ಬೆಂಗಳೂರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಕೇಸ್‌ನಲ್ಲಿ ಬಂಧಿತನಾಗಿ ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್‌ಗೆ ಬುಧವಾರವೂ ಬೆನ್ನಿನ ಶಸ್ತç ಚಿಕಿತ್ಸೆ ನಡೆದಿಲ್ಲ ಎಂದು ಮೂಲಗಳು ತಿಳಿಸಿದ್ದು, ಇದು ನಾನಾ ಅನುಮಾನಗಳಿಗೆ ಕಾರಣವಾಗಿದೆ.

ಆರೋಪಿ ನಟ ದರ್ಶನ್ ಸದ್ಯ ಮಧ್ಯಂತರ ಜಾಮೀನು ಪಡೆದು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರು ವಾರಗಳು ಕಳೆದಿದೆ. ಅಲ್ಲದೇ ಜಾಮೀನು ಅವಧಿಯು ಬುಧವಾರ ಮುಗಿದಿದೆ. ಈ ನಡುವೆ ಆಪರೇಷನ್ ಆಗದೇ ಇರುವ ಹಿಂದೆ ಇರುವ ಉಪಾಯವೇನಿರಬಹುದು ಎಂಬ ಪ್ರಶ್ನೆ ಎದ್ದಿದೆ.

ಹೈಕೋರ್ಟ್ನಲ್ಲಿ ನಡೆದಿದ್ದೇನು?

ಸಾಮಾನ್ಯ ಬೇಲ್ ಅರ್ಜಿ ವಿಚಾರಣೆಯಲ್ಲಿ ಸಾಕಷ್ಟು ವಾದ ಮಾಡಿರೋ ದರ್ಶನ ಪರ ವಕೀಲ ನಾಗೇಶ್ ಮೆಡಿಕಲ್ ರಿಪೋರ್ಟ್ಗಳನ್ನು ನ್ಯಾಯಾಲಯಕ್ಕೆ ನೀಡಿದ್ದರು. ಜೊತೆಗೆ ದರ್ಶನ ಸರ್ಜರಿ ದಿನಾಂಕವನ್ನು ಹಿರಿಯ ವೈದ್ಯ ಡಾ.ನವೀನ್ ಸರ್ಜರಿ ಮಾಡುವುದರ ಬಗ್ಗೆ ನಿರ್ಧರಿಸಿ ಡಿ.11ಕ್ಕೆ ಸರ್ಜರಿ ಮಾಡುವುದಾಗಿ ತಿಳಿಸಿದ್ದರು. ಆದರೆ ಬುಧವಾರವೂ ದರ್ಶನ್‌ಗೆ ವೈದ್ಯರು ಶಸ್ತç ಚಿಕಿತ್ಸೆ ನಡೆಸಿಲ್ಲ. ಈ ನಡುವೆ ವೈದ್ಯರು ಸೂಕ್ತ ಕಾರಣವೂ ನೀಡಿಲ್ಲ. ಇದರಿಂದ ನಟ ದರ್ಶನ್ ಇನ್ನಷ್ಟು ದಿನಗಳ ಕಾಲ ಹೊರಗೆ ಉಳಿಯುವ ಉಪಾಯವಾಗಿರಬಹುದೆಂಬ ಅನುಮಾನ ಇದೆ. ಇನ್ನು ದರ್ಶನ್ ಮಧ್ಯಂತರ ಜಾಮೀನು ರದ್ದು ಮಾಡುವಂತೆ ತನಿಖಾ ತಂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಒಟ್ಟಿನಲ್ಲಿ ದರ್ಶನ್ ಸರ್ಜರಿಯಾಗುವರಿಗೆ ಹೊರಗೆ ಇದ್ದು, ಬಳಿಕ ಮತ್ತಷ್ಟು ವಾರಗಳ ಕಾಲಾವಕಾಶ ಕೇಳಲು ಮುಂದಾಗಿದ್ದಾರೆ.

ಕೋರ್ಟ್ಗೆ ಕೊಟ್ಟಿದ್ದ ಕಾರಣವೇನು

ದರ್ಶನ್‌ಗೆ ಜನರಲ್ ಅನಸ್ತೇಷಿಯಾ ನೀಡಲು ತಯಾರಿಮಡಿಕೊಳ್ಳಲು ದೇಹವು ಸಮತೋಲನಕ್ಕೆ ಬರಬೇಕು ಎಂದು ಕೋರ್ಟ್ಎ ಮೊದಲು ಹೇಳಲಾಗಿತ್ತು. ನಂತರ 5ನೇ ತಾರೀಖಿನಂದು ಮತ್ತೊಂದು ವರದಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸ್ಟಿರಾಯ್ಡ್ ಇಂಜೆಕ್ಷನ್ ನೀಡಲಾಗುತ್ತಿದೆ. ಫಿಸಿಯೋಥೆರಪಿ ಹಾಗೂ ವ್ಯಾಯಾಮ ಮಾಡಿಸಲಾಗುತ್ತಿದೆ. ಮೂರು ವಾರ ಆಯ್ತು ನಾಲ್ಕು ವಾರ ಆಯ್ತು ಆಪರೇಷನ್ ಮಾಡಿಸಿ ಅಂತ ಹೇಳೋಕೆ ಆಗಲ್ಲ ಡಾಕ್ಟರ್ ಹೇಳಿದಂತೆ ನಾವು ಆಪರೇಷನ್ ಮಾಡಿಸಬೇಕು ಎಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ ಕೋರ್ಟ್ಗೆ ತಿಳಿಸಿದ್ದು, ಡಿ.11ಕ್ಕೆ ಆಪರೇಷನ್ ಮಾಡುವುದಾಗಿ ವಕೀಲ ವಿ.ನಾಗೇಶ್ ಕೋರ್ಟ್ಗೆ ಹೇಳಿದ್ದರು.

Share.
Leave A Reply

Exit mobile version