ಹರಪನಹಳ್ಳಿ : ನೀರು ತುಂಬಲು ಹೋಗಿ ಅರಿಷಿಣ ಹೊಂಡದಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮನ ಬೆಟ್ಟದಲ್ಲಿ ಸೋಮವಾರ ಸಂಜೆ ಜರುಗಿದೆ.
ಕೆ.ಗೋಣಿಸ್ವಾಮಿ(24) ಎರಡನೇ ವರ್ಷದ ಕಾನೂನು ಪದವಿಯನ್ನು ಚಿತ್ರದುರ್ಗದಲ್ಲಿ ಅಭ್ಯಾಸ ಮಾಡುತ್ತಿದ್ದರು. ತಾಲೂಕಿನ ಕಣವಿಹಳ್ಳಿ ಗ್ರಾಮದ ಗೋಣಿಸ್ವಾಮಿ ತಮ್ಮ ಸಂಬಂಧಿಕರ ಜೊತೆ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಾಲಯಕ್ಕೆ ತೆರಳಿದ್ದನು ಎಂದು ಹೇಳಲಾಗಿದೆ.
ಅಗ್ನಿಶಾಮಕದಳ ದವರು ತೆರಳಿ ಹೊಂಡದಲ್ಲಿ ಮುಳುಗಿದ ಯುವಕನ ಶವವನ್ನು ಹೊರಕ್ಕೆ ತಂದಿದ್ದಾರೆ. ಅರಸಿಕೇರಿ ಪೋಲೀಸ್ ಠಾಣೆಯಲ್ಲಿ ಪಿಎಸ್‌ಐ ರಂಗಯ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.