ದಾವಣಗೆರೆ : ಕೆಲ ದಿನಗಳ ಹಿಂದೆ ಸಚಿವ ಶಿವರಾಜ್ ತಂಗಡಿಗೆ ಮೋದಿ ಮೋದಿ ಎಂದು ಹೋಗುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದ್ದು, ಈ ಮಾತು ಖಂಡನೀಯ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಕ್ಕಾಗಿ ದುಡಿಯುವ ನಮ್ಮ ಪ್ರಧಾನ ಮಂತ್ರಿಗೆ ನಮ್ಮ ಯುವಕರು ಮೋದಿ ಮೋದಿ ಎಂದು ಕೂಗುತ್ತಾರೆ ಅದರಲ್ಲಿ ತಪ್ಪೇನಿದೆ. ಆದರೆ ದಾವಣಗೆರೆಯ ಜಿಲ್ಲೆಯ ಕಾಂಗ್ರೆಸ್ ನಾಯಕರು ತಮಗೆ ಜನ್ಮ ಕೊಟ್ಟ ತಂದೆಯ ಬಿಟ್ಟು ಹಣಕ್ಕೆ ಅಧಿಕಾರಕ್ಕೆ ಇನ್ನೊಬ್ಬರಿಗೆ ಅಪ್ಪಾಜಿ ಎನ್ನುವ ನಿಮಗೆ ಎಲ್ಲಿಗೆ ಹೊಡೆಯಬೇಕು ಎಂದು ಪ್ರಶ್ನಿಸಿದ್ದಾರೆ
ಪ್ರಧಾನಿ ಮೋದಿ ಕುಟುಂಬವನ್ನು ತ್ಯಜಿಸಿ ಸಮಾಜಕ್ಕೋಸ್ಕರ,ದೇಶಕ್ಕಾಗಿ ತಮ್ಮನ್ನ ತಾವು ಸಮರ್ಪಿಸಿಕೊಂಡವರು. ಎಲ್ಲವನ್ನು ಬಿಟ್ಟು ದೇಶಕ್ಕೋಸ್ಕರ ದುಡಿಯುತ್ತಿರುವವರು ಅಂತ ಮಹಾನ್ ನಾಯಕನ ಹೆಸರನ್ನ ಕೂಗುವುದಕ್ಕೆ ನಮ್ಮ ಯುವಕರಿಗೆ ಯಾವುದೇ ಅಂಜಿಕೆಯು ಇಲ್ಲ ಅಪಮಾನವು ಇಲ್ಲ ನಮ್ಮ ಯುವಕರಿಗೆ ಹೆಮ್ಮೆ ಇದೆ.
ಆದರೆ ನಮ್ಮ ದಾವಣಗೆರೆಯ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದ್ದರಿಂದ ನಾನು ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಒಂದು ಪ್ರಶ್ನೆ ಕೇಳಲು ಬಯಸಿದ್ದು, ದಾವಣಗೆರೆಯ ಜಿಲ್ಲೆಯ ಕಾಂಗ್ರೆಸ್ ನಾಯಕರು ತಮಗೆ ಜನ್ಮ ಕೊಟ್ಟ ತಂದೆಯ ಬಿಟ್ಟು ಹಣಕ್ಕೆ ಅಧಿಕಾರಕ್ಕೆ ಇನ್ನೊಬ್ಬರಿಗೆ ಅಪ್ಪಾಜಿ ಎನ್ನುವ ನಿಮಗೆ ಎಲ್ಲಿಗೆ ಹೊಡೆಯಬೇಕು ಎಂದು ಪ್ರಕಟಣೆ ಮೂಲಕ ಪ್ರಶ್ನಿಸಿದ್ದಾರೆ.