ಶಿವಮೊಗ್ಗ : ಆವಿಷ್ಕಾರವೆಂಬುದು ತಲತಲಾಂತರಗಳಿAದ ಯಾವುದೇ ರೀತಿಯ ಜಾತಿ ಧರ್ಮವನ್ನಾಗಲಿ, ವಯಸ್ಸಿನಾಗಲಿ, ಗಂಡು ಹೆಣ್ಣೆಂಬ ತಾರತಮ್ಯವನ್ನಾಗಲಿ ಎಂದಿಗೂ ಪರಿಗಣಿಸದೆ ಮನಸ್ಸಿನ ಅಂತರಾಳದಲ್ಲಿ ಹುದುಗಿರುವ ಅದಮ್ಯ ವಾಂಚೆಯನ್ನು ಪರಿಗಣನೆಗೆ ತೆಗೆದುಕೊಂಡು, ಅತ್ಯುನ್ನತವಾದದ್ದನ್ನು ಸಾಧಿಸಲು ತನ್ಮೂಲಕ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರಲ್ಲಿ ಯಾವುದೇ ರೀತಿಯ ಅನುಮಾನಗಳಿಲ್ಲ ಎಂದು ವಿದ್ಯುಕ್ತವಾಗಿ ಉದ್ಘಾಟಿಸಲ್ಪಟ್ಟ ಶಿವಮೊಗ್ಗ ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಐಇಇಇ ಸಹಭಾಗಿತ್ವದಲ್ಲಿ ಜರುಗಿದ ಅಮಾತೆ – ೨೦೨೪ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ನಿರೂಪಿಸಲ್ಪಟ್ಟಿತು.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿರುವ, ದಕ್ಷಿಣ ಕೊರಿಯಾ ದೇಶದ ಗುಂನ್ಸನ್ ಪ್ರದೇಶದ ಕುನ್ಸನ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಇನ್ – ಹೋ – ರಾ ಮಾತನಾಡಿ, “ ಸಂಶೋಧನಾ ಕ್ಷೇತ್ರದಲ್ಲಿ ಪ್ರಪಂಚದ ವಿವಿಧ ದೇಶಗಳು ನಡೆಸುತ್ತಿರುವ ಅದ್ವಿತೀಯ ಸಂಶೋಧನಾ ವಿಷಯಗಳ ಬಗ್ಗೆ ಈ ರೀತಿಯ ಸಮ್ಮೇಳನಗಳು ಒಡಮೂಡಿಸುವ ವಿಚಾರಗಳ ಬಗ್ಗೆ ಒಂದು ಉತ್ತಮ ವೇದಿಕೆಗಳು ನಿರ್ಮಾಣಗೊಳ್ಳುವಲ್ಲಿ ಸಹಕಾರಿಯಾಗಲಿವೆ. ಈ ಬಗೆಯ ಅಂತರಾಷ್ಟ್ರೀಯ ಸಮ್ಮೇಳನಗಳು ತಮ್ಮ ತಮ್ಮ ದೇಶಗಳಲ್ಲಿ ಕಂಪ್ಯೂಟರ್ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಸೇಜ್ ಲರ್ನಿಂಗ್ ಹಾಗೂ ತತ್ಸಂಬAಧ ಕ್ಷೇತ್ರಗಳಲ್ಲಿ ಜರುಗುತ್ತಿರುವ ಸಂಶೋಧನೆಗಳ ಬಗ್ಗೆ ಆಮೂಲಾಗ್ರ ಮಾಹಿತಿಯನ್ನು ನೀಡುವಲ್ಲಿ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿಕೊಡಲಿದೆ ಎಂದರು.
ತಮ್ಮ ಜೀವಮಾನದಲ್ಲಿ ನಡೆಸಿದ ಹಲವಾರು ಸಂಶೋಧನೆಗಳ ಬಗ್ಗೆ ಅನೇಕ ಪ್ರಯುಕ್ತ ಮಾಹಿತಿಗಳನ್ನು ನೀಡುವ ಮೂಲಕ ಸಾಮಾಜಿಕ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಪ್ರಯತ್ನಿಸಬೇಕೆಂದು ಉಪಸ್ಥಿತರಿದ್ದ ಸಭಿಕರ ಮನ ಮುಟ್ಟುವಂತೆ ಹಲವು ಪ್ರಾಯೋಗಿಕ ಉದಾಹರಣೆಗಳ ಸಮೇತ ಸೂಚ್ಯವಾಗಿ ತಿಳಿಸಿದರು. ಸಂಶೋಧನೆ ಎಂಬುದು ಒಂದು ದೇಶದ ಸಾಂಸ್ಕೃತಿಕ, ಪಾರಿವಾರಿಕ, ವೈಜ್ಞಾನಿಕ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಪ್ರತಿನಿಧಿಯಾಗಿ ಹೊರಹೊಮ್ಮುವಲ್ಲಿ ಸಹಕಾರಿಯಾಗಲಿದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂದು ನುಡಿದರು.”
ಶಿವಮೊಗ್ಗ ನಗರದ ಪಿಇಎಸ್ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಮಾತೆ – ೨೦೨೪ರ ಗೌರವಾನ್ವಿತ ಅತಿಥಿಯಾಗಿ ಆಹ್ವಾನಿತರಾಗಿದ್ದ ಶ್ರೀ. ಸುಭಾಷ್ ಬಿ ಆರ್ , “ ಪ್ರಸ್ತುತ ಕಾಲಘಟ್ಟದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಇಂಜಿನಿಯರಿAಗ್ ಕ್ಷೇತ್ರವು ನೀಡುತ್ತಿರುವ ಸಂಶೋಧನಾತ್ಮಕ ಕೊಡುಗೆಗಳ ಬಗ್ಗೆ ಪಕ್ಷಿ ನೋಟ ವಿವರಣೆಯನ್ನು ಉಪಸ್ಥಿತರಿದ್ದ ಸಭಿಕರ ಮುಂದೆ ಹಲವಾರು ಪ್ರಾಯೋಗಿಕ ಉದಾಹರಣೆಗಳ ಸಮೇತ ಮಂಡಿಸುವಲ್ಲಿ ಯಶಸ್ಸನ್ನು ಪಡೆದ ಇಂಜಿನಿಯರ್ ಗಳ ಬಗ್ಗೆ ಕೃತಜ್ಞತೆಯನ್ನು ತಿಳಿಸಿದರು. ಮೆಡಿಕಲ್ ಕ್ಷೇತ್ರದಲ್ಲಿ ಜನರ ಆರೋಗ್ಯವನ್ನು ಸರ್ವಾಂಗೀಣ ರೀತಿಯಲ್ಲಿ ಸುಧಾರಿಸುವ ಮಟ್ಟಕ್ಕೆ ಹಾಗೂ ಅಸಾಧಾರಣ ಮಟ್ಟದಲ್ಲಿ ಮೆಡಿಕಲ್ ಕ್ಷೇತ್ರದ ತಂತ್ರಜ್ಞಾನಗಳ ಸದ್ಬಳಕೆ ಮತ್ತು ವಿನಿಯೋಗದ ಬಗ್ಗೆ ಜರುಗುತ್ತಿರುವ ಪ್ರಯತ್ನಗಳನ್ನು ತುಂಬು ಹೃದಯದಿಂದ ಶ್ಲಾಘಿಸಿದರು. ಒಂದು ಕಾಲದಲ್ಲಿ ಗಗನಕುಸುಮವೆಂದು ಬಿಂಬಿತವಾದ ವೈದ್ಯಕೀಯ ಶಸ್ತ್ರಚಿಕಿತ್ಸೆಗಳು, ಔಷದೋಪಚಾರಗಳು ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದ ಎಲ್ಲಾ ವರ್ಗದ ಜನಗಳಿಗೂ ತಲುಪುವಲ್ಲಿ ಪ್ರಯತ್ನಗಳು ಜರುಗುತ್ತಾ ಬಂದಿರುವುದು ವಿಶ್ವಸನೀಯ ಎಂದು ನುಡಿದರು.”
ಶಿವಮೊಗ್ಗದ ಪಿಇಎಸ್ ಟ್ರಸ್ಟ್ ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ನಾಗರಾಜ್ ಅಧ್ಯಕ್ಷತೆವಹಿಸಿ ಮಾತನಾಡಿ, “ ಮಲೆನಾಡು ಭಾಗದ ವಿದ್ಯಾರ್ಥಿ ಸಮೂಹಕ್ಕೆ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಅನುವು ಮಾಡಿಕೊಡುವಂತೆ ತಾಂತ್ರಿಕ, ಕೈಗಾರಿಕಾ ಹಾಗೂ ಇಂಜಿನಿಯರಿAಗ್ ಕ್ಷೇತ್ರದಲ್ಲಿ ಜರುಗುತ್ತಿರುವ ಸಂಶೋಧನೆಗಳು ಮಾನವ ಸಮಾಜದ ಆಮೂಲಾಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿವೆ. ಶಿವಮೊಗ್ಗದಂತಹ ನಗರಗಳಿಗೂ ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ಘಟಿಸುವ ಸಂಶೋಧನೆಗಳ ಪ್ರಸ್ತುತತೆಯನ್ನು ತಿಳಿಸಲು ಈ ರೀತಿಯ ಸಮ್ಮೇಳನಗಳು ಒಂದು ಉತ್ತಮ ವೇದಿಕೆಯಾಗಿ ರೂಪುಗೊಳ್ಳುವಲ್ಲಿ ಯಾವುದೇ ರೀತಿಯ ಅತಿಶಯೋಕ್ತಿಗಳಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ಪಿ ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಜೊತೆ ಜೊತೆಗೆ ಪ್ರಪಂಚದಲ್ಲೆಡೆ ನಡೆಯುತ್ತಿರುವ ಅದ್ವಿತೀಯ ಸಂಶೋಧನೆಗಳ ಪ್ರಸ್ತುತತೆ ಹಾಗೂ ಅನಿವಾರ್ಯತೆಯ ಬಗ್ಗೆ ವಿಚಾರ ವಿನಿಮಯ ಮಾಡುವ ಈ ಬಗೆಯ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಪ್ರತಿ ವರ್ಷವೂ ನಡೆಸುವಂತೆ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತದೆ ಎಂಬುದನ್ನು ಹೆಮ್ಮೆಯಿಂದ ನುಡಿದರು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ತಮ್ಮ ಕಾರ್ಯ ಕ್ಷೇತ್ರದ ಆಯ್ಕೆ, ತತ್ಸಂಬAಧ ತಮ್ಮ ಕಲ್ಪನಾ ಲಹರಿ ಹಾಗೂ ಪ್ರಾಯೋಗಿಕ ಚಾಕ ಚಕ್ಯತೆಗಳ ವೃದ್ಧಿ ಬಗೆಗಿನ ಮಾಹಿತಿಗಳನ್ನು ಪಡೆಯುವಲ್ಲಿ ಸದಾಕಾಲ ಕಾರ್ಯ ತತ್ಪರರಾಗಬೇಕೆಂದು ಪ್ರಖರವಾಗಿ ನುಡಿದರು.”
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದ ಪ್ರೊಫೆಸರ್ ಡಾ. ಇನ್ – ಹೋ – ರಾ ರವರ ಕಿರುಪರಿಚಯವನ್ನು ಇನ್ಫರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಹೆಚ್ ಆರ್ ಉಪಸ್ಥಿತರಿದ್ದ ಸಭಿಕರಿಗೆ ನೀಡಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಅನನ್ಯ ಐತಾಳ್ ಪ್ರಾರ್ಥಿಸಿದರು. ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಯುವರಾಜು ಬಿ ಎನ್ ಸ್ವಾಗತಿಸಿದರು. ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಲೈಕ್ವಿನ್ ಥಾಮಸ್ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಸಿಬ್ಬಂದಿ, ಮತ್ತು ದೇಶವಿದೇಶದ ೨೫೦ಕ್ಕೂ ಅಧಿಕ ಸಂಶೋಧನಾಕಾAಕ್ಷಿಗಳು, ಬಿಇ, ಎಂ ಟೆಕ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.