ನಂದೀಶ್ ಭದ್ರಾವತಿ, ದಾವಣಗೆರೆ
ಸಂಸದ ಜಿಎಂ ಸಿದ್ದೇಶ್ವರ ಅಥವಾ ಮಗ ಅನೀತ್ ಗೆ ಬಹುತೇಕ ಟಿಕೆಟ್ ಫಿಕ್ಸ್ ಆಗಿದೆ. ಗೆಲುವೇ ಮಾನದಂಡ ಎಂಬ ಆಧಾರದಲ್ಲಿ ಹೈಕಮಾಂಡ್ ಈ ತೀರ್ಮಾನ ತೆಗೆದುಕೊಂಡಿದೆ ಎಂಬ ಮಾಹಿತಿ ಇದೆ. ಈ ನಡುವೆ ವಿರೋಧಿ ಪಡೆ ಕೂಡ ಟಿಕೆಟ್ ತಪ್ಪಿಸಲು ದೆಹಲಿ ಅಂಗಳ ತಲುಪಿದೆ. ಕೊನೆ ಕ್ಷಣದಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು.
ದಾವಣಗೆರೆಯಲ್ಲಿ ಈಗಾಗಲೇ ಜಿಎಂ ಸಿದ್ದೇಶ್ವರ ವಿರುದ್ದ ಏನೇ ತಂತ್ರ ನಡೆಸಿದರೂ, ಇತಿಹಾಸದ ಆಧಾರದ ಮೇಲೆ ಟಿಕೆಟ್ ಕೊಡಲು ಹೈಕಮಾಂಡ್ ನಿರ್ಧಾರ ಮಾಡಿದೆ. ಈ ಕ್ಷೇತ್ರ ಬಿಜೆಪಿ ಕ್ಷೇತ್ರವಾಗಿರುವುದರಿಂದ ಎದುರಾಳಿ ಯಾರು ಎಂಬ ತತ್ವದಡಿ ಟಿಕೆಟ್ ಕೊಡಲು ತೀರ್ಮಾನಿಸಿದೆ.
ದಾವಣಗೆರೆಯಲ್ಲಿ ಲಿಂಗಾಯಿತ ಮತಗಳು ಹೆಚ್ಚು ಇರುವ ಕಾರಣ, ಅದರಲ್ಲೂ ಸಾಧು ಲಿಂಗಾಯಿತ ಮತಗಳು ಮೊದಲ ಪ್ರಾಶಸ್ತ್ಯ ವಾಗಿದೆ. ಎದುರಾಳಿ ಎಸ್.ಎಸ್.ಮಲ್ಲಿಕಾರ್ಜುನ್ ಕುಟುಂಬ ಕ್ಕೆ ಕಾಂಗ್ರೆಸ್ ಟಿಕೆಟ್ ಕೊಡುವ ಕಾರಣ ಸಂಸದ ಜಿಎಂ ಸಿದ್ದೇಶ್ವರ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೊಡಲು ಪ್ರಯತ್ನ ನಡೆದಿದೆ. ಒಂದು ವೇಳೆ ಬೇರೆಯವರಿಗೆ ಟಿಕೆಟ್ ನೀಡಿದರೆ ಮತಗಳು ಇಬ್ಭಾಗವಾಗಲಿದೆ. ಆದ್ದರಿಂದ ಸಂಸದರ ಕುಟುಂಬಕ್ಕೆ ಅಥವಾ ಸಂಸದ ಸಿದ್ದೇಶ್ ಗೆ ಟಿಕೆಟ್ ನೀಡುವ ಸಂಭವ ಹೆಚ್ಚಿದೆ.
ವಯಸ್ಸು ಮಾನದಂಡವಲ್ಲ
ಈಗಾಗಲೇ ಕರ್ನಾಟಕ ಸೋಲಿನಿಂದ ಪಾಠ ಕಲಿತಿರುವ ಬಿಜೆಪಿ ವಯಸ್ಸಿನ ಆಧಾರದ ಮೇಲೆ ಟಿಕೆಟ್ ಕೊಡುವುದನ್ನು ಬಿಟ್ಟು, ಗೆಲುವೇ ಮಾನದಂಡವಾಗಿ ಇಟ್ಟುಕೊಂಡಿದೆ. ಆದ್ದರಿಂದ ಇಲ್ಲಿ ವಯಸ್ಸಿನ ಅಂತರ್ ಪ್ರಶ್ನೆ ಉದ್ಬವಿಸುವುದಿಲ್ಲ. ಇದಕ್ಕೆ ಪಂಚ ರಾಜ್ಯ ಚುನಾವಣೆ ಸಾಕ್ಷಿಯಾಗಿದ್ದು, 75 ವರ್ಷ ವಯಸ್ಸು ಆದವರಿಗೆ ಟಿಕೆಟ್ ನೀಡಿದೆ. ಅಲ್ಲಿ ಅವರು ಗೆದ್ದಿರುವುದು ಕೂಡ ಗಮನಾರ್ಹ. ಅಲ್ಲದೇ ಕುಟುಂಬ ರಾಜಕಾರಣ ನಡೆಯುತ್ತದೆ ಅಂದ್ರೂ ಕೂಡ ಗೆಲುವೇ ಮೊದಲ ಆದ್ಯತೆಯಾಗಿದೆ . ಇನ್ನು ಕೆಲ ಆಂತರಿಕ ಸಮೀಕ್ಷೆ ಪ್ರಕಾರ ಬಿಜೆಪಿಗೆ ಫ್ಲಸ್ ಪಾಯಿಂಟ್ ಇರುವ ಕಾರಣ ಹಾಲಿ ಸಂಸದರಿಗೆ ಅಥವಾ ಮಗ ಅನಿತ್ ಗೆ ಟಿಕೆಟ್ ಸಿಗುವ ಎಲ್ಲ ಲಕ್ಷಣವಿದೆ.
ಮೋದಿ ಹೆಸರು, ರಾಮಮಂದಿರ ಫ್ಲಸ್
ಬಿಜೆಪಿಯಿಂದ ಯಾರಿಗೆ ಟಿಕೆಟ್ ಕೊಟ್ಟರೂ, ಮೋದಿ ನಾಮಬಲ, ರಾಮಮಂದಿರ ಉದ್ಘಾಟನೆ ಬಿಜೆಪಿಗೆ ಫ್ಲಸ್ ಆಗಲಿದೆ. ಅಲ್ಲದೇ ಲಿಂಗಾಯಿತ ಅಧಿಕಾರಿಗಳಿಗೆ ಉನ್ನತ ಸ್ಥಾನ ಸಿಕ್ಕಿಲ್ಲ, ಅಲ್ಲದೇ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯಿತರನ್ನು ಕಡಿಮೆ ತೋರಿಸಿದ್ದಾರೆ ಎಂದು ರಾಷ್ಟ್ರೀಯ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿರೋಧಿಸಿದ್ದು, ಬಿಜೆಪಿಗೆ ಫ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಇದೆ.
ಬಿಜೆಪಿಯಲ್ಲಿ ಬಣ ರಾಜಕೀಯ ಇದ್ದರೂ, ಚಿಹ್ನೆಯೇ ಅಸ್ತ್ರ
ಬಿಜೆಪಿಯಲ್ಲಿ ಬಣ ರಾಜಕೀಯವಿದ್ದರೂ, ಕಮಲದ ಚಿಹ್ನೆಗೆ ಹೆಚ್ಚು ಪ್ರಾಶಸ್ತ್ಯ ಮತಗಳು ಬೀಳುತ್ತದೆ ಎಂಬುದು ತಜ್ಞರ ಮಾತಾಗಿದೆ. ವಿರೋಧಿ ಬಣ ಏನೇ ತಂತ್ರ ಉಪಯೋಗಿಸಿದರೂ, ಚಿಹ್ನೆ ನೋಡಿ ಮತ ಹಾಕುವರು ಹೆಚ್ಚಾಗಿದ್ದಾರೆ. ಇಲ್ಲಿ ವ್ಯಕ್ತಿಗಿಂತ ಚಿಹ್ನೆ ಅತಿ ಮುಖ್ಯವಾಗಿದೆ.
ಸಮೀಕ್ಷೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ ಹೆಸರು ಫಸ್ಟ್
ಬಿಜೆಪಿಯಲ್ಲಿ ಭಿನ್ನಭಿಪ್ರಾಯವಿದ್ದರೂ, ಸಮೀಕ್ಷೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ ಹೆಸರು ಮೊದಲಿದೆ. ನಂತರದ ಸ್ಥಾನದಲ್ಲಿ ಕೊಟ್ರೇಶ್ , ಮಾಜಿ ಶಾಸಕ ಗುರು ಸಿದ್ದನಗೌಡರ ಪುತ್ರ ರವಿಕುಮಾರ್, ಮಾಜಿ ಶಾಸಕ ರೇಣುಕಾಚಾರ್ಯ, ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ ಹೆಸರಿದೆ.
ಮಾಜಿ ಸಿಎಂಗಳ ಬೆಂಬಲ
ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಬೆಂಬಲ ಹಾಲಿ ಸಂಸದ ಜಿಎಂಸಿದ್ದೇಶ್ವರ ಬೆಂಬಲವಿದೆ. ಅಲ್ಲದೇ ಬಹುರಂಗವಾಗಿಯೇ ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗವಾಗಿಯೇ ಸಂಸದರಿಗೆ ಬೆಂಬಲವಿದೆ. ಅಲ್ಲದೇ ಹೈಕಮಾಂಡ್ ಗೂ ಯಡಿಯೂರಪ್ಪ ಸಂಸದರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂಬ ಮಾಹಿತಿ ಇದೆ.
20 ವರ್ಷದ ಸೇವೆ, ನಾಲ್ಕು ಬಾರಿ ಗೆಲುವು
ಸಂಸದ ಜಿಎಂ ಸಿದ್ದೇಶ್ವರ ಸುಮಾರು 20 ವರ್ಷ ಸೇವೆಯನ್ನು ಬಿಜೆಪಿಗೆ ನೀಡಿದ್ದು, ನಾಲ್ಕು ಬಾರಿ ಗೆದ್ದಿದ್ದಾರೆ. ಅಲ್ಲದೇ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್, ಸಂಸದ ಜಿಎಂ ಸಿದ್ದೇಶ್ವರ ತಂಡ ದಾವಣಗೆರೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಅಲ್ಲದೇ ಸಂಸದ ಸಿದ್ದೇಶ್ವರ ತಂದೆ ಮಲ್ಲಿಕಾರ್ಜುನಪ್ಪ ಕೂಡ ಬಿಜೆಪಿಗೆ ಸೇವೆ ಸಲ್ಲಿಸಿರುವ ಕಾರಣ ಅವರ ಮಾತಿಗೆ ಮಾನ್ಯತೆ ಕೊಡಬೇಕಿದೆ.
ಅಪ್ಪನಿಗೆ ಸಿಗದೇ ಹೋದರೆ ಮಗನಿಗೆ ಟಿಕೆಟ್ ಗ್ಯಾರಂಟಿ
ಸಂಸದ ಜಿಎಂ ಸಿದ್ದೇಶ್ವರ ತಂದೆ ಮಲ್ಲಿಕಾರ್ಜುನಪ್ಪ ಟಿಕೆಟ್ ನೀಡಿದ್ದು, ನಂತರ ಸಿದ್ದೇಶ್ವರಗೆ ಟಿಕೆಟ್ ನೀಡಲಾಗಿತ್ತು. ಈಗ ಸಂಸದ ಸಿದ್ದೇಶ್ವರಿಗೆ ಟಿಕೆಟ್ ಸಿಗದೇ ಹೋದರೆ ಮಗ ಅನಿತ್ ಗೆ ಟಿಕೆಟ್ ಕೊಡಬೇಕೆಂಬ ಒತ್ತಾಯವು ಕೇಳಿ ಬರುತ್ತಿದೆ.
ದೆಹಲಿಗೆ ಹೋದ ರೆಬೆಲ್ ರೇಣುಕಾಚಾರ್ಯ
ಹಿಂದಿನಿಂದಲೂ ಸಂಸದರ ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ ಈಗಲೂ ಸಂಸದರಿಗೆ ಟಿಕೆಟ್ ನೀಡಬಾರದೆಂದು ಒತ್ತಡ ತರುತ್ತಿದ್ದಾರೆ ಎಂಬ ಮಾಹಿತಿ ಇದೆ. ಅದಕ್ಕಾಗಿ ದೆಹಲಿಗೆ ಅವರ ತಂಡ ಹೋಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಸಂಸದರನ್ನು ಬಿಟ್ಟು ಹೊಸಬರಿಗೆ ಟಿಕೆಟ್ ನೀಡಿ ಎಂದು ಹೇಳುತ್ತಿರುವ ಮಾಜಿ ಶಾಸಕ ರೇಣುಕಾಚಾರ್ಯ ಮಾಜಿ ಶಾಸಕ ಗುರು ಸಿದ್ದನಗೌಡ ಮಗ ರವಿಕುಮಾರ್ ಗೆ ಟಿಕೆಟ್ ನೀಡಿ ಎಂಬ ಬೇಡಿಕೆ ಇಟ್ಟಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ಕೊಟ್ರೇಶ್ ಬೆಂಬಲ ಸಂಸದ ಜಿಎಂಗೆ
ಬಿಜೆಪಿ ಟಿಕೆಟ್ ಆಕಾಂಕ್ಷಿ ಕೊಟ್ರೇಶ್ ಸಂಸದ ಸಿದ್ದೇಶ್ವರಿಗೆ ಬೆಂಬಲ ನೀಡಿದ್ದಾರೆ. ಒಂದು ವೇಳೆ ಸಂಸದರಿಗೆ ಟಿಕೆಟ್ ನೀಡದೇ ಹೋದರೆ ನನಗೆ ಟಿಕೆಟ್ ಕೊಡಿ ಎಂದು ಒತ್ತಾಯಿಸಿದ್ದಾರೆ.
ಕೊನೆ ಕ್ಷಣದಲ್ಲಿ ಅಚ್ಚರಿ ಹೆಸರು ಕೂಡ ಬರಬಹುದು
ಒಂದು ವೇಳೆ ಸಂಸದ ಜಿಎಂ ಸಿದ್ದೆಶ್ವರ ಅಥವಾ ಮಗ ಅನಿತ್ ಗೆ ಟಿಕೆಟ್ ಸಿಗದೇ ಹೋದರೆ ಅಚ್ಚರಿ ಬೆಳವಣಿಗೆಯ ಹೆಸರು ಕೂಡ ಕೊನೆ ಕ್ಷಣದಲ್ಲಿ ಬಿಡುಗಡೆಗೊಳ್ಳಬಹುದು. ಒಟ್ಟಾರೆ ದಾವಣಗೆರೆ ಟಿಕೆಟ್ ಸಂಸದ ಜಿಎಂ ಸಿದ್ದೇಶ್ವರಿಗೆ ಸಿಗುತ್ತಾ ಅಥವಾ ಬೇರೆಯವರಿಗೆ ಸಿಗುತ್ತಾ ಎಂದು ಕಾದುನೋಡಬೇಕಿದೆ.