರವಾಗಿಯೇ ಎಲ್ಲರೂ ಮಾತನಾಡಿದ್ದರು. ಅದರಿಂದ ಕೋಪಗೊಂಡಿದ್ದ ಸಲ್ಮಾನ್ ಸೋಮವಾರ ತಡರಾತ್ರಿ ಮದ್ಯದ ಅಮಲಿನಲ್ಲಿ ಆಯಿಷಾ ಸೋದರ ಸಂಬAಧಿಯ ಬೈಕ್‌ಗೆ ಬೆಂಕಿ ಹಚ್ಚಿದ್ದ . ಆಗ ಸ್ಥಳೀಯರು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಸಲ್ಮಾನ್ ಪರಾರಿಯಾಗಿದ್ದ

ಮಗು ಕೊಲೆಗೆ ಯತ್ನ

ಮಂಗಳವಾರ ಮುಂಜಾನೆ 5 ಗಂಟೆ ಚಾಕು ಸಮೇತ ಮನೆಗೆ ಬಂದ ಸಲ್ಮಾನ್ ನಿನ್ನ ಸಹೋದರರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆಯೆಂದು ಆರೋಪಿಸಿ ಪತ್ನಿ ಜತೆ ಕ್ಯಾತೆ ತೆಗೆದು ಹಲ್ಲೆ ಮಾಡಿದ್ದ. ಬಳಿಕ ಚಾಕುವಿನಿಂದ 20 ದಿನ ಹಸುಗೂಸು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ. ಆಗ ಪತ್ನಿ ಆಯಿಷಾ ಹಾಗೂ ಸಮೀಪದಲ್ಲೇ ಇದ್ದ ಆಕೆಯ ಸೋದರ ಸಂಬAಧಿಗಳು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ವಾಗ್ವಾದ ನಡೆದಿದೆ. ಬಳಿಕ ಆರೋಪಿಗಳು ಸಲ್ಮಾನ್ ಖಾನ್‌ನ ತಲೆ ಹಾಗೂ ದೇಹದ ಇತರೆಡೆ ಚಾಕುವಿನಿಂದ ಇರಿದಿದ್ದಾರೆ. ಬಳಿಕ ಅವರೇ ಸಲ್ಮಾನ್‌ನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಲ್ಮಾನ್ ಮೃತಪಟ್ಟಿದ್ದಾನೆ. ಕೊಲೆಯಾದ ಸಲ್ಮಾನ್ ಖಾನ್ ವಿರುದ್ಧ ನಗರದ ಕೆಲ ಠಾಣೆಗಳಲ್ಲಿ ಪುಂಡಾಟ ಮಾಡಿದ ಆರೋಪದಡಿ 6 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು

Share.
Leave A Reply

Exit mobile version