ದಾವಣಗೆರೆ : BJP ಅಭ್ಯರ್ಥಿ ಜೊಲ್ಲೆಗೆ ಗ್ಯಾರಂಟಿ ಭಯ ಶುರುವಾಗಿದ್ಯಾ..? ಹಾಲಿ ಎಂಪಿ ಆಗಿದ್ರೂ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಚಿಕ್ಕೋಡಿಯಲ್ಲಿ ಕ್ರಿಯೇಟ್ ಆಗಿರೋ ವೇವ್ ನೋಡಿ ಬೆಚ್ಚಿಬಿದ್ದಿದ್ದಾರಾ.? ಚಿಕ್ಕೋಡಿಯಲ್ಲಿ ರಾಜ್ಯ ಬಿಜೆಪಿಗೆ ಆ 1 ಭಯ ಇನ್ನಿಲ್ಲದಂತೆ ಕಾಡ್ತಾಯಿದೆಯಾ..? ಅಖಾಡದಲ್ಲಿ ಹೇಗಿದೆ ಜಾರಕಿಹೊಳಿ ಹೂಡಿರೋ ರಣತಂತ್ರ ಅಂದ್ರಾ?
ಚಿಕ್ಕೋಡಿ.. ತೀವ್ರ ಕುತೂಹಲ ಮತ್ತು ಜಿದ್ದಾಜಿದ್ದಿಗೆ ಕಾರಣವಾಗಿರೋ ಲೋಕಸಭಾ ಕ್ಷೇತ್ರ. ಮೇ 07ರಂದು ಈ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು. ಇಲ್ಲಿ ಬಿಜೆಪಿ ಹಾಲಿ ಎಂಪಿ ಅಣ್ಣಾಸಾಹೇಬ್ ಜೊಲ್ಲೆ ಮತ್ತು ಕಾಂಗ್ರೆಸ್ನ ಪ್ರಿಯಾಂಕಾ ಜಾರಕಿಹೊಳಿ ಮಧ್ಯೆ ಹೈವೋಲ್ಟೇಜ್ ವಾರ್ ಶುರುವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಏನಂದ್ರೆ ಪ್ರಿಯಾಂಕಾ ಜಾರಕಿಹೊಳಿ ಇದೇ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇವರು ಸೋತ್ರೆ ಇವರಿಗೆ ಅನುಕಂಪ ಕ್ರಿಯೇಟ್ ಆಗುತ್ತೆ.
ಮುಂದಿನ ಚುನಾವಣೆಯಲ್ಲಿ ಗೆದ್ದೇ ಗೆಲ್ಲೋ ಹುಮ್ಮಸ್ಸಿರುತ್ತೆ. ಆದ್ರೆ ಒಂದೊಮ್ಮೆ ಈ ಸಲವೇ ಗೆದ್ರೆ ಹಾಲಿ ಬಿಜೆಪಿ ಎಂಪಿ ಮತ್ತು ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರೋ ಅಣ್ಣಾಸಾಹೇಬ್ ಅವರಿಗೆ ಗರ್ವಭಂಗ ಮಾಡಿದಂತಾಗುತ್ತೆ.. ಅಷ್ಟೇ ಅಲ್ಲ, ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಫ್ಯಾಮಿಲಿ ಹಿಡಿತ ಕೂಡ ಮತ್ತಷ್ಟು ಹೆಚ್ಚಾಗುತ್ತೆ. ಮೋಸ್ಟ್ ಇಂಪಾರ್ಟೆಂಟ್ ಥಿಂಗ್ ಏನಂದ್ರೆ ಚಿಕ್ಕೋಡಿಯಲ್ಲಿ ಯುವ ರಾಜಕಾರಣಿ ಪ್ರಿಯಾಂಕಾ ಜಾರಕಿಹೊಳಿ ಪರ ದೊಡ್ಡ ಮಟ್ಟದಲ್ಲಿ ವೇವ್ ಕ್ರಿಯೇಟ್ ಆಗಿದೆ.. ಕಾಂಗ್ರೆಸ್ ಮಹಿಳೆಯರಿಗೆ ಕೊಟ್ಟಿರೋ ಸಾಲು ಸಾಲು ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಮತ್ತು ಪ್ರಿಯಾಂಕಾ ಜಾರಕಿಹೊಳಿ ಬೆನ್ನಿಗೆ ನಿಂತಿವೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳು ಇನ್ನಿಲ್ಲದ ಭಯ ಹುಟ್ಟಿಸಿವೆ. ನಿಮಗೆ ಗೊತ್ತಿರ್ಲಿ, ವಿಧಾನಸಭೆ ಚುನಾವಣೆಯಲ್ಲಿ ಇವೇ ಗ್ಯಾರಂಟಿ ಯೋಜನೆಗಳು ಬಿಜೆಪಿ ಹೀನಾಯ ಸೋಲಿಗೆ ಕಾರಣವಾಗಿದ್ವು. ಇವೇ ಗ್ಯಾರಂಟಿ ಯೋಜನೆಗಳು ಈ ಸಲವೂ ರಾಜ್ಯ ಕಾಂಗ್ರೆಸ್ ಕೈ ಹಿಡಿಯಲಿದ್ದು, ಬಿಜೆಪಿಗೆ 28 ಕ್ಷೇತ್ರಗಳಲ್ಲೂ ಢವಢವ ಶುರುವಾಗಿದೆ.
ಗ್ಯಾರಂಟಿ ಯೋಜನೆಗಳು ಮಹಿಳಾ ಮತದಾರರ ಮನಗೆದ್ದಿವೆ. ಹೀಗಾಗಿ ಮಹಿಳಾ ಮತಗಳು ಕೈಕೊಟ್ರೆ ಬಿಜೆಪಿಗೆ ಕಳೆದ ವಿಧಾನಸಭಾ ಚುನಾವಣೆಯಂತೆ ಕರ್ನಾಟಕದಲ್ಲಿ ಭಾರೀ ಮುಖಭಂಗ ಎದುರಾಗೋದು ಗ್ಯಾರಂಟಿ.
ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 17,61,694 ಮತದಾರರಿದ್ದಾರೆ. ಈ ಪೈಕಿ 8,85,200 ಪುರುಷರಿದ್ದರೆ, 8,76,814 ಮಹಿಳಾ ಮತದಾರರಿದ್ದಾರೆ. ಹೆಚ್ಚು ಕಡಿಮೆ ಪುರುಷರಷ್ಟೇ ಮಹಿಳೆಯರು ಈ ಬಾರಿ ಹಕ್ಕು ಚಲಾಯಿಸಲಿದ್ದಾರೆ. ಬಿಜೆಪಿಗೂ ತಿಳಿದಿರುವಂತೆ ಕ್ಷೇತ್ರದ ಬಹುತೇಕ ಮಹಿಳೆಯರು ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು. ಇದರಿಂದ ಮಹಿಳಾ ಮತಗಳು ಬಿಜೆಪಿಯಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚು ಎಂದೇ ವಿಶ್ಲೇಷಿಸಲಾಗುತ್ತಿದೆ.
ಒಂದೆಡೆ ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಮತಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಜೆಪಿ, ಇನ್ನೊಂದೆಡೆ ಕ್ಷೇತ್ರದಲ್ಲಿ ಶೇ. 70ಕ್ಕಿಂತ ಹೆಚ್ಚಿರುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತಗಳು BJP ಅಭ್ಯರ್ಥಿಗೆ ತೀರುಗೇಟು ನೀಡುವ ಆತಂಕವೂ ಎದುರಾಗಿದೆ. ಇನ್ನು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳಾಗಿವೆ. ಈ ಲೆಕ್ಕಾಚಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದರೂ ಅಚ್ಚರಿಯಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಲೋಕಸಭೆ ವ್ಯಾಪ್ತಿಯಲ್ಲಿ ಬರುವ 8ರ ಪೈಕಿ ಅಥಣಿ, ಕಾಗವಾಡ, ಕುಡಚಿ, ಚಿಕ್ಕೋಡಿ, ಯಮಕನಮರಡಿ ಸೇರಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ರಾಯಬಾಗ, ನಿಪ್ಪಾಣಿ ಮತ್ತು ಹುಕ್ಕೇರಿಯಲ್ಲಿ ಮಾತ್ರ ಬಿಜೆಪಿ ಶಾಸಕರನ್ನು ಹೊಂದಿದೆ. ಈ ಕಾರಣದಿಂದ ಕಾಂಗ್ರೆಸ್ ಹೈಕಮಾಂಡ್ ತಮ್ಮ ಪಕ್ಷದ ಶಾಸಕರಿಗೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ಕೊಟ್ಟಿದೆ.
ಕಾಂಗ್ರೆಸ್ ಮೂಲಗಳು ಹೇಳುವ ಪ್ರಕಾರ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರು ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲೇಬೇಕು ಎಂದು ಸಚಿವರು ಮತ್ತು ಶಾಸಕರಿಗೆ ಕಟ್ಟಪ್ಪಣೆ ನೀಡಿದ್ದು, ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗಳಿಗೆ ಸಿಗುವ ಲೀಡ್ ಮೇಲೆಯೇ ಮುಂದಿನ ದಿನಗಳಲ್ಲಿ ಕ್ಷೇತ್ರಗಳ ಅಭಿವೃದ್ಧಿ ನಿಂತಿದೆ. ಸಿಎಂ ಅಥವಾ ಡಿಸಿಎಂ ಭೇಟಿ ಮಾಡಿ ಅಭಿವೃದ್ಧಿ ಕುರಿತು ಚರ್ಚಿಸಲು ಈ ಚುನಾವಣೆಯಲ್ಲಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ನ ಶಕ್ತಿ ಸಾಬೀತುಪಡಿಸುವ ಪಣ ತೊಟ್ಟಿದ್ದಾರೆ. ಆ ಮೂಲಕ ಕಾಂಗ್ರೆಸ್ ಶತಾಯಗತಾಯ ತಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ.
ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ತಂದೆ ಸತೀಶ ಜಾರಕಿಹೊಳಿ ಅವರು ಸದಾ ಜನಸ್ಪಂದನ ಗುಣವುಳ್ಳವರು. ಸರಳ, ಸಜ್ಜನ ವ್ಯಕ್ತಿತ್ವದಿಂದಲೇ ಸರ್ವ ಸಮುದಾಯಗಳನ್ನು ತನ್ನತ್ತ ಸೆಳೆಯಬಲ್ಲ ಸಾಮರ್ಥ್ಯ ಹೊಂದಿರುವುದರಿಂದ ಸಹಜವಾಗಿ ಪ್ರಿಯಂಕಾ ಬಗ್ಗೆ ಮತದಾರರಲ್ಲಿ ಸಕಾರಾತ್ಮಕ ಅಭಿಪ್ರಾಯವಿದೆ. ವಿಧಾನಪರಿಷತ್ ಸದಸ್ಯ, ಶಾಸಕ, ಸಚಿವರಾದರೂ ಸತೀಶ ಸಾರ್ವಜನಿಕರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ.
ಜನರ ಜೊತೆಗೆ ನಡೆದುಕೊಳ್ಳುವ ರೀತಿ, ಯಾರೇ ಭೇಟಿ ಮಾಡಿದರೂ ಸ್ಪಂದಿಸುವ ಗುಣವನ್ನು ಜನರು ಕೊಂಡಾಡುತ್ತಿದ್ದಾರೆ. ಜನಸ್ಪಂದನ ಗುಣದ ಅಭ್ಯರ್ಥಿಯ ಆಯ್ಕೆಗೆ ಹೆಚ್ಚಿನ ಅವಕಾಶ ಇರೋದ್ರಿಂದ ಕಾಂಗ್ರೆಸ್ಗೆ ಚಿಕ್ಕೋಡಿಯಲ್ಲಿ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ನೀವೇನಂತಿರಾ?