ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್‌ಸೀಟು ಹಿಡಿಯಲು ಹಾಕಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 1.80 ಲಕ್ಷ ರೂ ಮೌಲ್ಯದ ಬಂಗಾರ ಸರ ಕಳ್ಳತನ ಮಾಡಿದ್ದ ಆರೋಪಿಯನ್ನು ಬಡಾವಣಾ ಠಾಣಾ ಪೊಲೀಸರು ಬಂಧಿಸಿದ್ದಾರೆ.ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಶಿವು ಕುಮಾರ.ಕೆ.ಸಿ, (56) ಬಂಧಿತ ಆರೋಪಿ.
ಚನ್ನಗಿರಿಯ ಮಮತ ಎಂಬ ಮಹಿಳೆ ತಮ್ಮ ಸಂಬಂಧಿಕರ ಗೃಹ ಪ್ರವೇಶ ಕಾರ್ಯಕ್ರಮದ ಪ್ರಯುಕ್ತ ದಾವಣಗೆರೆ ತಾಲೂಕು ಹೆಚ್.ಕಲಪನಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ಸು ಊರಿಗೆ ಹೋಗುವ ಸಲುವಾಗಿ ಸಂಜೆ 04.15 ರ ಸುಮಾರಿಗೆ ದಾವಣಗೆರೆ ನಗರದ ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್ ಗೆ ಬಂದಿದ್ದು, ಬಸ್ ಪ್ರಯಾಣಿಕರಿಂದ ತುಂಬಿದ್ದ ಕಾರಣ ಸೀಟ್ ಹಿಡಿಯಲು ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ಸೀಟ್ ಮೇಲೆ ಹಾಕಿ ಬಸ್ ಒಳಗೆ ಹೋಗಿ ನೋಡಿದಾಗ ಬ್ಯಾಗ್ ಕಾಣಿಸಲಿಲ್ಲ. ಈ ಬ್ಯಾಗ್ ನಲ್ಲಿ ಸುಮಾರು 1.80 ಲಕ್ಷ ರೂ.ಮೌಲ್ಯದ 35 ಗ್ರಾಂ ತೂಕದ ಬಂಗಾರದ ಲಾಂಗ್ ಚೈನ್ ಮತ್ತು ವಿವೋ ವೈ-12 ಮೊಬೈಲ್ ಇತ್ತು ಎಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ ವಿಜಯ ಕುಮಾರ್ ಹಾಗೂ ಜಿ. ಮಂಜುನಾಥ, ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಅವರಮಾರ್ಗದರ್ಶನಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಎಂ. ಆರ್. ಚೌಬೆ ನೇತೃತ್ವದ ಪೊಲೀಸ್ ತಂಡವು ಆರೋಪಿಗೆ ಹುಡುಕಾಟ ನಡೆಸಿತ್ತು.
ಭಾನುವಾರ ಬೆಳಗ್ಗೆ ನಗರದ ಕೆ.ಎಸ್.ಆರ್.ಟಿ.ಸಿ.ಬಸ್ ಸ್ಟಾಂಡ್ ನಲ್ಲಿ ಬಾತ್ಮಿದಾರರ ಮಾಹಿತಿ ಮೇರೆಗೆ ಪ್ರಕರಣದ ಆರೋಪಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿವು ಕುಮಾರ ಕೆ.ಸಿ. (56) ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ಮಾಡಿದಾಗ ಕಳ್ಳತನವಾದ 35 ಗ್ರಾಂ ತೂಕದ ಬಂಗಾರದ ಲಾಂಗ್ ಚೈನ್, ವಿವೋ ವೈ 12 ಮೊಬೈಲ್ ಅನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸರ ಸಿಕ್ಕಿದ್ದೇ ರೋಚಕ
ಮೊಬೈಲ್ ಕಳ್ಳತನವಾಗಿದ್ದ ಹಿನ್ನೆಲೆಯಲ್ಲಿ ಕಳ್ಳ ಸಿಗಲು ಸಹಾಯವಾಗಿತ್ತು. ವೆನಿಟಿಬ್ಯಾಗ್ ನಲ್ಲಿ ಮೊಬೈಲ್ ಇದ್ದು, ಆ ಮೊಬೈಲ್ ನ್ನು ಸಿ-ಪೋರ್ಟಲ್ ಹಾಕಿದಾಗ ಮೊಬೈಲ್ ಎಲ್ಲಿದೆ ಅಂತ ಗೊತ್ತಾಗಿದೆ. ನಂತರ ಇನ್ಸೆಪೆಕ್ಟರ್ ಚೌಬೆ ಹಾಗೂ ಅವರ ಕ್ರೈಂ ತಂಡ ಎಸ್ಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಕಳ್ಳನನ್ನು ಹಿಡಿದಿದ್ದಾರೆ.
ಕದ್ದಿದ್ದ ಚೈನ್ ಎಲ್ಲಿತ್ತು ಗೊತ್ತಾ?
ಬಸ್ ನಲ್ಲಿ ಕದ್ದಿದ್ದ ಸರವನ್ನು ಕಳ್ಳ ಸುಮಾರು 20 ಸಾವಿರಕ್ಕೆ ಅಡ ಇಟ್ಟಿದ್ದ ಎನ್ನಲಾಗಿದೆ. ನಂತರ ಪೊಲೀಸರು ಅಡ ಇಟ್ಟಿದ್ದ ಜಾಗಕ್ಕೆ ಹೋಗಿ ಆ ಚೈನ್ ನನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಯನ್ನು ಬಂಧಿಸಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪಿಎಸ್‌ಐ ರಮೇಶ್, ಎಎಸ್‌ಐ ರಾಜಪ್ಪ, ಸಿಬ್ಬಂದಿ ಅರುಣ ಕುಮಾರ, ಕೆಂಚಪ್ಪ, ಸೈಯದ್ ಅಲಿ, ವಿಶ್ವ ಕುಮಾರ್, ಹನುಮಂತಪ್ಪ, ಗೀತಾ ಹೆಚ್. ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.