
ದಾವಣಗೆರೆ : ಅಖಿಲ ಭಾರತ ವೀರಶೈವ ಮಹಾಸಭಾದ ಅಧಿವೇಶನಕ್ಕೆ ಆಗಮಿಸುವ ಸಮಾಜ ಬಾಂಧವರಿಗೆ ಆತಿಥ್ಯ ನೀಡಲು ದೇವನಗರಿ ಖ್ಯಾತಿಯ ದಾವಣಗೆರೆ ಸಜ್ಜಾಗಿದೆ.ಬೆಳಗಿನಿಂದ ರಾತ್ರಿಯವರೆಗೂ ನಿರಂತರವಾಗಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಸುಮಾರು 400ಕ್ಕೂ ಹೆಚ್ಚು ಬಾಣಸಿಗರು ಭೋಜನ ತಯಾರಿಸುತ್ತಿದ್ದಾರೆ.
ಸುಮಾರು ಐದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 10ರವರೆಗೆ ನಿರಂತರವಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮುಖಂಡ ಅಜ್ಜಂಪುರ ಶೆಟ್ರು ವಿಜಯಕುಮಾರ್ ಮಾಹಿತಿ ನೀಡಿದರು.
ಗೋಧಿ ಹುಗ್ಗಿ ಪಾಯಸ, ಅನ್ನ ಸಾಂಬಾರ್


ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಧ್ಯ ಕರ್ನಾಟಕದ ಸ್ಪೆಷಲ್ ಗೋಧಿ ಹುಗ್ಗಿ ಭೋಜನದಲ್ಲಿರಲಿದೆ.ಮಧ್ಯಕರ್ನಾಟಕದಲ್ಲೇ ಎಲ್ಲಾ ಸಮಾರಂಭಗಳಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸಲ್ಪಡುವ ಗೋಧಿಹುಗ್ಗಿ, ಅನ್ನ ಸಾರು ಸೇರಿದಂತೆ ವಿವಿಧ ಖಾದ್ಯ ಮಾಡಲಾಗಿದೆ.ಇದು ಅತ್ಯಂತ ದೊಡ್ಡದಾದ ಸಮಾರಂಭ ಹಾಗಾಗಿ ಸಣ್ಣ ಪುಟ್ಟ ಪ್ರಮಾದಗಳಾಗಬಹುದು ಇದು ನಮ್ಮದೇ ಸಮಾಜದ ಕಾರ್ಯಕ್ರಮ ಇಲ್ಲಿ ಕಾರ್ಯಕರ್ತರೂ ನಾವೇ ಅತಿಥಿಗಳು ನಾವೇ ಆದ್ದರಿಂದ ಎಲ್ಲವನ್ನೂ ಅನುಸರಿಸಿಕೊಂಡು ಹೋಗಬೇಕಿದೆ.

ಬೆಳಗ್ಗೆ 5 ಗಂಟೆಯಿಂದಲೇ ಬೋಜನ
ಉತ್ತರ ಕರ್ನಾಟಕದ ಭಾಗದಿಂದ ಬೆಳಗ್ಗೆ 5 ಗಂಟೆಯಿಂದಲೇ ಸಮಾಜ ಬಾಂಧವರು ಆಗಮಿಸುತ್ತಿದ್ದಾರೆ ಆದ್ದರಿಂದ ಬೆಳಗ್ಗೆ 5 ಕ್ಕೆ ತಿಂಡಿ ವ್ಯವಸ್ಥೆ ಮಾಡಲಾಗಿದೆ ಹಾಗೂ ಬೆಳಗ್ಗೆ 10 ರಿಂದಲೇ ನಿರಂತರವಾಗಿ ಭೋಜನ ಪ್ರಾರಂಭವಾಗಲಿದೆ ಎಂದರು.
ಭೋಜನದ ಮೆನು ಏನು?
ಸಮಾವೇಶದಲ್ಲಿ ಭಾಗವಹಿಸುವ 2 ಲಕ್ಷಕ್ಕೂ ಅಕ ಮಂದಿಗೆ ಭೂರೀ ಭೋಜನದ ವ್ಯವಸ್ಥೆ ಮಾಡಲಾಗಿದೆ. ಮೂರೂ ದಿನ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಎಲ್ಲರಿಗೂ ಊಟ ಲಭ್ಯವಿರಲಿದೆ. ಡಿ.23ರಂದು ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಕೇಸರಿಬಾತ್, ಟೀ-ಕಾಫಿ, ಮಧ್ಯಾಹ್ನ ಊಟಕ್ಕೆ ಜೋಳದ ರೊಟ್ಟಿ,, ಗೋಧಿ ಪಾಯಸ, ಲಾಡು, ಅನ್ನ ಸಾಂಬಾರ್; ರಾತ್ರಿ ಊಟಕ್ಕೆ ಬಿಸಿಬೇಳೆ ಬಾತ್, ಮೊಸರನ್ನ ಉಪ್ಪಿನಕಾಯಿ ಇರಲಿದೆ.
ಮಂಡಕ್ಕಿ ಉಸುಳಿ
ಡಿ.24ರಂದು ಬೆಳಗ್ಗೆ ಮಂಡಕ್ಕಿ ಉಸುಳಿ, ಮೆಣಸಿನಕಾಯಿ, ಪೊಂಗಲ್, ಮಧ್ಯಾಹ್ನ ಊಟಕ್ಕೆ ಶಾವಿಗೆ ಪಾಯಸ, ಪಲಾವ್, ಮೊಸರು ಬಜ್ಜಿ, ಅನ್ನ ಸಾಂಬಾರ್, ರಾತ್ರಿ ಊಟಕ್ಕೆ ಅನ್ನ ಸಾಂಬಾರ್ ಮೆನು ಅಂತಿಮವಾಗಿದೆ. ಎರಡೂ ದಿನ ಬೆಳಗ್ಗೆ 8ರಿಂದ ರಾತ್ರಿ 10 ಗಂಟೆವರೆಗೆ ನಿರಂತರ ಅನ್ನ ದಾಸೋಹ ನಡೆಯಲಿದೆ.