- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.
Author: davangerevijaya.com
ಶ್ರೀಮತಿ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಎಸ್.ಎ. ರವೀಂದ್ರನಾಥ್ ಅವರ ಜನ್ಮದಿನ ನ. 26 ರಂದು ಕಾರ್ಯಕ್ರಮ. ದಾವಣಗೆರೆ. ; ಮಾಜಿ ಸಚಿವರು ಹಾಗೂ ಹಿರಿಯರಾದ ಎಸ್ಎ ರವೀಂದ್ರನಾಥ್ ಅವರ ಜನ್ಮದಿನ ಇದೇ ನ. 26 ರಂದು ನಡೆಯಲಿದ್ದು ಹುಟ್ಟುಹಬ್ಬ ನಿಮಿತ್ತ ಶಿರಮಗೊಂಡನಹಳ್ಳಿ ಸಮೀಪದಲ್ಲಿರುವ ಶ್ರೀಮತಿ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ಆಗಮಿಸಲಿದ್ದು ಇದರ ಬಗ್ಗೆ ಇಂದು ಪೂರ್ವಭಾವಿ ಸಭೆಯನ್ನು ಮಾಜಿ ಸಚಿವರಾದ ಎಂ.ಪಿ .ರೇಣುಕಾಚಾರ್ಯ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಸವರಾಜ್ ನಾಯಕ್, ಜಿಲ್ಲಾಧ್ಯಕ್ಷರಾದ ರಾಜಶೇಖರ್ ನಾಗಪ್ಪ. ಮುಖಂಡರುಗಳಾದ ಮಾಡಾಳ್ ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್ ಅಜಯ್ ಕುಮಾರ್, ಚಂದ್ರಶೇಖರ್ ಪೂಜಾರ್ ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.
ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ಬಿನ ಆಟಗಾರ ಕೌಶಿಕ್ ಎ ಟಿ ರಾಷ್ಟ್ರಮಟ್ಟಕ್ಕೆ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ . ದಿನಾಂಕ ಇದೇ ನವಂಬರ್ 21 ರಿಂದ 26 ರ ವರೆಗೂ ನಡೆಯುವ 68ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ 2024-25 ಪಟಿಯಾಲ ಪಂಜಾಬ್ ನಲ್ಲಿ ನಡೆಯಲಿದ್ದು. ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ಬಿನ ಆಟಗಾರ ಕೌಶಿಕ್ ಎ ಟಿ ಆಯ್ಕೆಯಾಗಿದ್ದಾರೆ . ತಂದೆ ಅರುಣ್ ಟಿ ಎಂ ತಾಯಿ ರೇಖಾ ಎ.ಟಿ ಇವರಿಗೆ ಕ್ಲಬ್ಬಿನ ಗೌರವ ಅಧ್ಯಕ್ಷರಾದ ರಾಮಮೂರ್ತಿ ಸಿ, ಅಧ್ಯಕ್ಷರಾದ ಕಿರಣ್ ಕುಮಾರ್ ಆರ್, ಉಪಾಧ್ಯಕ್ಷರಾದ ಗಡಿಗುಡಾಳ್ ಮಂಜುನಾಥ್, ವಿಜಯ್ ಕುಮಾರ್, ಕಾರ್ಯದರ್ಶಿ ವೀರೇಶ್ ಆರ್, ಸಹ ಕಾರ್ಯದರ್ಶಿ ಉದಯ್ ಸ್ವಾಮಿ, ಖಜಾಂಚಿಯಾದ ಪ್ರಸನ್ನ ಕುಮಾರ್, ತರಬೇತಿದಾರರಾದ ದರ್ಶನ್ ಆರ್ ಹಾಗೂ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ಬಿನ ಎಲ್ಲಾ ಸದಸ್ಯರು ಶುಭ ಕೋರುತ್ತಾರೆ
ಸಿದ್ದರಾಮಯ್ಯ ಅವರು ಸತ್ಯಾಸತ್ಯತೆ ಯನ್ನು ಜನರ ಮುಂದಿಡಲು ವಿಶೇಷ ತನಿಖಾ ತಂಡ ರಚಿಸಿ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯ. ದಾವಣಗೆರೆ: ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್ ಕಮಲ ಮಾಡುತ್ತಿರುವುದಾಗಿ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತ್ಯಾಸತ್ಯತೆ ಯನ್ನು ಜನರ ಮುಂದಿಡಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ವೊಂದನ್ನು ರಚಿಸಿ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು. ‘ಕಾಂಗ್ರೆಸ್‌ಗೆ ರಾಜ್ಯದ ಜನರು ಜನಾದೇಶ ನೀಡಿದ್ದಾರೆ. ಇದನ್ನು ಬಿಜೆಪಿ ಗೌರವಿಸುತ್ತಿದೆ. ಆಡಳಿತ ಪಕ್ಷವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮಾಡಿಲ್ಲ. ಪ್ರತಿಪಕ್ಷವಾಗಿ ನಮ್ಮ ಕರ್ತವ್ಯ ಮಾತ್ರ ಮಾಡುತ್ತಿದ್ದೇವೆ. ಮಂಡ್ಯ ಶಾಸಕ ಪಿ.ರವಿಕುಮಾರ್ ಗಣಿಗ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾದ ದಾಖಲೆಗಳನ್ನು ಬಿಡುಗಡೆ ಮಾಡಿ’ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಎಸೆದರು. ‘ತನಿಖಾ ಸಂಸ್ಥೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇವೆ. ಆರೋಪ ಕುರಿತು ಪ್ರಕರಣ ದಾಖಲಿಸಿ, ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಿದವರನ್ನು ಬಂಧಿಸಿ. ರಾಜ್ಯ ಸರ್ಕಾರಕ್ಕೆ…
ರಾಜ್ಯ ಸಹಕಾರಿ ಸಮಾವೇಶ; ‘ಹಾಸನದ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ದಾವಣಗೆರೆ: ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂದಿರದಲ್ಲಿ ರಾಜ್ಯ ಸಹಕಾರಿ ಸಮಾವೇಶವನ್ನು ನ.22ರಂದು ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಭಾರತಿಯ ಕಾರ್ಯಾಧ್ಯಕ್ಷ ಎಂ.ಆರ್. ಪ್ರಭುದೇವ್ ತಿಳಿಸಿದರು. ‘ಹಾಸನದ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಗೋವಿಂದ ಕಾರಜೋಳ ಸಮಾವೇಶ ಉದ್ಘಾಟಿಸಲಿದ್ದಾರೆ. ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ದೀನನಾಥ್ ಠಾಕೂರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಉದಯ ವಾಸುದೇವ್ ಜೋಶಿ, ಜಿ.ನಂಜನಗೌಡ ಪಾಲ್ಗೊಳ್ಳಲಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಹಕಾರ ಭಾರತಿಯ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎನ್.ಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿ, ಮುರುಗೇಶ್, ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್, ಮುಖಂಡರಾದ ಬಿ.ಶೇಖರಪ್ಪ, ಪರಶುರಾಮಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು
ಬೆಂಗಳೂರುನ ಶಾಂತಿನಗರದ ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೇಗದ ನಿಯಂತ್ರಣಕ್ಕೆ ಅಭಿಯಾನಕ್ಕೆ ಎಡಿಜಿಪಿ.ಶರತ್‌ಶ್ಚಂದ್ರ ಚಾಲನೆ. ಬೆಂಗಳೂರು ಅಪಘಾತದಲ್ಲಿ ಅತಿ ಹೆಚ್ಚು ಮೃತಪಟ್ಟವರು ಬೈಕ್ ಸವಾರರು ಎಂದು ನೇಮಕಾತಿ ಮತ್ತು ಕಮಿಷನರ್ ಫಾರ್ ಟ್ರಾಫಿಕ್ ಮತ್ತು ರೋಡ್ ಸೇಫ್ಟಿ ಎಡಿಜಿಪಿ ಶರತ್‌ಶ್ಚಂದ್ರ ಹೇಳಿದರು. ಶಾಂತಿನಗರದ ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೇಗದ ನಿಯಂತ್ರಣಕ್ಕೆ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. 2020ಯಿಂದ ಈ ನಾಲ್ಕು ವರ್ಷದಲ್ಲಿ ಅಪಘಾತಗಳು, ಸತ್ತವರ ಸಂಖ್ಯೆ ದುಪ್ಪಟ್ಟಾಗಿದೆ. ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರಲ್ಲಿ ಹೆಚ್ಚು ಮಂದಿ ಬೈಕ್ ಸವಾರರಾಗಿದ್ದಾರೆ. ನಾವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದರೆ, ವಾಹನ ಮಾಲೀಕರಿಗೆ ಅರಿವು ಮೂಡಬೇಕು ಎಂದರು. ಬೆಂಗಳೂರಿನಲ್ಲಿ ಆಟೊಮ್ಯಾಟಿಕ್ ಕ್ಯಾಮೆರಾ ಜೋಡಿಸಿದ್ದೇವೆ. ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ(ಐಟಿಎAಎಸ್) ಜಾರಿಗೆ ತಂದಿದ್ದೇವೆ. ಆದರೂ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಕಾರಣ, ದ್ವಿಚಕ್ರ ವಾಹನ ಸವಾರರಲ್ಲಿ ಕೆಲವರು ಹೆಲ್ಮಟ್ ಧರಿಸಿರುವುದಿಲ್ಲ. ಹೆಲ್ಮಟ್ ಧರಿಸಿದರೂ, ಬೆಲ್ಟ್ಲಾಕ್ ಮಾಡಿರುವುದಿಲ್ಲ. ನಾವು ಎಷ್ಟೇ ಆಂದೋಲನ ಮಾಡಿ ಅರಿವು ಮೂಡಿಸಿದರೂ, ಜನರಲ್ಲಿ ಜಾಗೃತಿ ಮೂಡದ ಹೊರತು, ಅಪಘಾತಗಳನ್ನು…
ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ (ಎಂಡಿ/ಎಂ ಎಸ್) ಕೋರ್ಸ್ಗಳ ಸೀಟುಗಳಿಗೆ 2024-25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. 2024-25ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳಿಗೆ ಸಂಬಂಧಿಸಿದಂತೆ, ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳು, ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ , ಕರ್ನಾಟಕ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ ಹಾಗೂ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಸಂಘದ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳು ಹಾಗೂ ರಾಜ್ಯದ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾಲಯದಡಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ ದರ ಹೆಚ್ಚಳವಾಗಿದೆ. — ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ (ಎಂ.ಡಿ/ಎಂ.ಎಸ್): ಕ್ಲಿನಿಕಲ್ ಹಳೆ ಶುಲ್ಕ 1,00,000 ಹೊಸ ಶುಲ್ಕ 1,10,000 ರೂ. ಪ್ಯಾರಾ ಕ್ಲಿನಿಕಲ್ ಹಳೆ ಶುಲ್ಕ 50,000 ರೂ., ಹೊಸ ಶುಲ್ಕ 55,000 ರೂ. ಪ್ರೀ ಕ್ಲಿನಿಕಲ್ ಹಳೆ ಶುಲ್ಕ 25,000 ರೂ., ಹೊಸ ಶುಲ್ಕ 27,500 ರೂ. —- ಖಾಸಗಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ: …
ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭ, ರೋಟರಿ ಪೂರ್ವ ಶಾಲೆಯ ವಿದ್ಯಾರ್ಥಿಗಳಿಂದ 24 ಕಲಾ ಪ್ರಕಾರಗಳಲ್ಲಿ ಪ್ರಶಸ್ತಿ ಶಿವಮೊಗ್ಗ : ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆ ರಾಜೇಂದ್ರನಗರ ಶಿವಮೊಗ್ಗ ಮತ್ತು ರವೀಂದ್ರನಗರ ಕ್ಲಸ್ಟರ್‍ನ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭದಲ್ಲಿ ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರೋಟರಿ ಪೂರ್ವ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಸುಮಾರು 40 ವಿವಿಧ ಕಲಾ ಪ್ರಕಾರಗಳಲ್ಲಿ ತಮ್ಮಲ್ಲಿದ್ದ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿ 24 ಕಲಾ ಪ್ರಕಾರಗಳಲ್ಲಿ ಪ್ರಶಸ್ತಿಗಳನ್ನು ಪಡೆದು, ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಿಂದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಕ್ಕೆ 11 ಕಲಾ ಪ್ರಕಾರಗಳಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ. ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿಸುವವಲ್ಲಿ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕ ವರ್ಗದವರ ಕೊಡುಗೆಯು ಕೂಡ ಬಹಳ ಮುಖ್ಯವಾಗಿದ್ದು, ಪ್ರಶಸ್ತಿಗೆ ಭಾಜನರಾಗಿರುವ ಪ್ರತಿಭಾವಂತ…
ನಿರಾವರಿ ಯೋಜನೆ ಸಮಗ್ರವಾಗಿ ಅನುಷ್ಠಾನ , ಕೃಷಿ ಕಾಯ್ದೆ, ವಕ್ಫ್ ಬೋರ್ಡ್ ನೀತಿ ವಿವಿಧ ಬೇಡಿಕೆ ಈಡೇರಿಕೆ ಬಗ್ಗೆ ನ.೨೦ ರಂದು ಸಭೆ ದಾವಣಗೆರೆ; ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು (ವಾಸುದೇವ ಮೇಟಿ ಬಣ) ಇದೇ ನ.೨೦ ರಂದು ಬೆಳಿಗ್ಗೆ ೧೦.೩೦ ಕ್ಕೆ ನಗರದ ಎಪಿಎಂಸಿ ಭವನದಲ್ಲಿ ರಾಜ್ಯ ಸಮಿತಿ ಸಭೆ ಕರೆಯಲಾಗಿದೆ ಎಂದು ಸೇನೆಯ ಜಿಲ್ಯಾಧ್ಯಕ್ಷ ಗುಮ್ಮನೂರು ಬಸವರಾಜ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ವಿರುದ್ಧ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಕೈ ಬಿಡಬೇಕು. ಜಿಲ್ಲೆಯಲ್ಲಿ ನಿರಾವರಿ ಯೋಜನೆಯನ್ನು ಸಮಗ್ರವಾಗಿ ಅನುಷ್ಠಾನ ಗೊಳಿಸಬೇಕು. ರೈತರ ಬೆಳೆಗಳನ್ನು ಖರೀದಿ ಕೇಂದ್ರಗಳನ್ನು ಕೂಡಲೇ ತರಬೇಕು. ಎಲ್ಲಾ ಜಿಲ್ಲೆಯಲ್ಲಿ ಬಗರ್ ಹುಕ್ಕಂ ಸಾಗುವಳಿದಾರರಿಗೆ ಹಕ್ಕುಪತ್ರವನ್ನು ನೀಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಯನ್ನು ಕೈಬಿಡಬೇಕು. ರೈತರ ಜಮೀನಿನ ಪಹಣಿಯಲ್ಲಿ ವಾಕ್ ಬೋರ್ಡ್ ನೀತಿಯನ್ನು ಕೈಬಿಡಬೇಕು. ಮತ್ತು ಹಲವಾರು ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ. ರೈತರು ಮತ್ತು ಬಡವರು ಕೂಲಿ-ಕರ್ಮಿಕರು ಈ ಸಭೆಗೆ…
ಬಸವಾಪಟ್ಟಣ: ಸಮೀಪದ ಮರಬನಹಳ್ಳಿಯ ಜನವಸತಿ ಪ್ರದೇಶದಲ್ಲಿ ಕರಡಿಯೊಂದು ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ‘ಮರಬನಹಳ್ಳಿ ಕುರುಬರಹಳ್ಳಿ ರಸ್ತೆಯಲ್ಲಿ ನಮ್ಮದು ಒಂಟಿ ಮನೆ ಇದ್ದು, ಹಲವು ದಿನಗಳಿಂದ ಮನೆಯ ಮುಂದೆ ಕರಡಿ ಓಡಾಡುತ್ತಿದೆ. ಭಾನುವಾರ ರಾತ್ರಿ ಕರಡಿ ಓಡಾಡಿರುವ ದೃಶ್ಯ ಮನೆಯ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಇಲ್ಲಿ ಬೋನು ಅಳವಡಿಸಿ ಕರಡಿಯನ್ನು ಸೆರೆ ಹಿಡಿಯಬೇಕು’ ಎಂದು ಗ್ರಾಮದ ನಿವಾಸಿ ಪಂಚಾಕ್ಷರಯ್ಯ ಒತ್ತಾಯಿಸಿದ್ದಾರೆ. ‘ಗ್ರಾಮದಲ್ಲಿ ನಾಲ್ಕೈದು ದಿನಗಳಿಂದ ಕರಡಿ ಸಂಚರಿಸುತ್ತಿದ್ದು, ಇಲ್ಲಿನ ಗದ್ದೆ ತೋಟಗಳಿಗೆ ಹೋಗುವ ರೈತರು ಹಾಗೂ ಹತ್ತಿರದ ಕುರುಬರಹಳ್ಳಿ ಮತ್ತು ರೆಡ್ಡಿಹಳ್ಳಿಯ ಜನ ಭಯಗೊಂಡಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿ.ಎಂ.ಚನ್ನಬಸಪ್ಪ ಹೇಳಿದರು. ‘ಮರಬನಹಳ್ಳಿಯಲ್ಲಿ ಕರಡಿ ಕಾಣಿಸಿಕೊಂಡಿರುವ ಗೊತ್ತಾಗಿದೆ. ಗ್ರಾಮಸ್ಥರಿಂದ ಮಾಹಿತಿ ಪಡೆದು ಬೋನು ಅಳವಡಿಸಿ ಕರಡಿಯನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಾವಿನಕಟ್ಟೆ ವಲಯದ ಅರಣ್ಯಾಧಿಕಾರಿ ಮನೋಹರ್ ತಿಳಿಸಿದ್ದಾರೆ
ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರಾಗಿ ಸೇವೆಗೆ, ಜಿಲ್ಲಾ ಸಾಹಿತ್ಯ ಪ್ರಶಸ್ತಿ, ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ. ದಾವಣಗೆರೆ; ಗೌರಮ್ಮ. ಪಿ ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿರುವ 2024 ರ ಸಾಲಿನ “ಮಹಲಿಂಗರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ” ಗೆ ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಆಯ್ಕೆಯಾಗಿದ್ದಾರೆ. ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಹಾಗೂ ಶ್ರೀಮತಿ ಗೌರಮ್ಮ ಪಿ ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್(ರಿ) ನ ಅಧ್ಯಕ್ಷ ಮೋತಿ ಆರ್ ಪರಮೇಶ್ವರ ರಾವ್ ತಿಳಿಸಿದ್ದಾರೆ. ಗೌರಮ್ಮ .ಪಿ ಮೋತಿ ರಾಮರಾವ್ ಗೌರವಾರ್ಥ 2002ರಲ್ಲಿ ಸ್ಥಾಪಿತವಾದ ಪ್ರತಿಷ್ಠಿತ “ಮಹಲಿಂಗರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ”ಯು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸಿದ ಸಾಹಿತಿಗಳಿಗೆ ಕೊಡಲಾಗುತ್ತದೆ. ಕುವೆಂಪು ಕನ್ನಡ ಭವನದಲ್ಲಿ ನಡೆದ ಪ್ರಶಸ್ತಿಯ ಆಯ್ಕೆ ಸಮಿತಿಯ ಸಭೆಯಲ್ಲಿ ಮಲ್ಲಿಕಾರ್ಜುನ ಕಡಕೋಳರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. …