Author: davangerevijaya.com

ಚನ್ನಗಿರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಲು ಕಲಾವಿದರಿಗೆ ಅವಕಾಶ ಮಾಡಿಕೊಡುವ ಮೂಲಕ ಕನ್ನಡ ನಾಡು ನುಡಿ ಸಂಸ್ಥತಿಯನ್ನು ಪೋಷಿಸುತ್ತಿದೆ ಎಂದು ಪತ್ರಕರ್ತ ಸತೀಶ್ ಎಂ ಪವಾರ್ ಹೇಳಿದರು. ಪಟ್ಟಣದ ಆರ್.ವಿ.ಎಸ್. ವಿದ್ಯಾಸಂಸ್ಥೆಯಲ್ಲಿ ರಂಗನಾಥ ವಿದ್ಯಾಸಂಸ್ಥೆ ಕಂಚಿಗನಾಳ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಾರಶೆಟ್ಟಿಹಳ್ಳಿ ರಾಜಪ್ಪ ಮತ್ತು ಸಂಗಡಿಗರ ವತಿಯಿಂದ ಕನ್ಬಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು ನುಡಿ ನೆಲ ಜಲವನ್ನು ಉಳಿಸುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ನುಡಿಯನ್ನು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಆರ್.ವಿ.ಎಸ್. ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯ ಮೋಹನ್‌ಕುಮಾರ್ ಮಾತನಾಡಿ, ಇಂದು ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರುವಂತಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ಶಾಲೆಯಲ್ಲಿ ೧ ರಿಂದ ೧೦ ರವಗೂ ಕನ್ನಡ ಮಾಧ್ಯಮವಿದ್ದು…

Read More

ಚನ್ನಗಿರಿ: ಅಕ್ಷರ ದಾಸೋಹ ಕಾರ್ಯಕ್ರಮವು ಸರಕಾರದ ಒಂದು ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು ಇದರ ಅನುಷ್ಠಾನದಲ್ಲಿ ಬಿಸಿಯೂಟ ತಯಾರಕರ ಪಾತ್ರ ಮಹತ್ವವಾಗಿದೆ ಎಂದು ಇ.ಒ ಉತ್ತಮ್ ಹೇಳಿದರು. ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಕೇಂದ್ರ ಸರಕಾರದ ವತಿಯಿಂದ ತಾ.ಪಂ.ವತಿಯಿಂದ ಬಿಸಿಯೂಟ ತಯಾರಕರ ಮುಖ್ಯ ಅಡುಗೆ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಸುರಕ್ಷಾ ಎಂಬ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಬಿಸಿಯೂಟ ತಯಾರಕರು ಮಾತೃ ಹೃದಯವನ್ನು ಹೊಂದಿದವರಾಗಿದ್ದು ಮನೆಯಲ್ಲಿ ಊಟ ಮಾಡದಂತಹ ಸಾಕಷ್ಟು ಮಕ್ಕಳು ಶಾಲೆಗಳಲ್ಲಿ ಬಿಸಿಯೂಟವನ್ನು ಮಾಡುತ್ತಾರೆ. ಆದ್ದರಿಂದ ಅಡುಗೆ ಸಿಬ್ಬಂದಿಗಳು ಅಡುಗೆ ಮಾಡುವಂತಹ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕಿದೆ. ಕ್ರಮಬದ್ದವಾದ ಶಿಸ್ತು ಜೀವನವನ್ನು ಅಳವಡಿಸಿಕೊಳ್ಳಲು ತರಬೇತಿ ಆಗತ್ಯವಾಗಿದೆ ಎಂದರು. ಕೆಲ ಶಾಲೆಗಳಲ್ಲಿ ಅಡುಗೆ ಸಿಬ್ಬಂದಿಗಳು ರಾಜಕೀಯ ಮಾಡುತ್ತಿದ್ದು ತಮ್ಮ ಕಾರ್ಯಗಳನ್ನು ಬೇರೆಯವರಿಗೆ ವಹಿಸಿ ತಿರುಗಾಡುತ್ತಾರೆ ಅಂತಹ ಕಾರ್ಯಗಳನ್ನು ನಾವು ಸಹಿಸುವುದಿಲ್ಲ. ಸರಕಾರದ ಬಿಸಿಯೂಟದ ಯೋಜನೆಯನ್ನು ಸಂಬಂಧಿಸಿದ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳು ಹಬ್ಬದಂತೆ ಆಚರಿಸಬೇಕು ಎಂದರು. ಬಿಇಓ ಜಯ್ಯಪ್ಪ ಮಾತನಾಡಿ, ಬಿಸಿಯೂಟ ಯೋಜನೆಯು ಯಶಸ್ವಿಯಾಗಬೇಕಾದರೆ ಶಾಲಾ…

Read More

ಚನ್ನಗಿರಿ : ಚನ್ನಗಿರಿ ತಾಲೂಕು ಬೆಸ್ಕಾಂ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಕಲ್ಕೆರೆ ಉಮೇಶ್ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಈ ಹಿಂದೆ ಅಧ್ಯಕ್ಷರಾಗಿದ್ದ ಶೇಖರಪ್ಪ ಎಕ್ಕೆಗುಂದಿಯವರ ಅಧ್ಯಕ್ಷ ಅವದಿ ಪೂರ್ಣಗೊಂಡ ಹಿನ್ನಲೆಯಲ್ಲಿ  ಚುನಾವಣೆ ನಡೆದಿದ್ದು  ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಈ ಸಂದರ್ಭದಲ್ಲಿ  ಬೆಸ್ಕಾಂ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಮಂಜಪ್ಪ ಇತರರು ಹಾಜರಿದ್ದರು.

Read More

ದಾವಣಗೆರೆ :ಮಹಾನಗರ ಪಾಲಿಕೆಯಲ್ಲಿ ಮಳಿಗೆಗಳ ಹರಾಜು‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೈಡ್ರಾಮ ನಡೆದಿದೆ. 12 ವರ್ಷಕ್ಕೊಮ್ಮೆ ನಡೆಯುವ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಡಿಡಿ ತಂದಿದ್ದವರು ಹಾಗೂ ಈ ಮೊದಲು ಬಾಡಿಗೆ ಪಡೆದವರ ನಡುವೆ ವಾಗ್ವಾದ ಸಂಭವಿಸಿದ ಘಟನೆಯೂ ನಡೆದಿದೆ. ಈ ವೇಳೆ  ಸ್ಥಳದಲ್ಲಿ‌ ನೆರೆದಿದ್ದ. ಹಿಂದೂ ಜಾಗರಣಾ ವೇದಿಕೆಯ ಸಹ ಸಂಚಾಲಕ ಸತೀಶ್  ಮಾತನಾಡಿ, ಮಹಾನಗರ ಪಾಲಿಕೆಗೆ ಬಾಡಿಗೆ ಪಾವತಿಸದ ಮಳಿಗೆಯವರಿಗೆ ಹರಾಜು‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು  ಒತ್ತಾಯಿಸಿದ್ದಾರೆ ಹಾಗೂ ಸಾರ್ವಜನಿಕರ ಆಸ್ತಿಗೆ ಹಾನಿಯಾಗಬಾರದು ಎಂದಿದ್ದಾರೆ. ಹೊಸಬರಿಗೆ ಮಳಿಗೆ ನೀಡಬೇಡಿ ಮೂಲ‌ ಬಾಡಿಗೆದಾರರು ಸುಮಾರು‌  ಮೂವತ್ತರಿಂದ ನಲವತ್ತು ವರ್ಷದಿಂದ ಇದ್ದೇವೆ. ನಮ್ಮನ್ನು ಬಿಟ್ಟು ಹೊಸಬರಿಗೆ ಮಳಿಗೆ ನೀಡಬಾರದು ಕೆಲವರು‌ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿದರು. ಅದಕ್ಕೆ ಕೆಲ ಪಾಲಿಕೆ ಸದಸ್ಯರು ಕೂಡ ಬೆಂಬಲ‌ ನೀಡಿದರು.ಆಗ‌ ಹೊಸದಾಗಿ ಡಿಡಿ ತಂದವರು ಈ ಕೂಡಲೇ ಹರಾಜು ಪ್ರಕ್ರಿಯೆ ನಡೆಸಬೇಕು ಹರಾಜಿನ ಮೊತ್ತಕ್ಕಿಂತ ಐದು ಪರ್ಸೆಂಟ್ ಹೆಚ್ಚು ಪಾವತಿಸುವ  ಮೂಲ ಬಾಡಿಗೆದಾರರಿಗೆ…

Read More

ದಾವಣಗೆರೆ : ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟಿಸಿ, ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದ ಜವಾರಿ ಮುಖಂಡ ಎಸ್.ಎ.ರವೀಂದ್ರನಾಥ ಇದೇ ನವೆಂಬರ್ 29 ರಂದು ಜನ್ಮ ದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಹಾಗೂ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಾದ ಕೆ.ಬಿ ಕೊಟ್ರೇಶ್ ಅವರು ಎಸ್ ಎ ಆರ್ ಅವರೊಂದಿಗಿನ ಒಡನಾಟವನ್ನು ನಮ್ಮೊಂದಿಗೆ ಬಿಚ್ವಿಟ್ಟಿದ್ದಾರೆ.ಎಸ್ ಎ.ರವೀಂದ್ರನಾಥ ಅವರ ವ್ಯಕ್ತಿತ್ವ ಹಾಗೂ ಆತ್ಮೀಯತೆಯ ಬಗ್ಗೆ ದಾವಣಗೆರೆ ವಿಜಯದೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಆರ್ ಎಸ್ ಎಸ್ ಬಿಟ್ಟು ಎಸ್ ಎ ಆರ್ ಇಲ್ಲ….ಅದೇ ರೀತಿ ದಾವಣಗೆರೆಯಲ್ಲಿ ಎಸ್ ಎ ಆರ್ ಬಿಟ್ಟು ಸಂಘ ಇಲ್ಲ ರವೀಂದ್ರನಾಥ ಅವರು ಸಂಘಪರಿವಾರದ ಜೊತೆಗೆ ಬೆಳೆದು ಕೆಲಸಗಳನ್ನು ಮಾಡಿ ಜನರನ್ನು ಬೆಳೆಸಿ ಗಮನಸೆಳೆದಿದ್ದಾರೆ. ರಾಜ್ಯದಲ್ಲೇ ಮಾದರಿಯಾದವರು ಎಸ್ ಎ ಆರ್ ಎಂದು ಮೆಲುಕು ಹಾಕಿದರು. ನಮ್ಮಂತಹ ಸಣ್ಣ ಕಾರ್ಯಕರ್ತರನ್ನು ಅವರು ಗುರುತಿಸುತ್ತಾರೆ ಹಾಗೂ ಗಮನಿಸುತ್ತಾರೆ .ಅದರಲ್ಲಿ ನಾನು ಕೂಡ ಒಬ್ಬ.ನಾನು ಕೂಡ ಅವರ ಆದರ್ಶಗಳನ್ನು ಇಷ್ಟಪಡುವ…

Read More

ದಾವಣಗೆರೆ : ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಆಯ್ಕೆಯಾದ ಬೆನ್ನೇಲೆ ದೇವನಗರಿ ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಅದಕ್ಕಾಗಿ ಸ್ಥಳೀಯ ನಾಯಕರಾದ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ ಬೆಂಬಲಿಗರು ಅವರವರ ನಾಯಕರ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಹಾಲಿ ಇರುವ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಅಧಿಕಾರ ಅವಧಿ ಮುಗಿದು, ಒಂದು ವರ್ಷ ಕಳೆದಿದೆ. ಅದಕ್ಕಾಗಿಯೇ ಈಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳೀನ್ ಕುಮಾರ್ ಕಟೀಲ್ ಅಧಿಕಾರವಾದಿ ಮುಗಿದಿದ್ದರೂ, ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ. ಅದಕ್ಕಾಗಿ ಜಿಲ್ಲಾ ಬಿಜೆಪಿಯಲ್ಲಿಯೂ ಸಹ ಜಿಲ್ಲಾಧ್ಯಕ್ಷರ ಆಯ್ಕೆ ಆಗಿರಲಿಲ್ಲ. ಈಗ ರಾಜ್ಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಫಿಲ್ ಆಗಿರುವ ಕಾರಣ ಜಿಲ್ಲೆಯ ಬಿಜೆಪಿ ನಾಯಕತ್ವಕ್ಕಾಗಿ ಸೆಣಸಾಟನಡೆದಿದೆ‌. ಅದಕ್ಕಾಗಿ ತೆರೆಮರೆಯ ಆಟ ಕೂಡ ಜೋರಾಗಿದೆ. ಸದ್ಯ ಬಿಜೆಪಿ ನಾಯಕತ್ವ ಪಟ್ಟಕ್ಕಾಗಿ ಬಿಜೆಪಿ ನಾಯಕರಾದ ಜಗದೀಶ್, ಶ್ರೀನಿವಾಸ ದಾಸಕರಿಯಪ್ಪ, ಕೆ.ಎಂ.ಸುರೇಶ್, ರಾಜನಹಳ್ಳಿ ಶಿವಕುಮಾರ್ ಹೆಸರು ಜೋರಾಗಿ ಕೇಳಿ…

Read More

ಹೊನ್ನಾಳಿ : ಆಡುಮುಟ್ಟದ ಸೊಪ್ಪಿಲ್ಲ ಸಹಕಾರ ಸಂಘಗಳಿಲ್ಲದ ಊರು ಇಲ್ಲ ಎಂದು ಶಿಮುಲ್ ಉಪಾಧ್ಯಕ್ಷ ಬಸಪ್ಪ ಹೇಳಿದರು. ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟ, ಅವಳಿ ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಶಿಮುಲ್ ಉಪಾಧ್ಯಕ್ಷ ಬಸಪ್ಪ ಮಾತನಾಡಿದರು. ನಮ್ಮ ದೇಶದ ಮೊದಲ ಸಹಕಾರ ಸಂಘ ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ, 1905 ರಲ್ಲಿ ನೋಂದಾಯಿ ಸಲ್ಪಟ್ಟಿದೆ.  ಸಿದ್ದನಗೌಡ ಸಣ್ಣರಾಮನಗೌಡ ಅವರು ಸಂಸ್ಥಾಪಕ ಅಧ್ಯಕ್ಷರಾಗಿದ್ದರು ಮತ್ತು ಅವರನ್ನು ನಮ್ಮ ದೇಶದ ಸಹಕಾರ ಚಳವಳಿಯ ಪಿತಾಮಹ ಎಂದೇ ಕರೆಯಲಾಗುತ್ತದೆ ಎಂದು ಬಣ್ಣಿಸಿದರು. ಗದಗಿನಲ್ಲಿ ಸಣ್ಣದಾಗಿ ಸಂಘ ಪ್ರಾರಂಭಿಸಿದ್ದ ಸಹಕಾರ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪರಿಣಾಮ ಇಂದು ಸಹಕಾರಿ ಸಂಘ ಹೆಮ್ಮರವಾಗಿ…

Read More

ದಾವಣಗೆರೆ: ರಾತ್ರಿ 12 ರ ನಂತರ ಏಕಾಂಗಿಯಾಗಿ ಮಹಿಳೆ ಓಡಾಟ ನಡೆಸಿದಾಗ ನಮಗೆ ಸ್ವತಂತ್ರ್ಯ ಸಿಕ್ಕಿದಂತೆ ಎಂದು ಮಹಾತ್ಮ ಗಾಂಧಿ ಹೇಳಿರುವುದನ್ನು ಆಗಾಗ ಎಲ್ಲರೂ ನೆನೆಸಿಕೊಳ್ಳುತ್ತಿದ್ದೀವಿ..ಆದರೀಗ ಅದು ದಾವಣಗೆರೆಯಲ್ಲಿ ಪ್ರಾಯೋಗಿಕವಾಗಿ ಬಳಕೆಯಾಗುತ್ತಿದೆ. ಇಷ್ಟೂ ದಿನ ರಾತ್ರಿ ಗಸ್ತಿಗೆ ಪುರುಷರು ಮಾತ್ರ ನೇಮಿಸಲಾಗುತ್ತಿತ್ತು..ಆದರೀಗ ಮಹಿಳೆಯರು ಪ್ರಥಮ ಬಾರಿಗೆ ರಾತ್ರಿ ಗಸ್ತಿಗೆ ಹೊರಡಲಿದ್ದು, ಎಸ್ಪಿ ಉಮಾಪ್ರಶಾಂತ್ ನಗರದ ಜಯದೇವ ವೃತ್ತದಲ್ಲಿ ಚಾಲನೆ ನೀಡಿದ್ದಾರೆ. ಜಿಲ್ಲೆಯಾದ್ಯಂತ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವುದ ಕ್ಕಾಗಿ ಪೊಲೀಸ್ ಇಲಾಖೆಯು ಹಲವು ಯೋಜನೆಗಳಡಿ 24×7 ಕಾರ್ಯನಿರ್ವಹಿಸುತ್ತಿತ್ತು..ಈಗ ಆ ಸಾಲಿಗೆ ಮಹಿಳೆಯರು ಕೂಡ ಸೇರ್ಪಡೆಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎನ್ನುವ ಮಾತಿನ ನಡುವೆಯೂ ನಿರ್ಭೀತಿವಾಗಿ ಮಹಿಳೆಯರು ರಾತ್ರಿ ಗಸ್ತು ತಿರುಗಲಿದ್ದು, ಪುಂಡಾಟ ಮಾಡುವವರಿಗೆ ಲಾಠಿ ಬೀಸಲಿದ್ದಾರೆ. ನಗರ ಹಾಗೂ ತಾಲೂಕುಗಳಲ್ಲಿ ಪೊಲೀಸ್ ಗಸ್ತು ವಾಹನ ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವ 4 ಗಂಟೆಯವೆರೆಗೆ ಸಂಚರಿಸುತ್ತಿದ್ದು, ಇಬ್ಬರು ಪುರುಷರೊಂದಿಗೆ ಒಬ್ಬ ಮಹಿಳೆ ರಾತ್ರಿ ಗಸ್ತಿನಲ್ಲಿ ಇರುವರು‌ ರಾತ್ರಿ…

Read More