
ದಾವಣಗೆರೆ : ವೀರಶೈವ ಲಿಂಗಾಯತ ಅಧಿವೇಶನದ ಅಂಗವಾಗಿ ನಗರದಲ್ಲಿ ಮಹಾಸಭಾ ಯುವ ಘಟಕದಿಂದ ಜನ ಜಾಗೃತಿಗಾಗಿ ಬೈಕ್ ರ್ಯಾಲಿ ನಡೆಯಿತು. ಈ ರ್ಯಾಲಿಯಲ್ಲಿ ಯುವಕ, ಯುವತಿಯರು, ಮುಖಂಡರು, ತಲೆಗೆ ಪೇಟ ಕಟ್ಟಿ, ಕೂಲಿಂಗ್ ಗ್ಲಾಸ್ ಹಾಕಿ ಬಾವುಟ ಹಿಡಿದು ಮಿಂಚಿದರು.
ಶಾಮನೂರು ಶ್ರೀ ಆಂಜನೇಯ ಸ್ವಾಮಿ ಹಾಗೂ ಶಿವ ದೇವಾಲಯದ ಎದುರು ಮಹಾಸಭಾದ ಉಪಾಧ್ಯಕ್ಷ ಎಸ್.ಎಸ್. ಗಣೇಶ್ ರ್ಯಾಲಿಗೆ ಚಾಲನೆ ನೀಡಿದರು.
ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಎಂಬಿಎ ಕಾಲೇಜು ಮೈದಾನ ತಲುಪಿತು. ರ್ಯಾಲಿಯಲ್ಲಿ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಶಿವರತನ್, ಸಂದೀಪ್ ಅಣಬೇರು, ಶಂಭು ಎಸ್. ಉರೇಕೊಂಡಿ, ಇದಿರಾಜ್ ಐನಳ್ಳಿ, ಅಜಿತ್ ಆಲೂರು, ಗುರುಶಾಂತ ಸೋಗೇರ್, ಹರೀಶ್ ಶಾಮನೂರು, ಕಾರ್ತಿಕ್ ಹಿರೇಮಠ, ಹೇಮಂತ್, ಸಂಜಯ್, ಶಿವಕುಮಾರ್, ಅರುಣ್ ಕುಂದೂರು ಇತರರಿದ್ದರು. 200ಕ್ಕೂ ಹೆಚ್ಚು ಬೈಕ್ಗಳು ರ್ಯಾಲಿಯಲ್ಲಿದ್ದವು.



