ಚನ್ನಗಿರಿ; ಕಲ್ಬುರ್ಗಿಯಲ್ಲಿ ವಕೀಲನ ಭೀಕರ ಹತ್ಯೆಯನ್ನು ಖಂಡಿಸಿ ಚನ್ನಗಿರಿ ವಕೀಲರ ಸಂಘದ ವತಿಯಿಂದ ಸೋಮವಾರ ಕೋರ್ಟ್ ಕಲಾಪದಿಂದ ಹೊರ ನಡದು ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ತೆರಳಿ ಗ್ರೇಡ್ 2 ತಹಶೀಲ್ದಾರ್ ರುಕ್ಮಿಣಿಬಾಯಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಹಿರಿಯ ವಕೀಲ ರಾಮಚಂದ್ರರಾವ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈರಣ್ಣ ಗೌಡ ಪಾಟೀಲರ ಕೃತ್ಯಕ್ಕೆ ಸಂಬಧಿಸಿದಂತೆ ಈಗಾಗಲೇ ಅರೋಪಿಗಳನ್ನು ಬಂಧಿಸಿದ್ದು ಉಳಿದ ಆರೋಪಿಗಳನ್ನು ಸಹ ತಕ್ಷಣವೇ ಬಂದಿಸಬೇಕು.

ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವ ಮೂಲಕ ವಕೀಲರ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿಕೊಡಬೇಕು. ಮತ್ತು ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ತಕ್ಷಣವೇ ಜಾರಿಗೊಳಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಜಪ್ಪ, ಮಲ್ಲಿಕಾರ್ಜುನ್, ಜಗದೀಶ್, ಎಂ ರಾಜಪ್ಪ ಇತರರು ಹಾಜರಿದ್ದರು.

Share.
Leave A Reply

Exit mobile version