Author: davangerevijaya.com

ಚಳ್ಳಕೆರೆ : ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ದಲ್ಲಿ ಬಸ್ ಇಳಿದು ಬರುತ್ತಿದ್ದ ಆಶಾ ಎಂಬುವವರಿಗೆ ಗಂಡನಾದ ಕುಮಾರ್ ರವರು ಮಚ್ಚಿನಿಂದ ಇಂದು ಹಲ್ಲೆ ನಡೆಸಿದ್ದಾರೆ. ತಾಲೂಕಿನ ಚೆನ್ನಮ್ಮನಾಗತಿಹಳ್ಳಿ ಗ್ರಾಮದ ಕುಮಾರ್(30) ವರ್ಷ ಎಂಬುವವರು ಕಳೆದ ಮೂರು ವರ್ಷದ ಹಿಂದೆ ವಿವಾಹ ವಾಗಿದ್ದರು ಆದರೆ ಎರಡು ವರ್ಷದ ದಾಂಪತ್ಯ ಜೀವನ ನಡೆಸಿದ ನಂತರ ದಾಂಪತ್ಯದಲ್ಲಿ ಹೊಡಕು‌ ಮೂಡಿ ಹೆಂಡತಿ ಆಶಾ(25) ವಿವಾಹ ವಿಚ್ಚೇದನ ಕ್ಕೆ ಕೋರ್ಟ್ ಮೊರೆ ಹೊಗಿದ್ದರು ಎನ್ನಲಾಗಿದೆ. ಇಂದು ವಿಚ್ಛೇದನಕ್ಕೆ ಚಳ್ಳಕೆರೆ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಸಂಧರ್ಭದಲ್ಲಿ ಮುಂಜಾನೆ ಬಸ್ ನಿಲ್ದಾಣದಲ್ಲಿ ಕಾದು‌ ಕುಳಿತಿದ್ದ ಗಂಡ ಕುಮಾರ್ ನಿಂದ ಈ ಕೃತ್ಯ ನಡೆದಿದೆ. ಇನ್ನೂ ಮಚ್ಚಿನಿಂದ ಆಶಾ ತಲೆಗೆ ಹಾಗೂ ಕೈಗೆ ಘಾಯಗಳಾಗಿದ್ದು ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿದ್ದಾಳೆ, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ‌ ಚಿತ್ರದುರ್ಗ ಜಿಲ್ಲಾಆಸ್ವತ್ರೆಗೆ ದಾಖಲುಮಾಡಿದೆ‌. ಇನ್ನೂ ಆರೋಪಿ ಗಂಡನನ್ನು ಚಳ್ಳಕೆರೆ ಪೋಲಿಸ್ ರವರು ಕ್ಷಣ ಮಾತ್ರದಲ್ಲಿ ಪತ್ತೆ ಹಚ್ಚಿ ತಮ್ಮ…

Read More

ಚಿಕ್ಕ ವಯಸ್ಸಿಗೆ ಗಾಂಜಾ ದಾಸರವಾಗುತ್ತಿರುವ ಯುವಪಡೆ ಮೆಡಿಕಲ್ ಕಾಲೇಜ್, ವಸತಿ ನಿಲಯಗಳೇ ಟಾರ್ಗೇಟ್ ನಂದೀಶ್ ಭದ್ರಾವತಿ ದಾವಣಗೆರೆ: ಯಾರಾದ್ರೂ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಶುಭ ಸಮಾರಂಭದಲ್ಲಿ ಭಾಗವಹಿಸಿದ್ದ  ಪೋಷಕರನ್ನು ಕೇಳಿದ್ರೆ..ಪೋಷಕರು ಹೆಮ್ಮೆಯಿಂದ  ನನ್ನ ಮಕ್ಕಳು ದಾವಣಗೆರೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಮೆಡಿಕಲ್, ಎಂಜಿನಿಯರ್, ಸೈನ್ಸ್, ಡಿಪ್ಲೋಮಾ ಓದುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ..‌ಆದರೆ ಮಕ್ಕಳು ಅಡ್ಡ ದಾರಿ ಹಿಡಿಯುತ್ತಿದ್ದಾರೆ ಎಂದು ಅವರಿಗೆ ಗೊತ್ತಿಲ್ಲ…ಇದಕ್ಕಾಗಿ ದಾವಣಗೆರೆಯಲ್ಲಿ ನಡೆದ ಪ್ರಕರಣವೊಂದು ಸಾಕ್ಷಿಯಾಗಿದೆ. ಹೌದು…ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನೊಂದರಲ್ಲಿ ಗಾಂಜಾ ನಶೆಯಲ್ಲಿದ್ದ ವಿದ್ಯಾರ್ಥಿಯ ಮೆಲಕಿನಾಟವನ್ನು ನಾವೆಲ್ಲ, ಕೇಳಿದ್ದೇವೆ, ನೋಡಿದ್ದೇವೆ…ಆದರೆ ದಾವಣಗೆರೆಯಲ್ಲಿ ಇಂತಹ ಪ್ರಕರಣ ನಡೆಯದೇ ಹೋದರೂ, ವಿದ್ಯಾರ್ಥಿಯೊಬ್ಬ ಪೆಡ್ಲರ್ ಬಳಿ ಗಾಂಜಾ ಪಡೆಯಲು ಹೋಗಿ ಕೆಟಿಜೆ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಐಟಿಐ ಕಾಲೇಜು ಆವರಣ ಪೆಡ್ಲರ್ ಗಳ ಅಡ್ಡ ನಗರದ ಹದಡಿ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕೆಟಿಜೆ ನಗರ ಠಾಣಾ ಪೊಲೀಸರು ಬಂಧಿಸಿ, 490 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.…

Read More

ದಾವಣಗೆರೆ : ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ,   ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್.ಎಸ್.ಗಣೇಶ್ ಅವರ ಸುಪುತ್ರಿ ಹಾಗೂ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಸುಪುತ್ರರ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.   ಈ ಸಂದರ್ಭದಲ್ಲಿ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಕೂಡ ಭಾಗವಹಿಸಿದ್ದರು. ಅಲ್ಲದೇಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಜಗದೀಶ್ ಶೆಟ್ಟರ್, ಸಚಿವರುಗಳು, ಶಾಸಕರುಗಳನ್ನು ರೇಣುಕಾಚಾರ್ಯ ಭೇಟಿಯಾದರು‌..ಅಷ್ಟೂ ಚಿತ್ರಣ ನಿಮ್ಮ ದಾವಣಗೆರೆ ವಿಜಯದಲ್ಲಿ.

Read More

ದಾವಣಗೆರೆ;  ಸ್ಥಳೀಯ ಎಸ್.ಎಂ. ಕೃಷ್ಣ ನಗರದ ನಿವಾಸಿ ವೀರಪ್ಪ ತುಂಬರಗುದ್ದಿ (ನಾಗೂರು) ಇವರು ಇಂದು ಸಂಜೆ 4:30ಕ್ಕೆ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿದ್ದು ಪತ್ನಿ, ಇಬ್ಬರು ಪುತ್ರರು,ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ (24)ಮಧ್ಯಾಹ್ನ 12 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.

Read More

ಮಾಯಕೊಂಡ : ದಾವಣಗೆರೆ ತಾಲೂಕು ಮಾಯಕೊಂಡ ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಇತ್ತೀಚೆಗೆ ಗ್ರಾಮ ಪಂಚಾಯಿತಿ ಡಿಜಿಟಲ್ ಟಚ್ ನೀಡಿದ್ದು ಸಂಪೂರ್ಣ ಕಂಪ್ಯೂಟರೀಕರಣಗೊಂಡಿದೆ. ಸದಾ ಹಿಂದುಳಿದ ಊರು ಎಂದೇ ಪ್ರಖ್ಯಾತಗೊಂಡಿರುವ ಮಾಯಕೊಂಡದಲ್ಲಿ ಇಲ್ಲಿನ ಜನರು ಈಗ ಅಕ್ಷರ ಜ್ಞಾನವಂತಾರಾಗಿದ್ದಾರೆ. ಇದಕ್ಕಾಗಿ ಗ್ರಾಮ ಪಂಚಾಯಿತಿ ಕೈಜೋಡಿಸಿದ್ದು, ಗ್ರಾಮ ಪಂಚಾಯಿತಿ ಅನುದಾನ ನೀಡಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ಅಭಿವೃದ್ಧಿಗೊಳಿಸಲು ಮತ್ತು ಡಿಜಿಟಲ್ ಟಚ್ ನೀಡಲು 3.5 ಲಕ್ಷ ಅನುದಾನ ನೀಡಿದ್ದು ಇದರಿಂದ ಗ್ರಂಥಾಲಯವನ್ನು ಉನ್ನತೀಕರಿಸಲಾಗಿದೆ. ಅಲ್ಲದೇ ಗ್ರಂಥಾಲಯದ ಕಟ್ಟಡವನ್ನು ನವಿಕೃತಗೊಳಿಸಿ ಬೇಕಾದ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನ ಒದಗಿಸುವಂತೆ ಗ್ರಾಮದಲ್ಲಿನ ವಿದ್ಯಾವಂತ ಯುವಕರು ಒತ್ತಾಯಿಸಿದ್ದು, ಅದು ಕೂಡ ಶೀಘ್ರದಲ್ಲಿ ನೆರವೇರಲಿದೆ. ಓದುವುದಕ್ಕೆ ಅನುಕೂಲ ಗ್ರಾಮದಲ್ಲಿ ಪದವಿ, ಐಟಿಐ, ಕೆಪಿಎಸ್ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಗ್ರಂಥಾಲಯದಲ್ಲಿ ಪ್ರತಿನಿತ್ಯ ಅಭ್ಯಾಸ ಮಾಡುವುದು ಕಾಯಕವಾಗಿದೆ. ಜೊತೆಗೆ ಮಾಯಕೊಂಡ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರುವುದರಿಂದ ಓದುವುದಕ್ಕೆ…

Read More

ಚನ್ನಗಿರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಲು ಕಲಾವಿದರಿಗೆ ಅವಕಾಶ ಮಾಡಿಕೊಡುವ ಮೂಲಕ ಕನ್ನಡ ನಾಡು ನುಡಿ ಸಂಸ್ಥತಿಯನ್ನು ಪೋಷಿಸುತ್ತಿದೆ ಎಂದು ಪತ್ರಕರ್ತ ಸತೀಶ್ ಎಂ ಪವಾರ್ ಹೇಳಿದರು. ಪಟ್ಟಣದ ಆರ್.ವಿ.ಎಸ್. ವಿದ್ಯಾಸಂಸ್ಥೆಯಲ್ಲಿ ರಂಗನಾಥ ವಿದ್ಯಾಸಂಸ್ಥೆ ಕಂಚಿಗನಾಳ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಾರಶೆಟ್ಟಿಹಳ್ಳಿ ರಾಜಪ್ಪ ಮತ್ತು ಸಂಗಡಿಗರ ವತಿಯಿಂದ ಕನ್ಬಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು ನುಡಿ ನೆಲ ಜಲವನ್ನು ಉಳಿಸುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ನುಡಿಯನ್ನು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಆರ್.ವಿ.ಎಸ್. ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯ ಮೋಹನ್‌ಕುಮಾರ್ ಮಾತನಾಡಿ, ಇಂದು ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರುವಂತಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ಶಾಲೆಯಲ್ಲಿ ೧ ರಿಂದ ೧೦ ರವಗೂ ಕನ್ನಡ ಮಾಧ್ಯಮವಿದ್ದು…

Read More

ಚನ್ನಗಿರಿ: ಅಕ್ಷರ ದಾಸೋಹ ಕಾರ್ಯಕ್ರಮವು ಸರಕಾರದ ಒಂದು ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು ಇದರ ಅನುಷ್ಠಾನದಲ್ಲಿ ಬಿಸಿಯೂಟ ತಯಾರಕರ ಪಾತ್ರ ಮಹತ್ವವಾಗಿದೆ ಎಂದು ಇ.ಒ ಉತ್ತಮ್ ಹೇಳಿದರು. ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಕೇಂದ್ರ ಸರಕಾರದ ವತಿಯಿಂದ ತಾ.ಪಂ.ವತಿಯಿಂದ ಬಿಸಿಯೂಟ ತಯಾರಕರ ಮುಖ್ಯ ಅಡುಗೆ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಸುರಕ್ಷಾ ಎಂಬ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಬಿಸಿಯೂಟ ತಯಾರಕರು ಮಾತೃ ಹೃದಯವನ್ನು ಹೊಂದಿದವರಾಗಿದ್ದು ಮನೆಯಲ್ಲಿ ಊಟ ಮಾಡದಂತಹ ಸಾಕಷ್ಟು ಮಕ್ಕಳು ಶಾಲೆಗಳಲ್ಲಿ ಬಿಸಿಯೂಟವನ್ನು ಮಾಡುತ್ತಾರೆ. ಆದ್ದರಿಂದ ಅಡುಗೆ ಸಿಬ್ಬಂದಿಗಳು ಅಡುಗೆ ಮಾಡುವಂತಹ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕಿದೆ. ಕ್ರಮಬದ್ದವಾದ ಶಿಸ್ತು ಜೀವನವನ್ನು ಅಳವಡಿಸಿಕೊಳ್ಳಲು ತರಬೇತಿ ಆಗತ್ಯವಾಗಿದೆ ಎಂದರು. ಕೆಲ ಶಾಲೆಗಳಲ್ಲಿ ಅಡುಗೆ ಸಿಬ್ಬಂದಿಗಳು ರಾಜಕೀಯ ಮಾಡುತ್ತಿದ್ದು ತಮ್ಮ ಕಾರ್ಯಗಳನ್ನು ಬೇರೆಯವರಿಗೆ ವಹಿಸಿ ತಿರುಗಾಡುತ್ತಾರೆ ಅಂತಹ ಕಾರ್ಯಗಳನ್ನು ನಾವು ಸಹಿಸುವುದಿಲ್ಲ. ಸರಕಾರದ ಬಿಸಿಯೂಟದ ಯೋಜನೆಯನ್ನು ಸಂಬಂಧಿಸಿದ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳು ಹಬ್ಬದಂತೆ ಆಚರಿಸಬೇಕು ಎಂದರು. ಬಿಇಓ ಜಯ್ಯಪ್ಪ ಮಾತನಾಡಿ, ಬಿಸಿಯೂಟ ಯೋಜನೆಯು ಯಶಸ್ವಿಯಾಗಬೇಕಾದರೆ ಶಾಲಾ…

Read More

ಚನ್ನಗಿರಿ : ಚನ್ನಗಿರಿ ತಾಲೂಕು ಬೆಸ್ಕಾಂ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಕಲ್ಕೆರೆ ಉಮೇಶ್ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಈ ಹಿಂದೆ ಅಧ್ಯಕ್ಷರಾಗಿದ್ದ ಶೇಖರಪ್ಪ ಎಕ್ಕೆಗುಂದಿಯವರ ಅಧ್ಯಕ್ಷ ಅವದಿ ಪೂರ್ಣಗೊಂಡ ಹಿನ್ನಲೆಯಲ್ಲಿ  ಚುನಾವಣೆ ನಡೆದಿದ್ದು  ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಈ ಸಂದರ್ಭದಲ್ಲಿ  ಬೆಸ್ಕಾಂ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಮಂಜಪ್ಪ ಇತರರು ಹಾಜರಿದ್ದರು.

Read More

ದಾವಣಗೆರೆ :ಮಹಾನಗರ ಪಾಲಿಕೆಯಲ್ಲಿ ಮಳಿಗೆಗಳ ಹರಾಜು‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೈಡ್ರಾಮ ನಡೆದಿದೆ. 12 ವರ್ಷಕ್ಕೊಮ್ಮೆ ನಡೆಯುವ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಡಿಡಿ ತಂದಿದ್ದವರು ಹಾಗೂ ಈ ಮೊದಲು ಬಾಡಿಗೆ ಪಡೆದವರ ನಡುವೆ ವಾಗ್ವಾದ ಸಂಭವಿಸಿದ ಘಟನೆಯೂ ನಡೆದಿದೆ. ಈ ವೇಳೆ  ಸ್ಥಳದಲ್ಲಿ‌ ನೆರೆದಿದ್ದ. ಹಿಂದೂ ಜಾಗರಣಾ ವೇದಿಕೆಯ ಸಹ ಸಂಚಾಲಕ ಸತೀಶ್  ಮಾತನಾಡಿ, ಮಹಾನಗರ ಪಾಲಿಕೆಗೆ ಬಾಡಿಗೆ ಪಾವತಿಸದ ಮಳಿಗೆಯವರಿಗೆ ಹರಾಜು‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು  ಒತ್ತಾಯಿಸಿದ್ದಾರೆ ಹಾಗೂ ಸಾರ್ವಜನಿಕರ ಆಸ್ತಿಗೆ ಹಾನಿಯಾಗಬಾರದು ಎಂದಿದ್ದಾರೆ. ಹೊಸಬರಿಗೆ ಮಳಿಗೆ ನೀಡಬೇಡಿ ಮೂಲ‌ ಬಾಡಿಗೆದಾರರು ಸುಮಾರು‌  ಮೂವತ್ತರಿಂದ ನಲವತ್ತು ವರ್ಷದಿಂದ ಇದ್ದೇವೆ. ನಮ್ಮನ್ನು ಬಿಟ್ಟು ಹೊಸಬರಿಗೆ ಮಳಿಗೆ ನೀಡಬಾರದು ಕೆಲವರು‌ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿದರು. ಅದಕ್ಕೆ ಕೆಲ ಪಾಲಿಕೆ ಸದಸ್ಯರು ಕೂಡ ಬೆಂಬಲ‌ ನೀಡಿದರು.ಆಗ‌ ಹೊಸದಾಗಿ ಡಿಡಿ ತಂದವರು ಈ ಕೂಡಲೇ ಹರಾಜು ಪ್ರಕ್ರಿಯೆ ನಡೆಸಬೇಕು ಹರಾಜಿನ ಮೊತ್ತಕ್ಕಿಂತ ಐದು ಪರ್ಸೆಂಟ್ ಹೆಚ್ಚು ಪಾವತಿಸುವ  ಮೂಲ ಬಾಡಿಗೆದಾರರಿಗೆ…

Read More

ದಾವಣಗೆರೆ : ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟಿಸಿ, ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದ ಜವಾರಿ ಮುಖಂಡ ಎಸ್.ಎ.ರವೀಂದ್ರನಾಥ ಇದೇ ನವೆಂಬರ್ 29 ರಂದು ಜನ್ಮ ದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಹಾಗೂ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಾದ ಕೆ.ಬಿ ಕೊಟ್ರೇಶ್ ಅವರು ಎಸ್ ಎ ಆರ್ ಅವರೊಂದಿಗಿನ ಒಡನಾಟವನ್ನು ನಮ್ಮೊಂದಿಗೆ ಬಿಚ್ವಿಟ್ಟಿದ್ದಾರೆ.ಎಸ್ ಎ.ರವೀಂದ್ರನಾಥ ಅವರ ವ್ಯಕ್ತಿತ್ವ ಹಾಗೂ ಆತ್ಮೀಯತೆಯ ಬಗ್ಗೆ ದಾವಣಗೆರೆ ವಿಜಯದೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಆರ್ ಎಸ್ ಎಸ್ ಬಿಟ್ಟು ಎಸ್ ಎ ಆರ್ ಇಲ್ಲ….ಅದೇ ರೀತಿ ದಾವಣಗೆರೆಯಲ್ಲಿ ಎಸ್ ಎ ಆರ್ ಬಿಟ್ಟು ಸಂಘ ಇಲ್ಲ ರವೀಂದ್ರನಾಥ ಅವರು ಸಂಘಪರಿವಾರದ ಜೊತೆಗೆ ಬೆಳೆದು ಕೆಲಸಗಳನ್ನು ಮಾಡಿ ಜನರನ್ನು ಬೆಳೆಸಿ ಗಮನಸೆಳೆದಿದ್ದಾರೆ. ರಾಜ್ಯದಲ್ಲೇ ಮಾದರಿಯಾದವರು ಎಸ್ ಎ ಆರ್ ಎಂದು ಮೆಲುಕು ಹಾಕಿದರು. ನಮ್ಮಂತಹ ಸಣ್ಣ ಕಾರ್ಯಕರ್ತರನ್ನು ಅವರು ಗುರುತಿಸುತ್ತಾರೆ ಹಾಗೂ ಗಮನಿಸುತ್ತಾರೆ .ಅದರಲ್ಲಿ ನಾನು ಕೂಡ ಒಬ್ಬ.ನಾನು ಕೂಡ ಅವರ ಆದರ್ಶಗಳನ್ನು ಇಷ್ಟಪಡುವ…

Read More