ದಾವಣಗೆರೆ : BJPಗೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಮಹಾ ಆಘಾತ ಕೊಟ್ಟಿದ್ದಾರೆ. ಜೈಲಿಂದ ರಿಲೀಸ್ ಆದ ಒಂದೇ ದಿನಕ್ಕೆ ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ಅಬ್ಬರದ ಭಾಷಣ ಮಾಡ್ತಿದ್ದಾರೆ. ಈ ಸಲ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದೇ ಇಲ್ಲ. ಹೀಗಾಗಿ ಮೋದಿ ಮತ್ತೆ ಪ್ರಧಾನಿಯಾಗೋದಿಲ್ಲ ಅಂತೇಳಿ ಗುಡುಗಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯೊಳಗಿನ ಆ ಒಂದು ಸೀಕ್ರೆಟ್ಅನ್ನ ಅರವಿಂದ ಕೇಜ್ರಿವಾಲ್ ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ಏನದು ಸೀಕ್ರೆಟ್ ಅಂದ್ರಾ.?
ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್.. ಬಿಜೆಪಿ ವಿರುದ್ಧ ಕೊತಕೊತ ಕುದಿಯುತ್ತಿದ್ದಾರೆ. ತಮ್ಮ ಮೇಲೆ ವಿನಃ ಕಾರಣ ಲಿಕ್ಕರ್ ಸ್ಕ್ಯಾಂ ಆರೋಪ ಹೊರಿಸಿ ಜೈಲಿಗೆ ಕಳಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳೋದಕ್ಕೆ ಬಿಜೆಪಿ ವಿರುದ್ಧ ಕೆಂಡಾಕಾರುತ್ತಿದ್ದಾರೆ. ಜೈಲಿಂದ ಬಿಡುಗಡೆಯಾದ ಒಂದೇ ದಿನಕ್ಕೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಧುಮುಕಿರೋ ಅರವಿಂದ ಕೇಜ್ರಿವಾಲ್, ಜಗತ್ತಿನೆದುರು ಪ್ರಧಾನಿ ಮೋದಿ ಮುಖವಾಡದ ಹಿಂದಿನ ಮುಸುಕನ್ನ ಕಳಚಿಟ್ಟಿದ್ದಾರೆ. ಅದೇನು ಗೊತ್ತಾ.? ಅದುವೇ 75 ವರ್ಷ ವಯೋಮಿತಿ ಸೀಕ್ರೆಟ್.
ಹೌದು ವೀಕ್ಷಕರೇ, ಬಿಜೆಪಿಯಲ್ಲಿ 75 ವರ್ಷ ವಯೋಮಿತಿ ದಾಟಿದವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ಕೊಡಲ್ಲ ಅನ್ನೋ ಅಲಿಖಿತ ನಿಯಮವಿದೆ. ಈ ನಿಯಮವನ್ನ ಜಾರಿಗೆ ತಂದಿದ್ದೇ ಪ್ರಧಾನಿ ಮೋದಿ.. ಆ ರೂಲ್ ಇಟ್ಕೊಂಡು ಹಲವು ದಶಕಗಳ ಕಾಲ ಪಕ್ಷವನ್ನ ಕಟ್ಟಿ ಬೆಳೆಸಿದ ಎಲ್ಕೆ ಅಡ್ವಾಣಿ ಅವರನ್ನ ಸೈಡ್ಲೈನ್ ಮಾಡಿದ್ರು. ಕರ್ನಾಟಕದಲ್ಲೂ ಕೂಡ 73 ವರ್ಷದ ಕರಡಿ ಸಂಗಣ್ಣ ಟಿಕೆಟ್ ಕೈ ತಪ್ಪಿಸಿದ್ರು. ಈಶ್ವರಪ್ಪ, ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಘಟಾನುಘಟಿ ರಾಜಕಾರಣಿಗಳಿಂದ ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ಪಟ್ಕೊಂಡ್ರು. ಆದ್ರೆ ಈ ರೂಲ್ ಪ್ರಧಾನಿ ಮೋದಿ ಅವರಿಗೆ ಅದ್ಯಾಕೆ ಅಪ್ಲೇ ಆಗಲ್ಲ.? ಪ್ರಧಾನಿ ಮೋದಿ ಅವರಿಗೆ ಮುಂದಿನ ವರ್ಷ 75 ವರ್ಷ ತುಂಬಲಿದೆ. ಹೀಗಿದ್ರೂ ಮೋದಿ ಅಮಿತ್ ಶಾ, ಯೋಗಿ ಆದಿತ್ಯನಾಥ್ ಅವರನ್ನ ಬದಿಗೊತ್ತಿ ಮತ್ತೆ ಪ್ರಧಾನಿಯಾಗಲು ರೆಡಿಯಾಗಿರೋದೇಕೆ.? 3 ಸಲ ಗುಜರಾತ್ ಸಿಎಂ, 2 ಸಲ ಪ್ರಧಾನಿಯಾಗಿರೋ ಮೋದಿ ಅವರಿಗೆ ಮತ್ತೆ ಪ್ರಧಾನಿಯಾಗ್ಬೇಕು ಅನ್ನೋದು ದುರಾಸೆ ಅನ್ನಿಸೋದಿಲ್ವಾ..? ಕುಟುಂಬ ರಾಜಕಾರಣಕ್ಕೆ ವಿರೋಧ ವ್ಯಕ್ತಪಡಿಸೋ ಮೋದಿ ಸಾಹೇಬ್ರು., ಕರ್ನಾಟಕದಲ್ಲಿ ಫ್ಯಾಮಿಲಿ ಪಾರ್ಟಿ ಜೆಡಿಎಸ್ ಜೊತೆಗೆ ಚುನಾವಣಾ ದೋಸ್ತಿ ಮಾಡ್ಕೊಂಡಿರೋದು ಎಷ್ಟು ಸರಿ.? ಅಂದ್ರೆ ಬಿಜೆಪಿಯಲ್ಲಿ ಮೋದಿ ತಮ್ಮ ಮೂಗಿನ ನೇರಕ್ಕೆ ರೂಲ್ಸ್ ಬದಲಾಯಿಸಿಕೊಳ್ತಾರಾ ಅನ್ನೋ ಶಂಕೆ ವ್ಯಕ್ತವಾಗಿದೆ. ಇದೇ ವಿಚಾರವಾಗಿ ದನಿ ಎತ್ತಿರೋ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಈ ಸಲ ಮೋದಿ ಆಟ ನಡೆಯಲ್ಲ. ಕನಸೂ ಈಡೇರಲ್ಲ. ಯಾಕಂದ್ರೆ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 220 ರಿಂದ 230 ಸ್ಥಾನಗಳಿಗೆ ಕುಸಿಯಲಿದೆ ಅಂತೇಳಿ ಭವಿಷ್ಯ ನುಡಿದಿದ್ದಾರೆ.
ಒಂದೊಮ್ಮೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಮೋದಿಯಂತೂ ಪ್ರಧಾನಿಯಾಗಲ್ಲ. ಮೋದಿ ಬದಲಿಗೆ ಗೃಹ ಸಚಿವರಾಗಿರುವ ಅಮಿತ್ ಶಾ ಮುಂದಿನ ಪ್ರಧಾನಿ ಎಂದೂ ಭವಿಷ್ಯ ನುಡಿದಿದ್ದಾರೆ. ಕೇಜ್ರಿವಾಲ್ ಹೇಳಿಕೆ ಮತದಾರರ ಮನಸ್ಸಿನ ಮೇಲೆ ಬೀರಬಹುದಾದ ಪರಿಣಾಮವನ್ನು ತಕ್ಷಣ ಗ್ರಹಿಸಿದ ಅಮಿತ್ ಶಾ ಕೂಡಲೇ ರಿಯಾಕ್ಟ್ ಮಾಡಿದ್ದಾರೆ. ಹಾಗೇನೂ ಇಲ್ಲ. ಮೋದಿಯವರೇ ಪ್ರಧಾನಿಯಾಗಿ ಪೂರ್ಣಾವಧಿ ಪೂರೈಸಲಿದ್ದಾರೆ. ಪಕ್ಷದ ಸಂವಿಧಾನದಲ್ಲೂ ಅಂಥ ನಿಯಮಗಳಿಲ್ಲ ಅಂತೇಳಿ ಸ್ಪಷ್ಟಪಡಿಸಿದ್ದಾರೆ. ಆದ್ರೆ ಅರವಿಂದ ಕೇಜ್ರಿವಾಲ್ ಅವರು ಮಾತ್ರ ಬಿಜೆಪಿ ವಿರುದ್ಧ ಕೆಂಡಾಕಾರೋದನ್ನ ನಿಲ್ಲಿಸಿಲ್ಲ. ಈ ಸಲದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಎಲ್ಲಾ ಪ್ರತಿಪಕ್ಷ ನಾಯಕರು ಜೈಲು ಪಾಲಾಗಲಿದ್ದಾರೆ ಅಂತೇಳಿ ಭವಿಷ್ಯ ನುಡಿದಿದ್ದಾರೆ. ಅಷ್ಟೇ ಅಲ್ಲ, ಎಎಪಿ ತನ್ನ ಉತ್ತಮ ಕೆಲಸದಿಂದ ಬಿಜೆಪಿಯನ್ನು ಸೋಲಿಸುತ್ತದೆ ಎಂದು ತಿಳಿದಿರುವುದರಿಂದ ಮೋದಿ ಪಕ್ಷವನ್ನು ಹತ್ತಿಕ್ಕಲು ಬಯಸುತ್ತಿದ್ದಾರೆ ಎಂದು ಹೇಳಿದರು. ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳುವ ಮೋದಿ ಕಳ್ಳರು ಮತ್ತು ಡಕಾಯಿತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ₹70,000 ಕೋಟಿಗಳ ಹಗರಣದಲ್ಲಿ ಭಾಗಿಯಾಗಿರುವ ಒಬ್ಬ ನಾಯಕನ ವಿರುದ್ಧ ಮೋದಿ ಆರೋಪ ಮಾಡಿದ ಹತ್ತು ದಿನಗಳ ನಂತರ ಅವರ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ನೀವು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಯಸಿದರೆ, ಕೇಜ್ರಿವಾಲ್ ಅವರಿಂದ ಕಲಿಯಿರಿ ಅಂತೇಳಿ ಜನರಿಗೆ ಕರೆ ನೀಡಿದ್ದಾರೆ.
ಹಾಗಾದ್ರೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಈ ಆಕ್ರೋಶದ ಮಾತುಗಳ ಬಗ್ಗೆ ನೀವೇನಂತಿರಾ.? ಬಿಜೆಪಿಯಲ್ಲಿ ಮೋದಿಗೊಂದು ರೂಲೂ, ಇತರೆ ನಾಯಕರಿಗೊಂದು ರೂಲಾ.?