ಹರಪನಹಳ್ಳಿ : ಬೀಗರ ಊಟ ಸೇವಿಸಿದ 96 ಜನರು ಅಸ್ವಸ್ಥಗೊಂಡು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಹರಪನಹಳ್ಳಿ ತಾಲೂಕಿನ ಶಿಂಗ್ರಿಹಳ್ಳಿ  ಗ್ರಾಮದಲ್ಲಿ ಕಬ್ಬೇರ  ರಾಮಚಂದ್ರಪ್ಪ ಎಂಬುವವರ ಮನೆಯಲ್ಲಿ ಮದುವೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರೂ ರಾತ್ರಿ ಊಟ ಮಾಡಿದ್ದಾರೆ. ಇದಾದ ಬಳಿಕ  11-30ರ ಸುಮಾರಿಗೆ ಒಬ್ಬೊಬ್ಬರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ. 

ಶಿಂಗ್ರಿಹಳ್ಳಿ ಗ್ರಾಮದ 22 ಮಕ್ಕಳು 74 ವಯಸ್ಕರರು ಒಟ್ಟು 96 ಜನರಿಗೆ ಪುಡ್ ಪಾಯಿಸನ್ ಆಗಿದೆ. ಈ ವಿಷಯ ತಿಳಿದು ಕೂಡಲೇ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಲತಾ,  ಅಸ್ವಸ್ಥರು ದಾವಣಗೆರೆಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ತಿಳಿದು ಕೂಡಲೇ ಆಸ್ಪತ್ರೆಗೆ ತೆರಳಿ ಎಲ್ಲಾರ ಆರೋಗ್ಯ ವಿಚಾರಿಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಿಳಿಸಿದ್ದೇನೆ. ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದರಿಂದ ದಾಖಲಾಗಿದ್ದ ಎಲ್ಲಾರೂ ಆರೋಗ್ಯವಾಗಿದ್ದಾರೆ.

ಸಮಾರಂಭಗಳಲ್ಲಿ ಊಟ ತಯಾರಿಸುವಾಗ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಅಡುಗೆ ತಯಾರಿಸುವವರು ಸ್ಥಳವನ್ನು ಸ್ವಚ್ಛತೆ ಕಾಪಡಿಕೊಳ್ಳಬೇಕು. ಅಡುಗೆ ಬಡಿಸುವವರು ಕೈಯನ್ನು ತೊಳೆದುಕೊಂಡು ಬಡಿಸಬೇಕು. ಮದುವೆ ಮನೆಗಳಲ್ಲಿ ಶುದ್ದ ಕುಡಿಯುವ ನೀರನ್ನು ಬಳಸಬೇಕು. ಉಳಿದ ಆಹಾರವನ್ನು ಮತ್ತು ಮರು ಬಳಕೆ ಮಾಡಬಾರದು ಎಂದು ಆರೋಗ್ಯಧಿಕಾರಿ ತಿಳಿಸಿದರು

Share.
Leave A Reply

Exit mobile version