


*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫*
*💫,ದ್ವಾದಶ ರಾಶಿಗಳನಿತ್ಯ ಭವಿಷ್ಯ#ತಾರೀಕು#05/04/2025 ಶನಿವಾರ,💫*
*01,🪐ಮೇಷರಾಶಿ🪐*
📖,ಮಾನಸಿಕ ಕಸಿವಿಸಿ ಇದ್ದರೂ ಅದೇ ನಿಮ್ಮ ಬೆಂಗಾವಲಿಗೆ ಬರುವುದು. ಒಂದು ನಿರ್ದಿಷ್ಟ ಕಾರ್ಯವನ್ನು ಮಾಡಲು ಹವಣಿಸುತ್ತಿದ್ದ ನಿಮಗೆ ಭಗವಂತನೇ ಅದನ್ನು ಒಳ್ಳೆಯ ಉದ್ದೇಶಕ್ಕಾಗಿ ತಪ್ಪಿಸುವನು. ಇದರಿಂದ ಮುಂದೆ ಒಳಿತಾಗುವುದು, ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಧೈರ್ಯದಿಂದ ನಿರ್ಣಯ ತೆಗೆದುಕೊಂಡ ವಿಚಾರಗಳು ನಿಮಗೆ ಗೌರವ ಮತ್ತು ಕೀರ್ತಿಯನ್ನು ತಂದು ಕೊಡುವುದು,
*⚜️, ಮಾತೆ ದುರ್ಗೆಯನ್ನು ಪ್ರಾರ್ಥಿಸಿ,⚜️*
*02,🪐ವೃಷಭರಾಶಿ🪐*
📖,ಮನುಷ್ಯ ಮನುಷ್ಯನ ಸಂಬಂಧದ ನೆಲೆಯನ್ನು ನೀವು ಅರಿಯುವಿರಿ. ನೀವು ನಿಮ್ಮದೆ ಆದ ತರ್ಕ ಕುತರ್ಕಗಳಿಂದ ಬಾಹ್ಯಜಗತ್ತಿನಜನರಸಂಪರ್ಕವನ್ನು ಕಳೆದುಕೊಳ್ಳುವಿರಿ. ಮನುಷ್ಯ ಸಂಘಜೀವಿ ಎಲ್ಲರ ಸಹಕಾರವು ಮುಖ್ಯ ಎಂದು ತಿಳಿಯಿರಿ. ನೂತನ ಮಿತ್ರರು ಸೇರ್ಪಡೆ ಮಾಡಿಕೊಳ್ಳಿ. ಅವರೊಂದಿಗಿನಮಾತುಕತೆಯು. ಹೊಸ ಉದ್ಯಮಕ್ಕೆ ನಾಂದಿ ಹಾಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಕಿರಿಕಿರಿಸಂಭವ ಇದೆ,
*⚜️,ಶಿವನ ಮಂತ್ರವನ್ನು ಪಠಿಸಿ,⚜️*
*03,🪐ಮಿಥುನ ರಾಶಿ🪐*
📖,ದುಡ್ಡೇ ದೊಡ್ಡಪ್ಪ ವಿದ್ಯೆ ಅವರಪ್ಪ. ಹಾಗಾಗಿ ನೀವು ಜಾಣ್ಮೆಯಿಂದ ಕೆಲಸ ನಿರ್ವಹಿಸುವ ಮುಂಚೆ ಮುಂಗಡ ಹಣವನ್ನು ಪಡೆದೆ ಆರಂಭಿಸಿ. ಇದರಿಂದ ನಿಮಗೂ ನೆಮ್ಮದಿ ಉಂಟಾಗುವುದು. ಮಾನಸಿಕ ಭಯ ನೀಮ್ಮ ದೈರ್ಯಗೆಡಿಸಬಹುದು. ಸಕಾರಾತ್ಮಕ ಚಿಂತನೆ ಮತ್ತು ಮುಂದಿನ ಉಜ್ವಲವಾದ ಭವಿಷ್ಯದ ಬಗ್ಗೆ ಚಿಂತಿಸಿ ಮುನ್ನಡೆಯಿರಿ,
*⚜️,ಶ್ರೀ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ,⚜️*
*04,🪐ಕಟಕ ರಾಶಿ🪐*
📖,ಮನಸ್ಸಿನ ಹೊಯ್ದಾಟ ಇದ್ದರೂಸಂಕಲ್ಪಿತಕಾರ್ಯಸಿದ್ಧಿಗೆ, ಅವಕಾಶಕೂಡಿಬರುವುದು. ಆರೋಗ್ಯದಮೇಲೆಗಮನವಿರಲಿ.ಇಂದಿನ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುವವು. ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ ಒಳ್ಳೆಯ ದಿನ. ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು,
*⚜️, ನಿಮ್ಮ ಕುಲ ಗುರುಗಳ ಮಾರ್ಗ ದರ್ಶನ ಪಡೆಯಿರಿ,⚜️*
*05,🪐ಸಿಂಹ ರಾಶಿ🪐*
📖,ಎಲ್ಲಾ ಸಕಲ ಸಂಪತ್ತು ಇದ್ದರೂಅದನ್ನುಅನುಭವಿಸಲು, ಆಗುತ್ತಿಲ್ಲ ಎಲ್ಲವೂ ಎದುರಿಗೆ ಇದ್ದರೂ ಅದು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ನಿತ್ಯ ಜೀವನಕ್ಕೆ ಉಪಯೋಗಕ್ಕೆ ಬರುತ್ತಿಲ್ಲ. ಕುಲದೇವರನ್ನು ಆರಾಧನೆ ಮಾಡಿ. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ. ನಿಮ್ಮ ಕೆಲಸದ ಮೇಲೆ ಗಮನ ಹರಿಸಿದಲ್ಲಿ ಯಶಸ್ಸು ಮತ್ತು ಮನ್ನಣೆ ನಿಮ್ಮದಾಗುತ್ತದೆ,
*⚜️,ಸಾಯಿ ದೇವನ ದರ್ಶನ ಮಾಡಿ,⚜️*
*06,🪐ಕನ್ಯಾ ರಾಶಿ🪐*
📖,ನಿಮ್ಮನ್ನುನೀವುವಿಮರ್ಶಿಸುವ ಸಕಾಲ ಇದು. ನೀವು ಸಾಗಿ ಬಂದ ದಾರಿಯನ್ನು ಮತ್ತೊಮ್ಮೆ ಸಿಂಹಾವಲೋಕನ ಮಾಡಿಕೊಳ್ಳಿ. ಇದು ನಿಮ್ಮ ಮುಂದಿನಬಾಳಿನಮಾರ್ಗ
ಸೂಚಿ ಆಗುವುದು. ನಿಮ್ಮ ಶಕ್ತಿಯಸೂಕ್ತನಿರ್ವಹಣೆಯಿಂದ ಕಾರ್ಯದಲ್ಲಿ ಜಯ ಹೊಂದಬೇಕು. ಮಾನಸಿಕ ಶಾಂತಿಗಾಗಿ ಕೆಲವು ದಾನ ಧರ್ಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ,
*⚜️,ತಂದೆತಾಯಿಯರ ಆಶೀರ್ವಾದ ಪಡೆಯಿರಿ,⚜️*
*07,🪐ತುಲಾ ರಾಶಿ🪐*
📖,ನಿಮ್ಮ ಬಗೆಗಿನ ಕೆಲವು ವಿಚಾರಗಳನ್ನು ತಿಳಿದು ನಿಮ್ಮ ಪ್ರಗತಿಯನ್ನು ಚಿವುಟಿ ಹಾಕುವ ಪ್ರಯತ್ನಗಳನ್ನು ಕೆಲವರು ಮಾಡುತ್ತಿರುವರು. ಇಂತಹ ಜನರಿಂದ ಆದಷ್ಟು ದೂರ ಉಳಿಯುವುದು ಒಳ್ಳೆಯದು. ಇಂದು ನಿಮಗೆ ದೊರಕುವ ಹೊಸಹೂಡಿಕೆಯಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು,
*⚜️,ಹನುಮಾನ್ ಚಾಲೀಸ್ ಪಠಣ ಮಾಡಿ,⚜️*
*08,🪐ವೃಶ್ಚಿಕ ರಾಶಿ🪐*
📖,ಏಕಾಏಕಿ ದೊಡ್ಡ ದೊಡ್ಡ ಯೋಜನೆಗಳನ್ನು ಬೆನ್ನು ಹತ್ತದಿರಿ. ಅಟ್ಟವನ್ನು ಏರದವರು ಬೆಟ್ಟವನ್ನು ಏರಬಹುದೇ? ಹಾಗಾಗಿ ತಾಳ್ಮೆಯಿಂದ ನಿಮ್ಮ ಮುಂದೆ ಇರುವ ಸರಳ ಕೆಲಸಗಳನ್ನು ಮನಸ್ಸುಕೊಟ್ಟು ಮಾಡಿ ಮತ್ತು ಆತ್ಮವಿಶ್ವಾಸ ಗಳಿಸಿಕೊಳ್ಳಿ. ಮಿತಿಯಿಲ್ಲದ ಸೃಜನಶೀಲತೆ ಮತ್ತು ಉತ್ಸಾಹ ನಿಮ್ಮನ್ನು ಮತ್ತೊಂದು ಅನುಕೂಲಕರ ದಿನಕ್ಕೆ ಕೊಂಡೊಯ್ಯುತ್ತದೆ,*⚜️,ಶ್ರೀಆಂಜನೇಯಸ್ವಾಮಿಗೆ ವೀಳ್ಯದೆಲೆ ನೀಡಿ,⚜️*
*09,🪐ಧನಸ್ಸು ರಾಶಿ🪐*
📖,ನಿಮ್ಮಿಂದಲೇ ಸಮಗ್ರ ವಿಷಯವನ್ನು ತಿಳಿದುಕೊಂಡು ಅದಕ್ಕೆ ಬಣ್ಣ ಹಚ್ಚಿ ನಿಮ್ಮ ವಿರುದ್ಧ ಪಿತೂರಿ ನಡೆಸುವ ಜನರಿದ್ದಾರೆ. ಹಾಗಾಗಿ ಅಂತಹ ವ್ಯಕ್ತಿಗಳಿಂದ ದೂರ ಇರುವುದು ಒಳ್ಳೆಯದು.ನಿಮ್ಮಬಾಸ್
ಇಂದು ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು. ಇಂದು ಜನರು ಹೊಗಳಿಕೆಗಳನ್ನು ನೀಡುತ್ತಾರೆ.ದೂರಪ್ರಯಾಣದಿಂದತೊಂದರೆಯುಂಟಾಗು
ವುದು,
*⚜️,ಮನೆ ದೇವರನ್ನು ಮನದಲ್ಲಿ ನೆನೆಯಿರಿ,⚜️*
*10,🪐ಮಕರ ರಾಶಿ🪐*
📖,ನಿಮ್ಮಅನೇಕವಿಚಾರಗಳನ್ನು. ಸುಮ್ಮನೆ ಯಾರ ಜತೆಗೂ ಹಂಚಿಕೊಳ್ಳದಿರಿ. ಹೊರಳು ದಾರಿಯಲ್ಲಿರುವ ನಿಮ್ಮ ದಾರಿ ತಪ್ಪಿಸಲು ಹಲವರುಕಾದಿದ್ದಾರೆ. ಆದರೆ ಸತ್ಯನಿಷ್ಠೆಗೆಯಾವಾಗಲು ಜಯ. ಹಾಗಾಗಿನೀವುಗೆಲುವಿನ ನಗು ಬೀರುವಿರಿ. ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ,*⚜️,ಶ್ರೀಗುರುರಾಘವೇಂದ್ರರ ಸ್ಮರಣೆ ಮಾಡಿ,⚜️*
*11,🪐ಕುಂಭ ರಾಶಿ🪐*
📖,ನೀವು ಶಾಂತವಾಗಿದ್ದರೂ ನಿಮ್ಮನ್ನು ಅಶಾಂತ ರೂಪಕ್ಕೆ ತಳ್ಳುವವರನ್ನುನೀವುಎದುರಿಸಬೇಕಾಗುತ್ತದೆ.ಗೆಲ್ಲುವುದು
ನಿಮಗೆ ಸಾಧ್ಯವಾದರೂ ನಿಮ್ಮ ಚೈತನ್ಯವನ್ನು ಕಲಕುವ ವಿಚಾರ ಹೆಚ್ಚಾಗವು ಸಾಧ್ಯತೆ ಇದೆ. ಬಯಸಿದಕಾರ್ಯವುಈಡೇರಲು, ಅಧಿಕ ಶ್ರಮ ಪಡುತ್ತಿದ್ದೀರಿ. ಆದರೆ ಯಶಸ್ಸು ಮರೀಚಿಕೆ ಆಗುತ್ತಿದೆ. ಸಹೋದರರ ಸಂಗಡ ಹೊಂದಿಕೊಂಡು ಹೋಗುವುದು ಅನಿವಾರ್ಯವಾಗುವುದು,*⚜️,ಶನಿದೇವರದೇವಸ್ಥಾನಕ್ಕೆ ಭೇಟಿ ನೀಡಿ,⚜️*
*12,🪐ಮೀನ ರಾಶಿ🪐*
📖,ಕಾಡಿನಸಿಂಹಕ್ಕೆಹಸಿವಿದ್ದರೂ, ಅದುಹುಲ್ಲುತಿನ್ನುವುದಿಲ್ಲ. ಅಂತೆಯೇಕೆಲವೊಮ್ಮೆನಿಮ್ಮಿಂದ ತಪ್ಪಾದರೂ ನೀವು ಕ್ಷಮೆಯಾಚಿಸುವುದಿಲ್ಲ. ಇದರಿಂದಾಗಿ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವರು, ನಡೆನುಡಿಯಲ್ಲಿಸೌಮ್ಯತೆಇರಲಿಹಣದ ಪರಿಸ್ಥಿತಿ ಈ ದಿನ ಸುಧಾರಿಸುತ್ತದೆ.ವಿಳಂಬಿತ
ಪಾವತಿಗಳನ್ನು{ಸಾಲವನ್ನು} ತಪ್ಪದೆ ಈ ದಿನ ಪಾವತಿ ಮಾಡುವುದು ಒಳಿತು,
*⚜️ಶ್ರೀ ಮಹಾಲಕ್ಷ್ಮಿಯನ್ನು ದೇವಿಯನ್ನು ಪ್ರಾರ್ಥನೆ ಮಾಡಿ⚜️*
🚩