ಚಿತ್ರದುರ್ಗ : ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಅಯೋಧ್ಯಾ ಶ್ರೀರಾಮ ಮಂದಿರದ ಮಂತ್ರಾಕ್ಷತೆ , ಭಾವಚಿತ್ರ ಮತ್ತು ಕರಪತ್ರ ಪುರಪ್ರವೇಶ ಕಾರ್ಯಕ್ರಮ‌ ಅದ್ದೂರಿಯಾಗಿ ನಡೆಯಿತು.

ಹಿರೆಗುಂಟನೂರು ಹೋಬಳಿಯ ಪ್ರತಿ ಮನೆ ಮನೆಗು ವಿತರಿಸಲು ಅಯೋಧ್ಯೆಯಿಂದ ಕಳುಹಿಸಿರುವ ಮಂತ್ರಾಕ್ಷತೆ, ಭಾವಚಿತ್ರ ಮತ್ತು ಕರಪತ್ರಗಳನ್ನು ಭೀಮಸಮುದ್ರ ಗ್ರಾಮಕ್ಕೆ ಸ್ವಾಗತಿಸಲಾಯಿತು.

ಅದರ ಸ್ವಾಗತ ಮೆರವಣಿಗೆಯು ಭೀಮಸಮುದ್ರ ಬಸ್ ನಿಲ್ದಾಣದಿಂದ ಈಶ್ವರ ದೇವಸ್ಥಾನದವರೆಗೆ ಸಕಲ ಮಂಗಳವಾದ್ಯಗಳೊಂದಿಗೆ ನೆರವೆರೀತು . ಬಿಜೆಪಿ ನಾಯಕ ಜಿ.ಎಸ್.ಅನೀತ್ ಇದರ ನೇತೃತ್ವವಹಿಸಿದ್ದರು.

ಈ ಮಂತ್ರಾಕ್ಷತೆಯ ಪುರಪ್ರವೇಶ ಹಾಗೂ ಮೆರವಣಿಗೆ ಕಾರ್ಯಕ್ರಮದಲ್ಲಿ ಮಂತ್ರಾಕ್ಷತೆ ಕಾರ್ಯಕ್ರಮದ ಜಿಲ್ಲಾ ಹಾಗೂ ಗ್ರಾಮಾಂತರ ತಂಡದ ಪ್ರಮುಖರಾದ ದೇವರಾಜ್ ಕೋಟ್ಲಾ , ರುದ್ರೇಶ್ ,ನಂದಿ ನಾಗರಾಜ್ ,ವೀರೇಶ್ ಜಾಳಿಕಟ್ಟೆ, ಕಲ್ಲೇಶಯ್ಯ ರವರು ಹಾಗೂ ಭೀಮಸಮುದ್ರ ಗ್ರಾಮದ ಮಂತ್ರಾಕ್ಷತೆ ಕಾರ್ಯಕ್ರಮದ ಮುಖಂಡರಾದ ಮಹೇಶ್,ಮಲ್ಲಿಕಾರ್ಜುನ್ ,ಅಶೋಕ್ ,ಕುಮಾರ್,ಮಾನಂಗಿ ಜಯಪ್ಪ ಹಾಗೂ ಕಡ್ಲೆಗುದ್ದು ಭೀಮಸಮುದ್ರ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.

Share.
Leave A Reply

Exit mobile version