ಬೆಂಗಳೂರು : ರಾಜಕೀಯ ಪಡಸಾಲೆಯಲ್ಲಿ ಇಂದು ಗುರುವಾದರೂ ಶಿಷ್ಯನಿಂದಲೇ ಪಾಠ ಕಲಿಯಬೇಕಾದ ಅನಿವಾರ್ಯತೆ ಸಾಕಷ್ಟು ಇರುತ್ತದೆ..‌ಇದಕ್ಕೆ ಸಾಕ್ಷಿ ಎಂಬಂತೆ ದಾವಣಗೆರೆಯಲ್ಲಿ ಈಗ ಗುರು ಎಸ್.ಎಸ್‌‌‌.ಮಲ್ಲಿಕಾರ್ಜುನಗೆ ಶಿಷ್ಯ ಶಿವಗಂಗಾ ಬಸವರಾಜ್ ಟಾಂಗ್ ನೀಡಿದ್ದಾರೆ.

ಹೌದು..ಜಿಲ್ಲಾ ಉಸ್ತುವಾರಿ ಸಚಿವ ಎಸ್ ‌ಎಸ್. ಮಲ್ಲಿಕಾರ್ಜುನ್ ಬದಲಾವಣೆಗೆ ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಸಿಎಂ ಡಿಸಿಎಂ ಗೆ ಪತ್ರ ಬರೆದಿದ್ದಾರೆ. ಈ ಮೂಲಕ ಶಾಸಕ ಶಿವಗಂಗಾ ಬಸವರಾಜ್ ನಡೆ ಅಚ್ಚರಿ ಮೂಡಿಸಿದೆ

.ಪತ್ರದಲ್ಲಿ ಏನಿದೆ

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನ ಉಸ್ತುವಾರಿ ಸಚಿವ ಸ್ಥಾ‌ನದಿಂದ ತೆಗೆದು ಹಾಕುವಂತೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಆಗ್ರಹಪಡಿಸಿದ್ದಾರೆ.

ಯಾತಕ್ಕಾಗಿ ಸಚಿವರ ಬದಲಾವಣೆ ಮಾಡಬೇಕು, ಶಾಸಕ ಶಿವಗಂಗಾ ಹೇಳೋದೇನು?

ಕೆಲ ದಿನಗಳ ಹಿಂದೆ ಶಿವಮೊಗ್ಗ ಲೋಕೋಪಯೋಗಿ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಆಗಿದ್ದ ಆರ್ ವಿಜಯಕುಮಾರ ವರ್ಗಾವಣೆಗೆ ಸಿಎಂ ಸಹ ಒಪ್ಪಿಗೆ ನೀಡಿದ್ದರು. ಅವರು ಶಿವಮೊಗ್ಗ ದಿಂದ ದಾವಣಗೆರೆ ಗೆ ವರ್ಗಾವಣೆ ಆಗಬೇಕಿತ್ತು. ಆದ್ರೆ ದಾವಣಗೆರೆ ಲೋಕೋಪಯೋಗಿ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಐಎಸ್ ಓಡೆನಪುರ ಅವರನ್ನ ಉದ್ದೇಶ ಪೂರ್ವಕವಾಗಿ ಸಚಿವ ಮಲ್ಲಿಕಾರ್ಜುನ ಅವರೇ ಹುದ್ದೆಯಿಂದ ಬಿಡುಗಡೆ ಗೊಳಿಸಿಲ್ಲ. ಇನ್ನು ಇತ್ತೀಚಿಗೆ ನಡೆದ ಸರ್ಕಾರಿ ನೌಕರರ ಚುನಾವಣೆಯಲ್ಲಿ ಓಡೆನಪುರ ಗೆದ್ದು ಅಧ್ಯಕ್ಷ ರಾಗಿದ್ದಾರೆ.ಇವರು ಬಿಜೆಪಿ ಬೆಂಬಲಿತರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ.

ಇದು ಸಚಿವ ಮಲ್ಲಿಕಾರ್ಜುನ ಬಿಜೆಪಿಯರ ಜೊತೆ ಹೊಂದಾಣಿಕೆ ಮಾಡಿಕೊಂಡ ಮಾಡಿದ ರಾಜಕೀಯ.
ಇತ್ತೀಚಿಗೆ ಡಿಸಿಸಿ ಬ್ಯಾಂಕ್ ಚುನಾವಣೆಯ ಬಳಿಕ ಓರ್ವ ಮುಖಂಡರಿಗೆ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮಾಡುವ ಅವಕಾಶವಿತ್ತು. ಅದನ್ನ ಬಿಜೆಪಿ ಮುಖಂಡ ರಿಗೆ ನೀಡಿದ್ದಾರೆ. ಇವರು ಬಿಜೆಪಿ‌ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಜತೆಗೆ ಲೋಕ ಸಭೆ ಚುನಾವಣೆ ಯಲ್ಲಿ ಸಚಿವ ಮಲ್ಲಿಕಾರ್ಜುನ ಅವರ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ 25 ಸಾವಿರ ಲೀಡ್ ಪಡೆದಿದೆ.ಆದ್ರೆ ಚನ್ನಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹತ್ತು ಸಾವಿರ ಮತ ಲೀಡ್ ಪಡೆದಿದೆ ಎಂದು ಕಾರಣ ನೀಡಿದ್ದಾರೆ. ಒಟ್ಟಾರೆ ಇವರಿಬ್ಬರ ಜಗಳ ಈಗ ಬೀದಿಗೆ ಬಂದು ನಿಂತಿದೆ.

Share.
Leave A Reply

Exit mobile version