ಚನ್ನಗಿರಿ: ಅಕ್ಷರ ದಾಸೋಹ ಕಾರ್ಯಕ್ರಮವು ಸರಕಾರದ ಒಂದು ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು ಇದರ ಅನುಷ್ಠಾನದಲ್ಲಿ ಬಿಸಿಯೂಟ ತಯಾರಕರ ಪಾತ್ರ ಮಹತ್ವವಾಗಿದೆ ಎಂದು ಇ.ಒ ಉತ್ತಮ್ ಹೇಳಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಕೇಂದ್ರ ಸರಕಾರದ ವತಿಯಿಂದ ತಾ.ಪಂ.ವತಿಯಿಂದ ಬಿಸಿಯೂಟ ತಯಾರಕರ ಮುಖ್ಯ ಅಡುಗೆ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಸುರಕ್ಷಾ ಎಂಬ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಬಿಸಿಯೂಟ ತಯಾರಕರು ಮಾತೃ ಹೃದಯವನ್ನು ಹೊಂದಿದವರಾಗಿದ್ದು ಮನೆಯಲ್ಲಿ ಊಟ ಮಾಡದಂತಹ ಸಾಕಷ್ಟು ಮಕ್ಕಳು ಶಾಲೆಗಳಲ್ಲಿ ಬಿಸಿಯೂಟವನ್ನು ಮಾಡುತ್ತಾರೆ.
ಆದ್ದರಿಂದ ಅಡುಗೆ ಸಿಬ್ಬಂದಿಗಳು ಅಡುಗೆ ಮಾಡುವಂತಹ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕಿದೆ. ಕ್ರಮಬದ್ದವಾದ ಶಿಸ್ತು ಜೀವನವನ್ನು ಅಳವಡಿಸಿಕೊಳ್ಳಲು ತರಬೇತಿ ಆಗತ್ಯವಾಗಿದೆ ಎಂದರು.
ಕೆಲ ಶಾಲೆಗಳಲ್ಲಿ ಅಡುಗೆ ಸಿಬ್ಬಂದಿಗಳು ರಾಜಕೀಯ ಮಾಡುತ್ತಿದ್ದು ತಮ್ಮ ಕಾರ್ಯಗಳನ್ನು ಬೇರೆಯವರಿಗೆ ವಹಿಸಿ ತಿರುಗಾಡುತ್ತಾರೆ ಅಂತಹ ಕಾರ್ಯಗಳನ್ನು ನಾವು ಸಹಿಸುವುದಿಲ್ಲ. ಸರಕಾರದ ಬಿಸಿಯೂಟದ ಯೋಜನೆಯನ್ನು ಸಂಬಂಧಿಸಿದ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳು ಹಬ್ಬದಂತೆ ಆಚರಿಸಬೇಕು ಎಂದರು.
ಬಿಇಓ ಜಯ್ಯಪ್ಪ ಮಾತನಾಡಿ, ಬಿಸಿಯೂಟ ಯೋಜನೆಯು ಯಶಸ್ವಿಯಾಗಬೇಕಾದರೆ ಶಾಲಾ ಮುಖ್ಯೋಪಧ್ಯಾಯರು ಮತ್ತು ಅಡುಗೆ ಸಿಬ್ಬಂದಿಗಳ ಪರಸ್ಪರ ಸಹಕಾರ ಮನೋಭಾವನೆ ಆಗತ್ಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳಾದ ಸುಮ, ಸವಿತಾ ಹಾಜರಿದ್ದರು.