ಸಾಸ್ವೆಹಳ್ಳಿ(ಹೊನ್ನಾಳಿ): ಮನುಷ್ಯ ಜೀವನದಲ್ಲಿ ಬೆಂಕಿ-ನೀರು ಬಹಳ ಮುಖ್ಯ ಮತ್ತು ಅವಶ್ಯ, ನಿತ್ಯ ಜೀವನದಲ್ಲಿ ಬೇರೆ ಬೇರೆ ವಿಧವಾನದಲಿ ಬೆಂಕಿ-ನೀರು ಬಳಕೆ ಮನುಷ್ಯ ಮಾಡುತ್ತಾನೆ ಆದರೆ ಅದರಿಂದ ಅವಘಡವಾದಾಗ ಆ ಸಮಯದಲ್ಲಿ ನಾವು ಹೇಗೆ ಸುರಕ್ಷಿತವಾಗಲು, ರಕ್ಷಿಸಿಕೊಳ್ಳಲು, ರಕ್ಷಿಸಲು ಸಾಧ್ಯ ಎಂಬ ಅರಿವು ನಮಗಿದ್ದರೆ ಚೆಂದ ಎಂದು ಹೊನ್ನಾಳಿ ತಾಲೂಕು ಅಗ್ನಿ ಶಾಮಕ ಠಾಣೆಯ ತಾಲೂಕು ಅಧಿಕಾರಿ ಟಿ.ಆರ್.ಪರಶುರಾಮ್, ಹೇಳಿದರು.

ಅವರು ಹೋಬಳಿಯ ಹೊಸಹಳ್ಳಿ 1ನೇ ಕ್ಯಾಂಪ್ ಗ್ರಾಮದ ಜ್ಞಾನೋದಯ ಸ್ಕೂಲ್ ನಲ್ಲಿ ಮಂಗಳವಾರ ಶಾಲಾ ಮಕ್ಕಳಿಗೆ ಅಗ್ನಿ ಸುರಕ್ಷ ಮುಂಜಾಗ್ರತಾ ಕ್ರಮ ಹಾಗೂ ಅಗ್ನಿ ಅವಘಡದಲ್ಲಿ ಕೈಗೊಳ್ಳಬೇಕಾದ ಪ್ರಮುಖ ಪ್ರಥಮ ಕಾರ್ಯ, ಎಲ್ಪಿಜಿ ಗ್ಯಾಸ್ ಬಗ್ಗೆ ಅರಿವು ಮತ್ತು ನೀರಿನಿಂದ-ನೀರಿನಲ್ಲಿ ನಡೆಯುವ ಅವಘಡಗಳ ಬಗ್ಗೆ ಮಕ್ಕಳಿಗೆ ಅರಿವು ಕಾರ್ಯ ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಶಾಲಾ ರಜಾ ದಿನಗಳಲ್ಲಿ ಮಕ್ಕಳು ನದಿ-ಕೆರೆ, ಹಳ್ಳ ಕೊಳ್ಳಗಳಲ್ಲಿ ಪೋಷಕರ ಗಮನಕ್ಕೆ ಬಾರದೆ ಸ್ನಾನಕ್ಕೆಂದು ಹೋಗಿ ದುರಂತ ನಡೆದ ಘಟನೆಗಳು ಸಾಕಷ್ಟು ನಡೆಯುತ್ತಿದ್ದು, ಈ ಬಗ್ಗೆ ಸಾಕಷ್ಟು ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ನಮ್ಮಿಂದ, ಶಾಲಾ ಶಿಕ್ಷಕರಿಂದ, ಪೋಷಕರಿಂದ ನಡೆಯಬೇಕಿದೆ, ಪ್ರತಿನಿತ್ಯ ಮನೆಯಲ್ಲಿ ಅಡುಗೆಗೆಂದು ಬಳಸುವ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಬಗ್ಗೆ ಕುಟುಂಬದ ಪ್ರತಿಯೊಬ್ಬ ಸದಸ್ಯ ಬಳಕೆ, ಸುರಕ್ಷತೆ, ತುಂಬಾ ಅವಶ್ಯಕ ಎಂದರು.ಕಾರ್ಯಕ್ರಮದಲ್ಲಿ ಜ್ಞಾನೋದಯ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

 

Share.
Leave A Reply

Exit mobile version