ನಂದೀಶ್ ಭದ್ರಾವತಿ, ಶಿವಮೊಗ್ಗ
ಅವರೆಲ್ಲ ಶ್ರೀ ಸಾಮಾನ್ಯರು, ಅಧಿಕಾರಕ್ಕಿಂತ ಸಮಾಜ ಬೆಳೆಸಬೇಕೆಂಬ ಹಂಬಲ ಹೊತ್ತವರು. ಹಣ ಬೆಂಬಲವಿಲ್ಲದರೇನೂ ಜನ ಬೆಂಬಲ ಇದ್ದರೇ ಸಾಕು…ಎಲ್ಲವನ್ನೂ ಗೆಲ್ಲುತ್ತೇನೆ ಎಂಬ ಹಟ ತೊಟ್ಟ ತಂಡ..ಈಗ ಕ್ಲೈಮ್ಯಾಕ್ಸ್ ಬಂದು ನಿಂತಿದೆ..ಇನ್ನೇನಿದ್ದರೂ, ಮತದಾರನ ನಿರ್ಣಯ ಈಗ ಅಂತಿಮ.
ಹೌದು..ನಾವು ಹೇಳೋದಕ್ಕೆ ಹೊರಟಿರೋದು ಭದ್ರಾವತಿ ತಾಲೂಕು ಘಟಕದ ವೀರಶೈವ ಮಹಾಸಭಾ ಚುನಾವಣೆ. ಇಲ್ಲಿ ಎರಡು ತಂಡಗಳ ನಡುವೆ ನೇರಹಣಾಹಣಿ ಇದೆ. ಶಬ್ದವೇದಿ ಚಿತ್ರದಲ್ಲಿ ವರನಟ ಡಾ.ರಾಜ್ ಕುಮಾರ್ ಗೆ ಜನ ಬೆಂಬಲ ಇದ್ದ ಹಾಗೆ ವಾಗೀಶ್ ತಂಡಕ್ಕೆ ಜನ ಬೆಂಬಲವಿದೆ. ಹಗಲು, ರಾತ್ರಿ ವೀರಶೈವ ಮಹಾಸಭಾ ಚುನಾವಣೆಯಲ್ಲಿ ಸಂಘಟನೆ ಗೆಲ್ಲಬೇಕೆಂಬ ಇರಾದೆ ಹೊಂದಿರುವ ವಾಗೀಶ್ ಜನರ ಮನದಾಳದ ಮನಸ್ಸು ಕದಿಯಲು ಮುಂದಾಗಿದ್ದಾರೆ. ಹಣವಿಲ್ಲದೇ ಹೋದರೆನಂತೆ ಹಿಂದೆ ಗುರು, ಮುಂದೆ ಗುರಿ ಇದೆ ಎಂದು ಮುನ್ನುಗ್ಗುತ್ತಿದ್ದಾರೆ.
ವೀರಶೈವ ಮಹಾಸಭಾದ ಭಾಗವಾಗಿರುವುದು ನನಗೆ ಅತೀವ ಸಂತಸ ತಂದಿದೆ. ಮೊದಲನೆಯದಾಗಿ, 1904 ರಲ್ಲಿ ಈ ಮಹಾನ್ ಸಂಸ್ಥೆಯ ಸಂಸ್ಥಾಪಕರಾದ ಪರಮಪೂಜ್ಯ ಹಾನಗಲ್ ಕುಮಾರ ಸ್ವಾಮೀಜಿಯವರ ಪುಣ್ಯ ಸ್ಮರಣೆಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ವೀರಶೈವ-ಲಿಂಗಾಯತ ಧರ್ಮದ ಸ್ಥಾಪಕರಾದ ಶ್ರೀ ರೇಣುಕಾಚಾರ್ಯ ಮತ್ತು ಶ್ರೀ ಬಸವೇಶ್ವರರನ್ನು ಗೌರವದಿಂದ ಸ್ಮರಿಸುತ್ತೇನೆ. ಈ ಸಂಘಟನೆಯ ಯಶಸ್ಸಿಗೆ ಶ್ರಮಿಸಿದ ಎಲ್ಲಾ ನಾಯಕರಿಗೆ ನಾವು ಕೃತಜ್ಞರಾಗಿರಬೇಕು. ಈ ಸಂಸ್ಥೆಯ ಎಲ್ಲಾ ಅಧ್ಯಕ್ಷರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. .
ಶ್ರೀಗಳಿಗೆ ನಾನು ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಈ ಪುಣ್ಯಭೂಮಿಯ ಪ್ರತಿಯೊಂದು ಯುಗವೂ, ಪ್ರತಿಯೊಂದು ಭಾಗವೂ ಸಂತರು ಮತ್ತು ಸಮಾಜ ಸುಧಾರಕರನ್ನು ಹೊಂದಿದೆ. ತಮ್ಮ ಪ್ರಬುದ್ಧ ಚಿಂತನೆ ಮತ್ತು ನಡತೆಯಿಂದ ಸಮಾಜವನ್ನು ಒಗ್ಗೂಡಿಸಿ ಸನ್ಮಾರ್ಗದಲ್ಲಿ ಮುನ್ನಡೆಸಲು ಶ್ರಮಿಸಲು ನಾನು ಸಿದ್ದನೇದ್ದೇನೆ. ನನ್ನ ತಂಡ ಕೂಡ ನನ್ನ ಜತೆ ಇದ್ದು, ಶ್ರಮಿಸಿದೆ. ನಾವು ಮಾಡೋದೆನೆಲ್ಲ ಮಾಡಿದ್ದೇವೆ..ಆದ್ದರಿಂದ ನಮ್ಮ ತಂಡಕ್ಕೆ ಮತ ನೀಡಿ ಕೈ ಬಲಪಡಿಸಿ ಎಂದು ವಾಗೀಶ್ ಒತ್ತಾಯಿಸಿದ್ದಾರೆ.
ಉತ್ತಮ ನಾಯಕತ್ವಗುಣ ಹಾಗೂ ಸೇವಾ ಮನೋಭಾವನೆ ಹೊಂದಿರುವ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ವಾಗೀಶ್(ಕ್ರಮ ಸಂಖ್ಯೆ 1) ಸಾರಥ್ಯದ ತಂಡವನ್ನು ಸಮಾಜ ಬಾಂಧವರು ಆಯ್ಕೆ ಮಾಡುವಂತೆ ಮಹಾಸಭಾದ ಮಾಜಿ ಅಧ್ಯಕ್ಷರಾದ ಸಿದ್ದ ಲಿಂಗಯ್ಯ, ಜಂಗಮ ಸಮಾಜದ ಅಧ್ಯಕ್ಷರಾದ ಅಡವೀಶಯ್ಯ, ಪಂಚಮಸಾಲಿ ಸಮಾಜದ ಅಧ್ಯಕ್ಷ ಸತೀಶ್ ಪಟೇಲ್, ವೀರಶೈವ ಸೇವಾ ಸಮಿತಿ ಅಧ್ಯಕ್ಷರಾದ ಮಹೇಶ್ ಕುಮಾರ್ ಮನವಿ ಮಾಡಿದ್ದಾರೆ.
ಪವಾಡ ಪುರುಷರಾದ ಹಾನಗಲ್ ಶ್ರೀ ಕುಮಾರ ಸ್ವಾಮಿಗಳವರಿಂದ 1904 ರಲ್ಲಿ ಸ್ಥಾಪಿಸಲ್ಪಟ್ಟ ಮಹಾಸಭಾ ಅಖಿಲ ಭಾರತಮಟ್ಟದ ಸಂಘಟನೆಯಾಗಿದ್ದು, 120 ವರ್ಷಗಳ ಇತಿಹಾಸ ಹೊಂದಿದೆ. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್ ವಾಗೀಶ್ (ಕ್ರಮ ಸಂಖ್ಯೆ 1) ಸಾರಥ್ಯದಲ್ಲಿ 7 ಮಂದಿ ಮಹಿಳಾ ಹಾಗೂ 11 ಮಂದಿ ಪುರುಷ ಅಭ್ಯರ್ಥಿಗಳು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದು, ಈ ಎಲ್ಲಾ 19 ಮಂದಿಯ ತಂಡಕ್ಕೆ ಹೆಚ್ಹು ಮತಗಳ ಮೂಲಕ ಗೆಲ್ಲಿಸಬೇಕೆಂದು ಕೋರಿದ್ದಾರೆ
ಸಂಘದ ಸದಸ್ಯತ್ವವನ್ನು 1572ಕ್ಕೆ ಹೆಚ್ಚಿಸಿದ್ದು, ತಾಲ್ಲೂಕಿನ ಎಲ್ಲ ಭಾಗದ ವೀರಶೈವ ಲಿಂಗಾಯಿತ ಸಮಾಜದ ಎಲ್ಲ ಒಳಪಂಗಡಗಳಿಗೆ ನಿರ್ದೇಶಕ ಸ್ಥಾನಗಳಿಗೆ ನನ್ನ ತಂಡದಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಸಮಾಜದ ಬಡ ಮಕ್ಕಳಿಗಾಗಿ ತಾಲ್ಲೂಕಿನಲ್ಲಿ 25 ರಿಂದ 30 ವಿದ್ಯಾರ್ಥಿಗಳಿಗೆ ಸುಸಜ್ಜಿತ ಹಾಸ್ಟೆಲ್ ನಿರ್ಮಾಣ, ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳನ್ನು ಕೇಂದ್ರದ 2 A ಮೀಸಲಾತಿಗೆ ಸೇರ್ಪಡೆ ಮಾಡಲು ಹೋರಾಟ ಸೇರಿದಂತೆ ಆನೇಕ ಯೋಜನೆಗಳ ಈಡೇರಿಕೆಗಾಗಿ ಮತ ನೀಡಬೇಕೆಂದು ಮನವಿ ಮಾಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಎಸ್ ವಾಗೀಶ್,
ನಿರ್ದೇಶಕರ ಸ್ಥಾನಕ್ಕೆ ಕೀರ್ತಿಕುಮಾರ್, ಬಿ.ಚನ್ನಪ್ಪ, ದಯಾನಂದ್ ಬಿ.ಆರ್, ಭರತ್ ಬಿ.ಎಸ್, ಮಹದೇವಪ್ಪ ಎಂ, ಎಚ್.ಮಂಜುನಾಥ, ಯೋಗೇಶ್, ರುದ್ರೇಶ ಆರ್.ಎನ್, ಬಿ.ಎನ್.ಲಂಬೋಧರ, ವಾಗೀಶ್.ಓ, ಸೋಮಶೇಖರ ಸ್ಪರ್ಧಿಸಿದ್ದಾರೆ.
ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಕವಿತ ಬಿ.ಪಿ., ಕಾವೇರಮ್ಮ, ನಾಗರತ್ನಮ್ಮ ಕೆ.ಎಸ್., ನಂದಿನಿ ಮಲ್ಲಿಕಾರ್ಜುನ, ಪೂರ್ಣಿಮಾ ಎಸ್., ರಾಜೇಶ್ವರಿ, ರೂಪನಾಗರಾಜ್ ಎಲ್.ಎಸ್ ಸ್ಪರ್ಧಿಸಿದ್ದು, ಸಮಾಜ ಬಾಂಧವರು ಈ ತಂಡಕ್ಕೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕೆಂದು ಎಸ್ ವಾಗೀಶ್ ತಮ್ಮ ತಂಡದೊಂದಿಗೆ ಸಮಾಜದ ಮತದಾರರಲ್ಲಿ ಮನವಿ ಮಾಡಿದ್ದಾರೆ