ಬೆಂಗಳೂರು;ಡಿಜಿಟಲ್ ಪತ್ರಿಕೋದ್ಯಮದಿಂದ ಧ್ವನಿ ಇಲ್ಲದವರಿಗೆ ಧ್ವನಿ ಸಿಗುತ್ತದೆ ಎಂದು ಸಚಿವ ಕೃಷ್ಣಭೇರೇಗೌಡ ಹೇಳಿದರು. ನಗರದ ಸೇಂಟ್ ಜೋಸೆಫ್ ವಿವಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜರ್ನಲಿಸಂ @ ಡಿಜಿಟಲ್ ಕ್ರಾಸ್‌ರೋಡ್ಸ್ ಕಾನೂನು ತಾಂತ್ರಿಕ ಮತ್ತು ನೈತಿಕ ಸವಾಲುಗಳು ಕಾರ್ಯಕ್ರಮದಲ್ಲಿ ಮಾತನಾಡಿದರು.  .

ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ಒಂದು ಕಡೆ ಧ್ವನಿ ಸಿಗಲಿದೆ. ಆದರೆ ಇನ್ನೊಂದು ಕಡೆ ಕೆಲವು ಮಾಧ್ಯಮಗಳು ಧ್ವನಿ ಅಡಗಿಸುವ ಕೆಲಸ ಮಾಡುತ್ತದೆ. ಹಾಗಾಗಿ ಡಿಜಿಟಲ್ ಪತ್ರಿಕೋದ್ಯಮದ ಬಳಕೆ ಈಗ ಹೆಚ್ಚಾಗುತ್ತಿದೆ. ಇನ್ನು ಡಿಜಿಟಲ್ ಪತ್ರಿಕೋದ್ಯಮದಿಂದ ಕೆಟ್ಟಪರಿಣಾಮವೂ ಬೀರುತ್ತಿದ್ದು, ಸಮಾಜದ ಮೇಲೆ ದುಷ್ಟಪರಿಣಾಮ ಬೀರುತ್ತಿದೆ. ಇದರಿಂದ ವಿಷಯಗಳು ವೇಗವಾಗಿ ಜನರಿಗೆ ಹರಡುತ್ತದೆ. ಇದನ್ನು ಜನರು ಕೂಡ ನಂಬುತ್ತಾರೆ. ಇಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದು ಬೇಗ ಹರಡುತ್ತದೆ. ಈ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಹೇಳಿದರು.

ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ‍್ಯ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ಆಕ್ರಮಣಗಳು ಗಂಭೀರ ಚಿಂತೆಗೆ ಕಾರಣವಾಗಿದೆ. ಸಾಂಪ್ರದಾಯಿಕ ಮಾಧ್ಯಮಗಳು ತಮ್ಮ ಉಳಿವಿಗಾಗಿ ಸಮಾಜವನ್ನು ದಾರಿತಪ್ಪಿಸುತ್ತಿವೆ. ಆದರೆ ಡಿಜಿಟಲ್ ಮಾಧ್ಯಮವು ವೈವಿಧ್ಯಮಯ ಧ್ವನಿಗಳಿಗೆ ವೇದಿಕೆ ನೀಡುತ್ತಿದೆ ಎಂದರು.

ವಿದ್ಯಾರ್ಥಿನಿಯೊಬ್ಬರು ಸರಕಾರದಲ್ಲಿ ಸ್ವಯಂ ಆಡಳಿತದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಭಾರತದಲ್ಲಿ ಸ್ವಯಂ ಆಡಳಿತ ಕೆಲಸ ಮಾಡೋದಿಲ್ಲ. ಇಲ್ಲಿಯ ಕಾನೂನಿನಲ್ಲಿ ಅದರದ್ದೇ ಆದ ನಿಯಮಗಳಿವೆ. ಅದರ ಆಧಾರದಲ್ಲಿಯೇ ಸರಕಾರ ಆಡಳಿತ ನಡೆಸಬೇಕು. ಚುನಾಯಿತ ಪ್ರತಿನಿಧಿಗಳು ಆ ಪ್ಯಾರಾಮೀಟರ್‌ನಲ್ಲಿಯೇ ಕೆಲಸ ಮಾಡಬೇಕು. ಕೆಲವರು ಕಾನೂನು ಬಿಟ್ಟು ಸ್ವಯಂ ಆಡಳಿತ ನಡೆಸಿದರೂ ನಮ್ಮಂತವರಿಗೆ ಅದು ಆಗೋದಿಲ್ಲ. ಸ್ವಯಂ ಆಡಳಿತದಿಂದ ಕೆಟ್ಟ ಪರಿಸ್ಥಿತಿ ಬೀರಲಿದೆ. ಯುರೋಪ್‌ನಂತ ರಾಷ್ಟಗಳಲ್ಲಿ ಸ್ವಯಂ ಆಡಳಿತ ನಡೆಯುತ್ತದೆ ಎಂದ ಅವರು ಸ್ವಯಂ ಆಡಳಿತಕ್ಕಿಂತ ಸಂಘ ಸAಸ್ಥೆ ಗಳ ಪಾಲ್ಗೊಳ್ಳುವಿಕೆ, ಸರಕಾರ, ಕಾನೂನು. ಜನಪ್ರತಿನಿಧಿಗಳು ಪಾಲ್ಗೊಂಡರೆ ಉತ್ತಮ ಬಾಂಧವ್ಯ ದೊರೆಯಲಿದೆ ಎಂದರು.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ಡಾ.ಸುದೀರ್ ಕೃಷ್ಣಸ್ವಾಮಿ ಮಾತನಾಡಿ, ಎಡಿರ‍್ಸ್ ಗೀಲ್ಡ್ ಭಾರತದ ಪತ್ರಕರ್ತರು ಮತ್ತು ಸಂಪಾದಕರನ್ನು ಒಳಗೊಂಡ ಪ್ರಮುಖ ಸಂಸ್ಥೆಯಾಗಿದೆ. “ಪತ್ರಿಕಾ ಸ್ವಾತಂತ್ರ‍್ಯದ ಗುಣಮಟ್ಟವನ್ನು ಹೆಚ್ಚಿಸುವುದೇ ಗಿಲ್ಡ್ನ ಮೂಲ ಉದ್ದೇಶ” ಎಂದರು. ಇನ್ನು ಡಿಜಿಟಲ್ ಪತ್ರಿಕೋದ್ಯಮದಲ್ಲಿನ ಕಾನೂನು ಹಾಗೂ ಎಂತಹ ಸುದ್ದಿಗಳು ಇರಬೇಕು. ಸುಳ್ಳು ಸುದ್ದಿ ಹಬ್ಬಿಸಿದರೆ ಕಾನೂನಿನಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ಹೇಳಿದರು.

ಇಜಿಐ ಅಧ್ಯಕ್ಷ ಅನಾಥ್ ನಾಥ್, ಎಐ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ಗಳು ಪತ್ರಿಕೋದ್ಯಮವನ್ನು ಹೇಗೆ ಅಡ್ಡಿಪಡಿಸುತ್ತವೆ ಮತ್ತು ಆದಾಯ ಮಾದರಿಗಳಿಗೆ ಬೆದರಿಕೆ ಹಾಕುತ್ತವೆ ಎಂದು ವಿವರಿಸಿದರು. ಅಲ್ಲದೇ ಬಾಂಬೆ ಹೈಕೋರ್ಟ್ನಿಂದ ಅಸಾಂವಿಧಾನಿಕ ಎಂದು ತೀರ್ಪು ನೀಡಿದ ಸರ್ಕಾರದ ಸತ್ಯ-ಪರಿಶೀಲನಾ ಘಟಕವನ್ನು ವಿರೋಧಿಸಲು ಗೀಲ್ಡ್ ಯಶಸ್ವಿಯಾದ ಕುರಿತು ಹೇಳಿದರು. ಅಲ್ಲದೇ ಡಿಜಿಪಬ್ ಜೊತೆಗೆ ಇಜಿಐ ಪ್ರತಿಭಟನೆಯ ನಂತರ ಬ್ರಾಡ್‌ಕಾಸ್ಟ್ ಬಿಲ್ ಅನ್ನು ಹಿಂತೆಗೆದುಕೊಳ್ಳಲಾಯಿತು, ಇದು ಪತ್ರಿಕಾ ಸ್ವಾತಂತ್ರ‍್ಯವನ್ನು ರಕ್ಷಿಸಲು ಸಾಮೂಹಿಕ ಕ್ರಿಯೆಯ ಶಕ್ತಿಯನ್ನು ತೋರಿಸುತ್ತದೆ ಎಂದರು.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ರಾಜ್ಯದೆಲ್ಲಡೆ 50ಕ್ಕೂ ಹೆಚ್ಚು ಕಾಲೇಜುಗಳಿಂದ ಸಮಾವೇಶದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಎಡಿರ‍್ಸ್ಗೇಲ್ಡ್ ಆಫ್ ಇಂಡಿಯಾದ ಅನಂತ್‌ನಾಥ್, ಪ್ರಮುಖರಾದ ಸುಗಾತ್ ಶ್ರೀನಿವಾಸ್ ರಾಜು, ರೀಚರ್ಡ್ ರೀಗೋ, ಆರ್.ಜಗನ್ನಾಥನ್. ಕೆ.ಎನ್.ಹರಿಕುಮಾರ್, ರಾಜ್‌ಚೆಂಗಪ್ಪ, ಧನ್ಯರಾಜೇಂದ್ರನ್ ಸೇರಿದಂತೆ ಇತರರು ಇದ್ದರು.

Share.
Leave A Reply

Exit mobile version