ದಾವಣಗೆರೆ : ದೇವನಗರಿ ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾದ 24ನೇ ಮಹಾ ಅಧಿವೇಶನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.ಅಧಿವೇಶನಕ್ಕೆ ನಗರದ ರೇಣುಕಾಮಂದಿರದಲ್ಲಿ ಚಾಲನೆ ಸಿಕ್ಕಿತ್ತು. ನಂತರ ರೇಣುಕಾಮಂದಿರದಿಂದ ಪ್ರಮುಖ ಬೀದಿಗಳಲ್ಲಿ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರನ್ನು ಮೆರವಣಿಗೆ ಮಾಡುವ ಮೂಲಕ ಮಹಾ ಆಧಿವೇಶಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ದಾವಣಗೆರೆಯ ಎಂಬಿಎ ಕಾಲೇಜ್ ಮೈದಾನದಲ್ಲಿ ಎರಡು ದಿನಗಳ ಕಾಲ ಮಹಾ ಅಧಿವೇಶ ನಡೆಯಲಿದ್ದು, ಕೆಲವು ನಿರ್ಣಯಗಳನ್ನು ಸಹ ಈ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ.
ಮೈಸೂರಿನ ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಈ ಅಧಿವೇಶನಕ್ಕೆ ಚಾಲನೆ ನೀಡಿ ಮಾತನಾಡಿ, ದಾವಣಗೆರೆಯಲ್ಲಿ ಮಹಾ ಅಧಿವೇಶನ ಎರನೇ ಬಾರಿನಡೆಯುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭಾ 100 ವರ್ಷಕ್ಕೂ ಹಿರಿದಾದ ಇತಿಹಾಸ ಹೊಂದಿದೆ.
ಆರೇಳು ವರ್ಷಗಳ ಹಿಂದೆ ಸಮಾಜದ ಸಂಘಟನೆಗಾಗಿ ಸಮಾಜದ ಬಾಂಧವರು ಏಕೋಭಾವನೆಯಿಂದ ಹೋರಾಟ ನಡೆಸಿದ್ದರು. ಎಷ್ಡೇ ಆತಂಕರಿಕ ಕಲಹ ಒಳಬೇಗುದಿ ಬಿಟ್ಟು ಒಂದೇ ಧ್ವನಿಯಲ್ಲಿ ಬದುಕಲು ಪ್ರಾರಂಭವಾಗಲು ಕಾರಣವಾಗಿದ್ದು ಮಹಾಸಭೆ ಎಂದು ಶ್ರೀಗಳು ಹೇಳಿದರು.
ವೀರಶೈವ ಮಹಾಸಭಾ ಹೊಸ ಆಯಾಮದಲ್ಲಿ ಕೆಲಸ ಮಾಡುತ್ತಿದೆ. ಜಗತ್ತಿನಲ್ಲಿ ಆಚಾರ ವಿಚಾರಗಳ ಸಮನ್ವಯತೆ ಸಾರಿದವರು, ಎಲ್ಲರಿಗೂ ಒಳ್ಲೆಯದಾಗಲಿ ಎಂಬ ಆಶಯ ನಮ್ಮದು. ಆ ಕಾರಣಕ್ಕಾಗಿ ವೀರಶೈವರನ್ನು ವಿಶ್ವಧರ್ಮ ಎನ್ನುತ್ತಾರೆ.
ಬಸವಾದಿತತ್ವ ಸಾರಿದ ವೀರಶೈವ ಸಮಾಜ ಇಂದು ಬೃಹತ್ ಆಗಿ ಬೆಳೆದಿದೆ. ತಮಿಳುನಾಡು,ಆಂಧ್ರಪ್ರದೇಶ, ತೆಲಂಗಾಣ ಕೇರಳದಲ್ಲಿ ಇಂದಿಗೂ ವೀರಶೈವ ಲಿಂಗಾಯಿತ ಸಮಾಜದವರು ಇದ್ದಾರೆ. ಅಲ್ಲಿಯೂ ಇಷ್ಟಲಿಂಗ ಪೂಜೆ ನಡೆಯುತ್ತದೆ.
ಜಾತಿಗಣತಿ ಮಾಡಿ ಎಂದು ಹೇಳಿದವರೇ ವೀರಶೈವರು ಸಮಾಜದಲ್ಲಿ ಅನೇಕ ಜ್ವಲಂತ ಸಮಸ್ಯೆ ಇದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಅದರಲ್ಲೂ ಜಾತಿಗಣತಿ ಮಾಡಲುಹೇಳಿದವರೇ ಮಹಾಸಭೆಯವರು. ವೈಜ್ಞಾನಿಕ ಅಂಕಿ ಅಂಶಗಳ ಆಧಾರದಲ್ಲಿ ಸರಿಯಾಗಿ ಪರಿಶೀಲಿಸಿ ಸರಕಶರಕ್ಕೆ ವರದಿ ನೀಡಬೇಕು. ಅದಕ್ಕಾಗಿ ಎಲ್ಲರೂ ಏಕ ಭಾವನೆಯಿಂದ ಸಂಘಟಿತರಾಗಬೇಕು. ಆಗ ಮಾತ್ರ ಆಶೋತ್ತರಗಳು ಈಡೇರಲು ಸಾಧ್ಯ ಎಂದು ಶ್ರೀಗಳು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆವಹಿಸಿಮಾತನಾಡಿ, ಲಿಂಗಾಯತ ಸಮಾಜವನ್ನು ವಿಭಜಿಸಲು ಅವಕಾಶ ನೀಡುವುದಿಲ್ಲ. ಹಲವಾರು ವರ್ಷಗಳಿಂದ ನಮ್ಮ ಸಮಾಜವನ್ನು ವಿಘಟಿಸುವ – ವಿಭಜಿಸುವ ಹಲವಾರು ಪ್ರಯತ್ನ ನಡೆದಿವೆ.
ಮಹಾಸಭಾ ಸಮಾಜದ ವಿಘಟನೆಗೆ ಅವಕಾಶ ನೀಡಿಲ್ಲ. ಇನ್ನು ಮುಂದೆಯೂ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದಿನ ಕಂಪ್ಯೂಟರ್ ಯುಗದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿರುವ ನಮ್ಮ ಯುವ ಪೀಳಿಗೆಗೆ ನಮ್ಮ ಧರ್ಮದ ಸಂಸ್ಕಾರ, ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ತಿಳಿಸಿಕೊಡಲು ಅಧಿವೇಶನದಲ್ಲಿ ಭಾಗವಹಿಸಿರುವ ನಮ್ಮ ಸಮಾಜದ ಹಿರಿಯರು, ಗುರುಗಳು ಸೂಕ್ತ ಯೋಜನೆಗಳನ್ನು ಹಮ್ಮಿಕೊಳ್ಳಲು ಮಾರ್ಗದರ್ಶನ ನೀಡಲಿ ಎಂದು ಆಶಿಸಿದರು.
ಹಾನಗಲ್ ಕುಮಾರಸ್ವಾಮಿಗಳ ದೂರದೃಷ್ಟಿಯಿಂದ ಪ್ರಾರಂಭಗೊಂಡ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಗೆ 119 ವರ್ಷಗಳ ಸೇವಾ ಇತಿಹಾಸವಿದೆ. ಮಹಾಸಭೆಯು ಇಲ್ಲಿಯವರೆಗೆ 22 ಅಧ್ಯಕ್ಷರುಗಳ ಸೇವೆ ಸಲ್ಲಿಸಿದ್ದು, 23ನೇ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಭಾಗ್ಯ ನನ್ನದಾಗಿದೆ.
ಕೆ.ಪಿ.ಪುಟ್ಟಣ್ಣ ಚೆಟ್ಟಿಯವರ ಅಧ್ಯಕ್ಷತೆಯಲ್ಲಿ 8 ನೇ ಅಧಿವೇಶನವು 1917ರ ಡಿಸೆಂಬರ್ 27, 28, 29 ಮತ್ತು 30 ರಂದು ಒಟ್ಟು 4 ದಿನಗಳ ಕಾಲ ದಾವಣಗೆರೆಯಲ್ಲಿ ನೆರವೇರಿತ್ತು. 106 ವರ್ಷಗಳ ನಂತರ ಇಂದು ಮಹಾಸಭೆಯ 24ನೇ ಮಹಾ ಅಧಿವೇಶನವು ನನ್ನ ಜನ್ಮಭೂಮಿ, ಕರ್ಮಭೂಮಿಯಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವುದು ನನ್ನ ಸೌಭಾಗ್ಯವಾಗಿದೆ.
ಅಂದು ನಡೆದ ಮಹಾ ಅಧಿವೇಶನದಲ್ಲಿ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಲಿಂ. ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಅಧಿವೇಶನ ನಡೆಸುವ ಸಲುವಾಗಿ ಚಿರಸ್ಥಾಯಿ ನಿಧಿ ಸ್ಥಾಪಿಸಿದರು. ಈ ಸಂದರ್ಭದಲ್ಲಿ ಪೂಜ್ಯರನ್ನೂ ಕೂಡ ಸ್ಮರಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರಣಾಂತರಗಳಿಂದ ಎರಡು ಸಲ ಮಹಾಅಧಿವೇಶನವನ್ನು ಮುಂದೂಡಲಾಗಿತ್ತು. ಈ ಮಹಾಅಧಿವೇಶನ ನಡೆಸಲು ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕಗಳ ಸಹಕಾರದೊಂದಿಗೆ ದಾವಣಗೆರೆ ಜಿಲ್ಲಾ ಘಟಕವು ಆತಿಥ್ಯ ವಹಿಸಿಕೊಂಡಿದೆ ಎಂದು ಹೇಳಿದರು.ದಿವ್ಯ ಸಾನಿಧ್ಯವನ್ನು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ,ಪಂಚಮಸಾಲಿ ಪೀಠದ ವಚನಾನಂದ ಶ್ರೀ ಹಾಗೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರಖಂಡ್ರೆ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಸಮಾಜಬಾಂಧವರು ಹಾಗೂವಿವಿಧ ಮಠಾಧೀಶರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಡಿ.ಜಿಶಾಂತನಗೌಡ, ಶಿವಗಂಗಾ ಬಸವರಾಜ್, ಬಿ.ಪಿಹರೀಶ್,
ಬಿ.ಕೆ ಸಂಗಮೇಶ್ವರ, ಅಥಣಿ ವೀರಣ್ಣ,ಅಣಬೇರು ರಾಜಣ್ಣ, ಶಂಕರಬಿದರಿ, ಡಾ.ಎ.ಹೆಚ್ ಶಿವಯೋಗಿ ಸ್ವಾಮಿ,ಎಸ್ ಎಸ್ ಗಣೇಶ್,ಸಚ್ಚಿದಾನಂದ ಮೂರ್ತಿ,ಬಿ.ಸಿ ಉಮಾಪತಿ,ತಿಪ್ಪಣ್ಣ ಸೇರಿದಂತೆ ಆಂಧ್ರ ಪ್ರದೇಶ, ತಮಿಳುನಾಡಿನಿಂದ ಸಮಾಜಬಾಂಧವರು ಆಗಮಿಸಿದ್ದರು.ದೇವರಮನೆ ಶಿವಕುಮಾರ್ ಸ್ವಾಗತಿಸಿದರು.