ಚನ್ನಗಿರಿ : ದಿಂಡಿ ಎಂದರೆ ವೀಣೆ,ವೀಣಾ ಉತ್ಸವ ವೆಂದರೆ ನಾಮೋತ್ಸವ ಆಗಿದೆ ಎಂದು ಚನ್ನಗಿರಿ ಬಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಜಿ.ಪಿ.ರವಿಕುಮಾರ್ ಹೇಳಿದರು.

ಪಟ್ಟಣದ ವಿಠ್ಠಲ ರುಕುಮಾಯಿ ಸಮುದಾಯ ಭವನದಲ್ಲಿ ಚನ್ನಗಿರಿ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 80 ನೇ ದಿಂಡಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿಂಡಿ ಉತ್ಸವವು ಸತ್ಸಂಗದಲ್ಲಿದ್ದು ಭಗವಂತನ ಕಿರ್ತನೆ ಪ್ರವಚನ ಮಾಡುವ ಮೂಲಕ ಜನ್ಮದ ಸಾರ್ಥಕತೆ ಪಡೆದುಕೊಳ್ಳುವ ಧಾರ್ಮಿಕ ಸಮಾರಂಭವಾಗಿದ್ದು ಪಂಡರಿ ಸಂಪ್ರದಾಯದಂತೆ ಆಚರಿಸಲಾಗುತ್ತಿದೆ.

ಮೆರವಣಿಗೆ ಕಾರ್ಯಕ್ರಮದಲ್ಲಿ ಪಟ್ಟಣದ ಎಲ್ಲಾ ಸಮಾಜದವರು ಪೂಜೆಯನ್ನು ಸಲ್ಲಿಸುತ್ತಿದ್ದು ಮಹಿಳಾ ಭಜನಾ ಮಂಡಳಿಯವರು ವಿಠ್ಠಲ ರುಕುಮಾಯಿಯವರ ಗೀತೆಗಳನ್ನು ಹಾಡುವ ಮೂಲಕ ಮೆರೆಗು ನೀಡಿದ್ದಾರೆ ಎಂದರು.

ಚನ್ನಗಿರಿ ಪಟ್ಟಣದಲ್ಲಿ ಸಮಾಜದ ಎಲ್ಲಾ ಬಾಂಧವರ ಸಹಕಾರದೊಂದಿಗೆ ಒಂದೂವರೆ ಕೋಟಿ ರೂ ವೆಚ್ದದಲ್ಲಿ ಭವ್ಯವಾದ ವಿಠ್ಠಲ ರುಕುಮಾಯಿ ದೇಗುಲವನ್ನು ನಿರ್ಮಾಣ ಮಾಡುತ್ತಿದ್ದು ಶೇ 70 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳಿಸಿ ಲೋಕಾರ್ಫಣೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ದೇಗುಲದ ನಿರ್ಮಾಣಕ್ಕೆ ದೇಣಿಗೆ ನೀಡಿದ ಭಕ್ತಾದಿಗಳಿಗೆ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಸಮಾಜದ ಮುಖಂಡರಾದ ಮಂಜುನಾಥ್, ರಂಗನಾಥ್, ಪಾಂಡುರಂಗ, ರವಿಕುಮಾರ್, ರಘು, ಕುಮಾರ್, ಗಣೇಶ್ ಸಂತೋಷ್ ಇತರರು ಹಾಜರಿದ್ದರು

Share.
Leave A Reply

Exit mobile version