ನಂದೀಶ್ ಭದ್ರಾವತಿ ಶಿವಮೊಗ್ಗ
ಶ್ರೀ ಸಾಮಾನ್ಯ ವಾಗೀಶ್ ತಂಡ ಗೆಲ್ಲಿಸಿ, ಸಂಘಟನೆ, ಸಮಾಜದ ಏಳ್ಗೆಗೆ ಶಕ್ತಿ ನೀಡಿ ಎಂದು ನಿರ್ದೇಶಕ ಸ್ಥಾನಕ್ಕೆ ನಿಂತಿರುವ ಎಚ್. ಮಂಜುನಾಥ್ ಹೇಳಿದರು.
ದಾವಣಗೆರೆ ವಿಜಯಯೊಂದಿಗೆ ಮಾತನಾಡಿದ ಎಚ್.ಮಂಜುನಾಥ್, ಉಕ್ಕಿನ ನಗರಿಯಲ್ಲಿ ಚುನಾವಣಾ ಕದನ ಜೋರಾಗಿದ್ದರೂ ಎಲ್ಲ ನಮ್ಮವರೇ. ನಮ್ಮದು ಶ್ರೀ ಸಾಮಾನ್ಯರ ತಂಡ, ಪುಟ್ಟ ತಂಡವಾದರೂ ಸಂಘಟನಾತ್ಮಕ ಶಕ್ತಿ ಹೊಂದಿದೆ.
ಎಲ್ಲರೂ ಒಟ್ಟುಗೂಡಿ ಸಮಾಜದ ಅಭಿವೃದ್ಧಿಯೇ ನಮ್ಮ ಗುರಿ. ಸಮಾಜದ ವಿಷಯ ಬಂದಾಗ ನಾವೆಲ್ಲರೂ ಒಂದೇ. ಸಮಾಜದ ಅಭಿವೃದ್ಧಿಯೇ ಮೊದಲ ಗುರಿಯಾಗಿದ್ದು, ಭದ್ರಾವತಿ ತಾಲೂಕು ಘಟಕದ ವಾಗೀಶ್ ತಂಡಕ್ಕೆ ಮತದಾರರು ಶಕ್ತಿ ನೀಡಬೇಕಾಗಿದೆ. ಹೀಗಾದಾಗ ಮಾತ್ರ ಮಹಾಸಭಾ ಚುನಾವಣೆಗೆ ಇನ್ನಷ್ಟು ಶಕ್ತಿ ಬರುತ್ತದೆ.
ನಮ್ಮ ತಂಡದಲ್ಲಿ ಹಿರಿಯರಿಂದ ಯುವ ಶಕ್ತಿ ಹೆಚ್ಚಿದ್ದು, ಯುವ ಪಡೆಗೆ ಶಕ್ತಿ ಬೇಕಿದೆ. ಆ ಶಕ್ತಿಯನ್ನು ಮತದಾರರು ನೀಡಬೇಕು. ಆಗ ಮಾತ್ರ ವೀರ ಶೈವ ಸಮಾಜಕ್ಕೆ ಶಕ್ತಿ ಬರುತ್ತದೆ ಎಂದರು.
20 ವರ್ಷಗಳಿಂದ ಸಮಾಜಕ್ಕಾಗಿ ವೀರಶೈವ ವೇದಿಕೆ ಮೂಲಕ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವೆ. ಸಮಾಜ ನನಗೆ ಒಂದು ಜವಾಬ್ದಾರಿ ನೀಡಿದರೆ ಇನ್ನು ಉತ್ತಮವಾಗಿ ಸೇವೆ ಮಾಡಲು ಅನುಕೂಲವಾಗುತ್ತದೆ.
ತಾಲೂಕ ಕೇಂದ್ರದಲ್ಲಿ ವೀರಶೈವ ಮಹಾಸಭಾ ಕಚೇರಿ ಆರಂಭಿಸಿ ಇನ್ನಷ್ಟು ವೀರಶೈವ ಲಿಂಗಾಯಿತ ಸಮುದಾಯದವರನ್ನು ಒಟ್ಟುಗೂಡಿಸುವುದು ನನ್ನ ಗುರಿ. ಅದಕ್ಕಾಗಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು.
ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ, ಜೊತೆಗೆ ಸಹಾಯ ಮತ್ತು ಕೌಶಲ್ಯ ತರಬೇತಿ ಸಹಕಾರ, ಕಾನೂನು ಘಟಕ ಸ್ಥಾಪಿಸಲಾಗುವುದು. ಮಠಾಧೀಶರ ನೇತೃತ್ವದಲ್ಲಿ ಚಿಂತನ ಮಂಥನ ದಾಸೋಹ ಕಾಯಕ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು
ತಾಲೂಕಿನಲ್ಲಿ 1300 ಕ್ಕೂ ಹೆಚ್ಚು ಮತದಾರರಿದ್ದು ಅದರಲ್ಲಿ ಕೆಲವರು ಮರಣ ಹೊಂದಿದ್ದಾರೆ. ಜುಲೈ 21ರಂದು ಚುನಾವಣೆ ನಡೆಯಲಿದ್ದು. ಮತದಾರರು ನನ್ನನ್ನು ಬೆಂಬಲಿಸುವ ಮೂಲಕ ಆಯ್ಕೆ ಮಾಡಬೇಕು ಎಂದರು ತಿಳಿಸಿದರು.
ಸಮಾಜ ಸೇವೆ, ಸರಳತೆ ಜತೆಗೆ ಸಮಾಜವನ್ನು ಒಗ್ಗೂಡಿಸುವ ಇರಾದೆ ಹೊಂದಿದ್ದು, ವಾಗೀಶ್ ತಂಡವನ್ನು ಗೆಲ್ಲಿಸಿದರೆ, ಶ್ರೀ ಸಾಮಾನ್ಯನಾಗಿ ಕೆಲಸ ಮಾಡುವ ಮೂಲಕ ನಿಮ್ಮ ಸೇವೆಗೆ ಅವಕಾಶ ಕೊಡಿ ಎಂದಿದ್ದಾರೆ