ದಾವಣಗೆರೆ : ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲೋ ಸೀಟುಗಳ ಸಂಖ್ಯೆ ಎಷ್ಟು..? ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಗೆಲ್ಲೋ ಸೀಟುಗಳ ಸಂಖ್ಯೆ ಎಷ್ಟು ಅನ್ನೋ ಕುತೂಹಲ ಗರಿಗೆದರಿದೆ. ಈ ನಡುವೆ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ಮತ್ತೆ ಕೈ ಹಿಡಿದಿದ್ದು, ಕಳೆದ ವಿಧಾನಸಭೆ ಚುನಾವಣೆಯಂತೆಯೇ ಲೋಕಸಭಾ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಬಿಜೆಪಿಗೆ ಮೋದಿ ಅಲೆ ವರ್ಕೌಟ್ ಆಗಿಲ್ಲ ಅನ್ನೋ ಮಾತುಗಳು ಕೇಳಿಬರ್ತಾಯಿವೆ. ಹಾಗಾದ್ರೆ ಕಾಂಗ್ರೆಸ್ 20+ ಎಂಪಿ ಸೀಟುಗಳನ್ನ ಗೆಲ್ಲೋದು ಗ್ಯಾರಂಟಿನಾ.? ಕಮಲ ದಳ ಗೆಲ್ಲೋದು ಇಷ್ಟು ಕಡಿಮೆ ಸೀಟಾ..? ಮೋದಿ ಅಲೆ ಕರ್ನಾಟಕದಲ್ಲಿ ಫ್ಲಾಪ್ ಆಗೋಕೆ ಏನ್ ಕಾರಣ ಗೊತ್ತಾ.?
ಕರ್ನಾಟಕ ಲೋಕಸಭಾ ಚುನಾವಣೆ ಇಡಿ ದೇಶದಲ್ಲೇ ವಿಭಿನ್ನ. ಅತಿ ಹೆಚ್ಚು ಪ್ರಜ್ಞಾವಂತರು, ಬುದ್ಧಿವಂತರು ಇರೋ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. 2019ರಲ್ಲಿ 28 ಎಂಪಿ ಸೀಟುಗಳ ಪೈಕಿ ಬಿಜೆಪಿಗೆ 25 ಸೀಟುಗಳನ್ನ ಕೊಟ್ಟಿದ್ದ ರಾಜ್ಯದ ಮತದಾರರು., ಈ ಸಲ ಬಿಜೆಪಿಗೆ ಮುಟ್ಟಿ ನೋಡಿಕೊಳ್ಳುವ ಹೊಡೆತ ಕೊಡೋದು ಗ್ಯಾರಂಟಿ ಅನ್ನೋ ಆತ್ಮ ವಿಶ್ವಾಸ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿದೆ. ಯಾಕಂದ್ರೆ ಪ್ರಧಾನಿ ಮತ್ತು ಕೇಂದ್ರ ಬಿಜೆಪಿ ಕಳೆದ 5 ವರ್ಷಗಳಲ್ಲಿ ಮಲತಾಯಿ ಧೋರಣೆಯಿಂದ ನೋಡಿದೆ. ನೆರೆ, ಬರ ಪರಿಹಾರ ಬಿಡುಗಡೆಯಲ್ಲಿ ತಾರತಮ್ಯವೆಸಗಿದೆ.
ಜಿಎಸ್ಟಿ ಪಾಲಲ್ಲಿ ತಾರತಮ್ಯವೆಸಗಿದೆ. ಅಷ್ಟೇ ಅಲ್ಲ, ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ, ಸುಳ್ಳು ಭರವಸೆಗಳು ಬಿಜೆಪಿಗೆ ಈ ಚುನಾವಣೆಯಲ್ಲಿ ಶಾಪವಾಗಿ ಬದಲಾದ್ರೆ, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ಗೆ ವರದಾನವಾಗಿ ಮಾರ್ಪಟ್ಟಿವೆ. ಹೀಗಾಗಿ ಈ ಸಲದ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 20+ ಟಾರ್ಗೆಟ್ ಇಟ್ಕೊಂಡಿದ್ರೂ, ಖಂಡಿತ 16ಕ್ಕೂ ಹೆಚ್ಚು ಎಂಪಿ ಸೀಟುಗಳನ್ನ ಗೆಲ್ತೀವಿ ಅನ್ನೋ ವಿಶ್ವಾಸ ರಾಜ್ಯ ಕಾಂಗ್ರೆಸ್ ನಾಯಕರಿಗಿದೆ.
ನಿಮಗೆ ಗೊತ್ತಿರ್ಲಿ, ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಆಂತರಿಕ ಮನಸ್ತಾಪಗಳನ್ನ ಬದಿಗಿರಿಸಿ, ಕೈ ನಾಯಕರು ಒಗ್ಗಟ್ಟಿನಿಂದ ಗೆಲುವಿಗಾಗಿ ಶ್ರಮಿಸಿದ್ರು. ಸಿಎಂ ಸಿದ್ರಾಮಯ್ಯನವರ ಅಬ್ಬರ ಪ್ರಚಾರ, ಮೋದಿ ಮತ್ತು ಕೇಂದ್ರ ಸರ್ಕಾರದ ತಪ್ಪುಗಳನ್ನ ಜನರಿಗೆ ಮನಮುಟ್ಟುವಂತೆ ಮಾಡಿದ ಪ್ರಯತ್ನ ಕೈಗೆ ಲಾಭವಾಗಿದೆ. ಅದೇ ರೀತಿ ಡಿಕೆಶಿ ಆಪರೇಷನ್ ಹಸ್ತ, ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಕೂಡ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಎಂಪಿ ಸೀಟುಗಳನ್ನ ಗೆಲ್ಲುವಲ್ಲಿ ಅನುಕೂಲ ಮಾಡಿಕೊಡುತ್ತೆ ಅನ್ನೋ ಮಾತುಗಳು ಕೇಳಿಬರ್ತಾಯಿವೆ.
ಕಾಂಗ್ರೆಸ್ನ ಕೆಲ ನಾಯಕರೇ ಹೇಳೋ ಪ್ರಕಾರ ಈ ಸಲ ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 16 ಸೀಟು ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ಇನ್ನುಳಿದ 4 ಕ್ಷೇತ್ರಗಳಲ್ಲಿ ಜಿದ್ದಾ ಜಿದ್ದಿ ಏರ್ಪಡಲಿದೆ. ಅದೇ ರೀತಿ 2 ಕ್ಷೇತ್ರಗಳಲ್ಲಿ 50-50 ಚಾನ್ಸನ್ಸ್ ಇದೆಯಂತೆ. ಇನ್ನ ಕರ್ನಾಟಕದಲ್ಲಿ ಮೋದಿ ಅಲೆ ಕುಗ್ಗಿ ಹೋಗಿದ್ದು, ಬಿಜೆಪಿ ಕರ್ನಾಟಕದಲ್ಲಿ ಸಿಂಗಲ್ ಡಿಜಿಟ್ ದಾಟಲ್ಲ ಅನ್ನೋ ಮಾತುಗಳಿವೆ.
ಆದ್ರೆ ಬಿಜೆಪಿ ನಾಯಕರ ಲೆಕ್ಕಾಚಾರದ ಪ್ರಕಾರ 10ರಿಂದ 12 ಸೀಟು ಗೆಲ್ಲಬಹುದು ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ಇನ್ನ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ 1 ಸೀಟು ಗೆದ್ರೆ ಅದೇ ದೊಡ್ದು ಅನ್ನೋ ಮಾತುಗಳಿವೆ. ಮತ್ತೆ ಕೆಲವರು ಈ ಸಲ ಜೆಡಿಎಸ್ ಸೊನ್ನೆ ಸುತ್ತುತ್ತೆ ಅಂತಿದ್ದಾರೆ. ಆದ್ರೆ ಜೆಡಿಎಸ್ ನಾಯಕರು ಮಾತ್ರ ಮಂಡ್ಯ ಮತ್ತು ಹಾಸನ 2 ಕ್ಷೇತ್ರಗಳನ್ನ ಗೆದ್ದೇ ಗೆಲ್ತೀವಿ ಅನ್ನೋ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ, ಹಲವು ವರ್ಷಗಳಿಂದ ಜೆಡಿಎಸ್ ಭದ್ರಕೋಟೆ ಎನಿಸಿರೋ ಹಾಸನ ಲೋಕಸಭಾ ಕ್ಷೇತ್ರ ಈ ಬಾರಿ ಬಿಜೆಪಿಯ ಸಂಪೂರ್ಣ ಬೆಂಬಲವಿಲ್ಲದೇ ಕೈ ತಪ್ಪುವ ಸಾಧ್ಯತೆ ಇದೆ ಅನ್ನೋ ಮಾತುಗಳು ಜೆಡಿಎಸ್ ನಾಯಕರಲ್ಲೇ ಹರಿದಾಡ್ತಾಯಿವೆ. ಹಾಗಾದ್ರೆ ನಿಮ್ಮ ಪ್ರಕಾರ ಈ ಸಲ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಎಷ್ಟೆಷ್ಟು ಸೀಟುಗಳನ್ನ ಗೆಲ್ಲಬಹುದು.