
ಮಾಯಕೊಂಡ (ದಾವಣಗೆರೆ)
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಕನ್ನಡ ಹಾಗೂ ತಮಿಳು ನಟಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡು ಮಾತನಾಡಿದ್ದಾರೆ..ಹಾಗಾದ್ರೆ ಅವರು ಏನು ಮಾತನಾಡಿದ್ರು ತಪ್ಪದೇ ನೋಡಿ..
ನಾನು ಎಲ್ಲಿ ಹೋಗಿಲ್ಲ, ನಾನು ದಾವಣಗೆರೆಯಲ್ಲಿಯೇ ಇದ್ದೇನೆ, ಒಂದಿಷ್ಟು ಕಾಲ ಅಮೆರಿಕಾಗೆ ಹೋಗಿದ್ದೇ. ನಾನು ಕಾಂಗ್ರೆಸ್ ಕಾರ್ಯಕರ್ತೆ, ಮಾಯಕೊಂಡದ ಜನರೊಂದಿಗೆ ಇದ್ದೇನೆ. ಈಗಲೂ ಇದ್ದೇನೆ ಎಂದು ಹೇಳಿದರು.
ಮಾಯಕೊಂಡದ ಜನರ ಕಷ್ಟದಲ್ಲಿ ನೀವಿಲ್ಲ ಯಾಕಾಗಿ ಎಂಬ ಪ್ರಶ್ನೆಗೆ ಉತ್ತರಿಸಿದ ಸವಿತಾಬಾಯಿ, ನಾನು ಖಂಡಿತಾ ಮಾಯಕೊಂಡದ ಜನರೊಂದಿಗೆ ಇದ್ದೇನೆ. ನಾನು ಮಾಯಕೊಂಡದ ಮನೆ ಮಗಳು. ಸೋತರೂ ನಾ ಅವರೊಂದಿಗೆ ಇದ್ದೇನೆ ಎಂದರು…


ಹಾಲಿ ಶಾಸಕರು ಕೆಲಸ ಮಾಡುತ್ತಿಲ್ಲ ಎಂಬ ಆರೋಪಕ್ಜೆ ಉತ್ತರಿಸಿದ ಸವಿತಾಬಾಯಿ, ಇಲ್ಲ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡುತ್ತಾರೆ ಎಂದು ಹಾರೈಕೆ ಉತ್ತರ ನೀಡಿದರು.
ಈ ಹಿಂದೆ ಈಗಿನ ಹಾಲಿನ ಶಾಸಕರ ವಿರುದ್ದ ನೀವು ಎಫ್ ಐ ಆರ್ ಹಾಕಿದ್ದೀರಿ, ಏನಾದ್ರೂ ರಾಜಕೀಯವಾಗಿ ಒಪ್ಪಂದ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸವಿತಾಬಾಯಿ, ಯಾವ ಒಪ್ಪಂದ ನಡೆದಿಲ್ಲ, ಕಾನೂನಾತ್ಮಕ ಹೋರಾಟ ನಡೆಯುತ್ತಿದೆ. ಕಾನೂನಿನ ಮೇಲೆ ನಂಬಿಕೆ ಇದೆ ಎಂದರು.
ಈಗಾಗಲೇ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಿಂತಿದ್ದೀರಿ? ಮುಂದೆ ಕ್ಷೇತ್ರ ಪುನರ್ ವಿಂಗಡನೆಯಾದರೆ ಯಾವ ಕ್ಷೇತ್ರ ನಿಮ್ಮ ಆಯ್ಕೆ ಎಂದಿದ್ದಕ್ಜೆ ಉತ್ತರಿಸಿದ ಸವಿತಾಬಾಯಿ ಸದ್ಯ ಮಾಯಕೊಂಡವೇ ನನ್ನ ಕ್ಷೇತ್ರ, ನಾನು ಮಾಯಕೊಂಡದ ಮನೆ ಮಗಳು. ಮುಂದೆ ನೋಡೋಣ ಎಂದು ವಿವರಿಸಿದರು.
ಈ ಹಿಂದೆ ಚಲನಚಿತ್ರ ನಟಿಯಾಗಿದ್ದೀರಿ, ಮತ್ತೆ ಚಿತ್ರ ರಂಗದಲ್ಲಿ ಮುಂದುವರಿಯುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸವಿತಾಬಾಯಿ, ನಾನು ಈಗಾಗಲೇ ಚಿತ್ರ ರಂಗ ಬಿಟ್ಟಿದ್ದೇನೆ. ರಾಜಕೀಯವಾಗಿ ಬೆಳೆಯಬೇಕೆಂದಿದ್ದೇನೆ ಅದರ ಕಡೆ ಹೆಚ್ಚು ಒತ್ತು ನೀಡುತ್ತೇನೆ ಎಂದರು. ಒಟ್ಟಾರೆ ಸವಿತಾಬಾಯಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು