ನಂದೀಶ್ ಭದ್ರಾವತಿ, ದಾವಣಗೆರೆ

ಕಾಂಗ್ರೆಸ್ ಬಿ ಫಾರಂ ಕೈಗೆ ಬರೋತನಕ‌ ಯಾರು ಅಭ್ಯರ್ಥಿ ಅಲ್ಲ ಎಂದು ಅಹಿಂದ ನಾಯಕ ವಿನಯ್ ಕುಮಾರ್ ಶಾಮನೂರು ಕುಟುಂಬದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿನ ನಿವಾಸದಲ್ಲಿ ಮಾತನಾಡಿ, ಎರಡು ದಿವಸ ನಾನು ದೆಹಲಿಯಲ್ಲಿ ಬೀಡು ಬಿಟ್ಟಿದೆ. ಮೀಟಿಂಗ್ ಶುರುವಾಗುವ ಅರ್ಧ ಗಂಟೆ ಮುಂಚೆ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಆದರೆ ನಂತರ ಹೆಸರು ಬದಲಾವಣೆ ಆಯ್ತು ಅಂತ ವಿನಯ್ ಆಕ್ರೋಶ ವ್ಯಕ್ತಪಡಿಸಿದರು.‌

ದಾವಣಗೆರೆ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಹೈಕಮಾಂಡ್ ತೀರ್ಮಾನಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ವಿನಯ್, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿಜನಾಭಿಪ್ರಾಯ ಸಂಗ್ರಹಿಸುತ್ತೇನೆ. ಪಕ್ಷೇತರ ನಾಗಿ ಸ್ಪರ್ಧಿಸಲು ಒತ್ತಡ ಬರುತ್ತಿದೆ. ಆದ್ರೆ ನಾನು ಪ್ರಾಕ್ಟಿಕಲ್ ಮನುಷ್ಯ‌. ನೋಡೋಣ..ಏ.12 ರವರೆಗೆ ಟೈಮ್ ಇದೆ. ಬಿ.ಫಾರಂ ಬರೋತನಕ ಯಾರು ಅಭ್ಯರ್ಥಿಯಲ್ಲ ಪ್ರಯತ್ನ ಮಮದುವರಿಸುತ್ತೇನೆ ಎಂದು ವಿನಯ್ ಹೇಳಿದರು.

20 ದಿನಗಳ ಕಾಲ ದಿನಕ್ಕೆ ಕ್ಷೇತ್ರದ 20 ಹಳ್ಳಿಗಳನ್ನು ಸುತ್ತಿ ಜನಾಭಿಪ್ರಾಯ ಸಂಗ್ರಹಿಸಲು  ನಿರ್ಧಾರ ಮಾಡಿದ್ದೇನೆ.‌ಬೆಂಬಲಿಗ ಕಾರ್ಯಕರ್ತರ ಸಭೆಯ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತೇನೆ. ಸಾಮಾನ್ಯ ಜನರಿಂದ ಹಿಡಿದು ಉಪಮುಖ್ಯಮಂತ್ರಿ ಯವರಿಗೆ ನಿನಗೆ ಟಿಕೇಟ್ ಸಿಕ್ಕಿದ್ದರೆ ನೀನು ಗೆದ್ದುಕೊಂಡು ಬರುತ್ತಿದ್ದೆ ಎಂದಿದ್ದರು.‌

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯಕ್ಕೆ‌ ಮನ್ನಣೆ ಇಲ್ಲದಂತಾಗಿದೆ. ಜನಾಭಿಪ್ರಾಯಕ್ಕೆ ಮನ್ನಣೆ ಇಲ್ಲ ಎಲ್ಲಾ ಸರ್ವೇಗಳಲ್ಲು ನನ್ನ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ಜನಸಾಮಾನ್ಯರು ನನಗೆ ವೋಟು ಕೊಡಬೇಕೆಂದು ಕಾಯುತ್ತಿದ್ದಾರೆ. ಪ್ರತಿಕ್ಷೇತ್ರದಲ್ಲಿ 25 ಸಾವಿರ ವೋಟು ತೆಗೆದುಕೊಳ್ಳುವ ಸಾಮಾರ್ಥ್ಯವಿದೆ. ಟಿಕೇಟ್ ಅನೌನ್ಸ್ ರೀತಿ ಸರಿ ಇಲ್ಲ ಎಂದು ವಿನಯ್ ಹೇಳಿದರು. 

ದಾವಣಗೆರೆಯಲ್ಲಿ ಸಾಮಾಜಿಕ ನ್ಯಾಯ ಸತ್ತುಹೋಗಿದೆ

ಅದಕ್ಕೆ ಮರುಜೀವ ಕೊಡಲು ಮುಂದಾಗಿದ್ದೆ. ಜನಸಾಮಾನ್ಯರ ಕನಸನ್ನು ಈಡೇರಿಸಲು ನಾನು ದಾವಣಗೆರೆ ಆಯ್ಕೆ ಮಾಡಿಕೊಂಡೆ.ಕೇವಲ ಅರ್ಧ ಗಂಟೆಯಲ್ಲಿ ದೆಹಲಿಯಲ್ಲಿ ನನ್ನ ಹೆಸರು ಕ್ಯಾನ್ಸಲ್ ಆಯಿತುಮೌಂಟ್ ಎವರೆಸ್ಟ್ ಹತ್ತಿ ಬಾವುಟ ಸಿಗಿಸಬೇಕು ಎನ್ನುವಾಗ ಜಾಡಿಸಿ ಒದ್ದಂಗೆ ಆಗಿದೆ. ನಮ್ಮ ಅಪ್ಪ ಮಿನಿಸ್ಟರ್ ಅಲ್ಲ ನಮ್ನ ತಾತ ರಾಜಕಾರಣಿ ಅಲ್ಲ ಎಂ ಪಿ ಎಂ ಎಲ್ ಎ ಅಲ್ಲ. 

ದಾವಣಗೆರೆ ದಕ್ಷಿಣದಲ್ಲಿ ಮೂವತ್ತು ವರ್ಷಗಳಿಂದ ಟಿಕೇಟ್ ಸಿಕ್ಕಿಲ್ಲ .ಗುಡ್ ಪರಸನ್ ಇನ್ ರಾಂಗ್ ಪಾರ್ಟಿ ಎಂದು ಹೇಳಿದ್ರು ಬಿಜೆಪಿಯಿಂದ ಟಿಕೇಟ್ ಕೇಳಿದ್ದರೆ ಸಿಗ್ತಾ ಇತ್ತು

ಪಕ್ಷೇತರ ವಾಗಿ ನಿಂತರೆ ಗೆಲ್ಲಬೇಕೆಂದ್ರೆ  ಸ್ವಲ್ಪ ಯೋಚನೆ ಮಾಡಬೇಕು. ಪಕ್ಷೇತರವಾಗಿ ನಿಂತು ಬಲಾಢ್ಯ ಪಕ್ಷಗಳ ಎದುರು ಗೆಲ್ಲಬೇಕು. ಇನ್ನೊಬ್ಬರನ್ನು ಸೋಲಿಸಲು ನಾನು ಚುನಾವಣೆಗೆ  ನಿಲ್ಲೊಲ್ಲ. ನಾನು ಗೆಲ್ಲಬೇಕು ಎಂದು ನಿಲ್ಲುವವನು ಸುಮ್ಮನೇ ಇನ್ನೊಬ್ಬರನ್ನು ಸೋಲಿಸಲು ನಿಲ್ಲೋಲ್ಲ. ನನ್ನ ಆತ್ಮಸಾಕ್ಷಿ ಕಾಂಗ್ರೆಸ್ ಸಪೋರ್ಟ್ ಮಾಡಲು ಮುಂದಾಗುತ್ತಿಲ್ಲ ಎಂದು ವಿನಯ್ ಹೇಳಿದರು.‌

ಅಭಿಪ್ರಾಯ ಸಂಗ್ರಹಿಸಲು ಮುಂದಾದ ಟಿಕೇಟ್ ಆಕಾಂಕ್ಷಿ ವಿನಯ್ ಕುಮಾರ್ 

ದಾವಣಗೆರೆಯಲ್ಲಿಕಾಂಗ್ರೆಸ್ ಗೆಲ್ಲಲು ತುಂಬಾ ಅವಕಾಶಗಳಿವೆ ಆದ್ರೆ ನನಗೆ ಟಿಕೇಟ್ ಕೊಟ್ಟಿಲ್ಲ . ಜನಸಾಮನ್ಯರು ನನ್ನ ಜೊತೆ ಇದ್ದಾರೆ ಎಂಬುದು ನನಗೆ ಮನವರಿಕೆಯಾಗಬೇಕಿದೆ.ಜನ ಸಾಮಾನ್ಯರಾದ್ರೆ ರಾಜಕಾರಣಕ್ಕೆ ಬರಬಾರದು ಎಂಬುದು ಸಾಬೀತಾಗಿದೆ.20 ದಿನ ಗಳ ಕಾಲ ನಾನು ಜಿಲ್ಲೆಯಾದ್ಯಂತ ಪ್ರವಾಸ ಮಾಡುತ್ತೇನೆ.ಪ್ರತಿ ಹಳ್ಳಿಯಲ್ಲು ಜನರ ಅಭಿಪ್ರಾಯ ಸಂಗ್ರಹಿಸಿ ನಾನು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ .ನಾನು ನಿಂತರೆ ಗೆಲ್ಲಲೇಬೇಕು ಗೆಲ್ಲದಿದ್ದರೆ ನಮ್ಮನ್ನು ಮೂಲೆಗುಂಪು ಮಾಡುವುದು ಖಚಿತ.ಕ್ಷೇತ್ರದಲ್ಲಿ ಓಡಾಡಿ ನಿರ್ಧಾರ ತೆಗೆದುಕೊಂಡ ಮೇಲೆ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ವಿನಯ್ ಹೇಳಿದರು. ಎಐಸಿಸಿಯಲ್ಲಿ ನನ್ನ ಬಗ್ಗೆ 25 ನಿಮಿಷ ಡಿಸ್ಕಸ್ ಆಗಿದೆ ಸಿದ್ದರಾಮಯ್ಯ ನವರು ನನ್ನ ಪರವಾಗಿ ಹೋರಾಟ ಮಾಡಿದ್ದಾರೆ. ಆದ್ರೆ ಅದು ವರ್ಕೌಟ್ ಆಗಲಿಲ್ಲ ಎಂದು ವಿನಯ್ ಹೇಳಿದರು. 

 

Share.
Leave A Reply

Exit mobile version