ಬೆಂಗಳೂರು : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ.. ಬೆಂಗಳೂರಿನ ಹೃದಯ ಭಾಗ.. ವಿಧಾನಸೌಧ ಕೂಡ ಇದೇ ಕ್ಷೇತ್ರದಲ್ಲಿ ಬರೋದು. ಹೀಗಾಗಿ ಈ ಕ್ಷೇತ್ರವನ್ನ ಕೈ ವಶ ಮಾಡಿಕೊಳ್ಳಲೇಬೇಕು ಅಂತೇಳಿ ಸಿಎಂ ಸಿದ್ರಾಮಯ್ಯ ಕೂಡ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಹಾಗಾದ್ರೆ ಈ ಕ್ಷೇತ್ರ ವೈಶಿಷ್ಟ್ಯತೆ ಏನು.? ಅಲ್ಪಸಂಖ್ಯಾತರೇ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸೋ ಈ ಕ್ಷೇತ್ರ ಅದ್ಯಾಕೆ ಕಳೆದ 15 ವರ್ಷಗಳಿಂದ ಬಿಜೆಪಿ ಕೈ ಸೇರ್ತು ಗೊತ್ತಾ…?

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ.. ಇದು ಒಂದು ಥರ ಮಿನಿ ಇಂಡ್ಯಾ ಇದ್ದಂತೆ. ಯಾಕಂದ್ರೆ ಈ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ. ಇಲ್ಲಿ ಐದೂವರೆ ಲಕ್ಷ ತಮಿಳು ಭಾಷಿಕರ ವೋಟ್​​ಗಳಿದ್ರೆ, ನಾಲ್ಕೂವರೆ ಲಕ್ಷ ಮುಸ್ಲಿಂ ಜನಾಂಗದ ಮತಗಳಿವೆ. ಅದೇ ರೀತಿ 2 ಲಕ್ಷ ಕ್ರಿಶ್ಚಿಯನ್ ಸಮುದಾಯದ ಮತಗಳಿವೆ. ಇನ್ನ ಗಮನಾರ್ಹ ಸಂಖ್ಯೆಯಲ್ಲಿ ಮಾರ್ವಾಡಿಗಳು ಮತ್ತು ಗುಜರಾತಿಗಳೂ ಇದ್ದಾರೆ. ಹೀಗೆ ವಿಶಿಷ್ಠ ಕ್ಷೇತ್ರವಾಗಿರೋ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪದೇ ಪದೇ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಆಯ್ಕೆಯಾಗುತ್ತಿರೋದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.

ನಿಮಗೆ ಗೊತ್ತಿರ್ಲಿ, 2009ಕ್ಕೂ ಮೊದಲು ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರವಷ್ಟೇ ಇತ್ತು. 2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ನಂತರ 2009ರಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಆ ಬಳಿಕ ನಡೆದ ಮೂರು ಚುನಾವಣೆಗಳಲ್ಲೂ ಪಿಸಿ ಮೋಹನ್‌ ಗೆಲುವು ಸಾಧಿಸಿದ್ದು, ಬಿಜೆಪಿಯ ಭದ್ರಕೋಟೆಯಂತಿದೆ. 2009ರಲ್ಲಿ ಎಚ್‌.ಟಿ.ಸಾಂಗ್ಲಿಯಾನ ಅವರು ಕಾಂಗ್ರೆಸ್​ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

2014 ಹಾಗೂ 2019ರಲ್ಲಿ ಕಾಂಗ್ರೆಸ್‌ನಿಂದ ರಿಜ್ವಾನ್‌ ಅರ್ಷದ್‌ ಸ್ಪರ್ಧಿಸಿದ್ದರು. ಆದರೆ 2014ರ ಚುನಾವಣೆಗೆ ಹೋಲಿಸಿದರೆ 2019ರ ಚುನಾವಣೆಯಲ್ಲಿ ಸೋಲಿನ ಅಂತರ ತಗ್ಗಿರುವುದು ಗಮನಾರ್ಹ. ಇನ್ನ ಈ ಸಲ ಕೇಂದ್ರ ಮಾಜಿ ಸಚಿವ ಕೆ. ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್ ಅವರಿಗೆ ಟಿಕೆಟ್ ಸಿಕ್ಕಿದ್ದೇ ಒಂದು ವಿಶಿಷ್ಠ ಬೆಳವಣಿಗೆಯಲ್ಲಿ. ಹೌದು ಓದುಗರೇ ಆರಂಭದಲ್ಲಿ ಶಾಸಕ ಎನ್‌.ಎ.ಹ್ಯಾರಿಸ್‌ ಹೆಸರು ಕೇಳಿಬಂದರೂ, ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್‌ ಖಾನ್‌ ಅವರ ಪುತ್ರ ಮನ್ಸೂರ್‌ ಅಲಿ ಖಾನ್‌ ಅವರಿಗೆ ಟಿಕೆಟ್‌ ಸಿಕ್ಕಿದೆ. ಮನ್ಸೂರ್‌ ಅಲಿ ಖಾನ್‌ ಬೆಂಗಳೂರಿನವರಾದರೂ ಚುನಾವಣಾ ರಾಜಕೀಯ ರಂಗ ಪ್ರವೇಶಿಸಿದ್ದು ಇದೇ ಮೊದ್ಲು. ಆದ್ರೂ ಈ ಸಲ ಕರ್ನಾಟಕದಲ್ಲಿ ಕಾಂಗ್ರೆಸ್​​ ಹೆಚ್ಚು ಎಂಪಿ ಸೀಟುಗಳನ್ನ ಗೆಲ್ಲಿಸಿಕೊಡ್ಲೇಬೇಕಾಗಿರೋದ್ರಿಂದ ಸಿಎಂ ಸಿದ್ರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಹಠಕ್ಕೆ ಬಿದ್ದಿದ್ದಾರೆ..

ಡಿಕೆಶಿ ಅಂತೂ ಬೆಂಗಳೂರಿನ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯತಂತ್ರ ಹೆಣೆದಿದ್ದಾರೆ. ಬ್ರಾಂಡ್ ಬೆಂಗಳೂರು ಕನಸು ಕಟ್ಟಿರೋ ಡಿಕೆಶಿ ಬೆಂಗಳೂರಲ್ಲಿ ಹೆಚ್ಚು ಎಂಪಿ ಸೀಟುಗಳನ್ನ ಗೆದ್ರೆ ಕನಕಪುರದಿಂದ ಬೆಂಗಳೂರಿಗೂ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳಬಹುದು. ಅದೇ ರೀತಿ ರಾಮನಗರ, ಮಂಡ್ಯ, ಹಾಸನ, ಮೈಸೂರಿನ ಕಡೆಗೂ ಮುನ್ನುಗ್ಗಿ ಹೋಗುತ್ತಿರೋ ಡಿಕೆಶಿ ಒಕ್ಕಲಿಗ ಬ್ರಹ್ಮಾಸ್ತ್ರವನ್ನಿಟ್ಕೊಂಡು ಕಮಲ ದಳ ಪಕ್ಷಗಳನ್ನ ಕುಟ್ಟಿ ಕೆಡವುತ್ತಿದ್ದಾರೆ. ಆದ್ರೆ ಹಳೆ ಮೈಸೂರಿಗಿಂತ ಡಿಕೆಶಿ ಹೆಚ್ಚು ಫೋಕಸ್ ಮಾಡಿರೋದು ಬೆಂಗಳೂರಿನ 4 ಲೋಕಸಭಾ ಕ್ಷೇತ್ರಗಳ ಮೇಲೆ.. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಪಿಸಿ ಮೋಹನ್ ಗೆಲ್ತಾ ಬಂದಿದ್ರೂ,

ಗೆದ್ದನಂತರ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸ್ತಿಲ್ಲ ಅನ್ನೋ ಆರೋಪ ಇದೆ.. ಅಷ್ಟೇ ಅಲ್ಲ, ಪಿಸಿ ಮೋಹನ್ ಅವರನ್ನ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ಸಿಕ್ಕಾಪಟ್ಟೆ ತರಾಟೆಗೆ ತಗೊಂಡಿದ್ದಾರೆ. “ಮೂರು ಬಾರಿ ಸಂಸದರಾಗಿ ಲೋಕಸಭೆಗೆ ಕಳುಹಿಸಿದ್ದೇವೆ. ನಮ್ಮ ಕ್ಷೇತ್ರದ ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ಏನು ಮಾಡಿದ್ದೀರಿ? ನಿಮ್ಮ ಸಾಧನೆ ಏನು? ನಾವು ಮೋದಿಯವರನ್ನು ನೋಡಿ ನಿಮಗೆ ಮತ ಹಾಕಿದ್ದೇವೆ. ನೀವು ಈ ಪ್ರದೇಶಕ್ಕೆ ಎಷ್ಟು ಬಾರಿ ಬಂದಿದ್ದೀರಿ? ಬಡವರಿಗೆ ಏನು ಮಾಡಿದ್ದೀರಾ?” ಅಂತೇಳಿ ಬಿಜೆಪಿ ಕಾರ್ಯಕರ್ತರೇ ಸಂಸದ ಪಿಸಿ ಮೋಹನ್​ಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಕೇಳಿ ತರಾಟೆಗೆ ತಗೊಂಡಿದ್ದಾರೆ. ಆ ಕುರಿತ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಸಂಸದ ಪಿಸಿ ಮೋಹನ್​​ಗೆ ಆಡಳಿತ ವಿರೋಧಿ ಅಲೆ ಸೃಷ್ಟಿ ಭೀತಿ ಎದುರಾಗಿದೆ.

ಮನ್ಸೂರ್ ಅಲಿ ಖಾನ್ ಸ್ಟ್ರೆಂಥ್ ಏನು?

ಇನ್ನ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರು ರಾಜಕೀಯಕ್ಕೆ ಹೊಸಬರಾದ್ರೂ ಯುವ ಮುಖಂಡ ಮತ್ತು ಉತ್ಸಾಹಿಯಂತೆ ಮತದಾರರ ಕಣ್ಣು ಕುಕ್ಕುತ್ತಿದ್ದಾರೆ. ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಸಂಘಟನಾ ಚತುರತೆಯನ್ನ ಮೈಗೂಡಿಸಿಕೊಂಡಿದ್ದಾರೆ. ಇತ್ತ ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳ ಫಲಾನುಭವಿಗಳ ಬೆಂಬಲ ಮನ್ಸೂರ್ ಅಲಿ ಖಾನ್​​ಗೆ ಸಿಗೋ ನಿರೀಕ್ಷೆ ಇದೆ. ಅದೇ ರೀತಿ ಈ ಕ್ಷೇತ್ರದ ಮೂವರು ಸಚಿವರು ಸೇರಿ ಐವರು ಶಾಸಕರ ಬಲ ಮನ್ಸೂರ್ ಅಲಿ ಖಾನ್​ಗಿದೆ.

ಕಾಂಗ್ರೆಸ್ ಪರ ರಾಜಕೀಯ ವಿಶ್ಲೇಷಣೆಗಳು!

ಇನ್ನ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕುರಿತು ಖ್ಯಾತ ರಾಜಕೀಯ ವಿಶ್ಲೇಷಕ ಪಾರ್ಥ ದಾಸ್ ಟ್ವೀಟ್ ಮಾಡಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ರೂ, ಈ ಸಲ ಈ ಕ್ಷೇತ್ರ ಕಾಂಗ್ರೆಸ್ ಕೈವಶವಾಗೋದು ಪಕ್ಕಾ ಅಂತೇಳಿದ್ದಾರೆ. ಇಲ್ಲಿ ಮಧ್ಯಮ ವರ್ಗದ ಜನ ಬಿಜೆಪಿ ಮತ್ತು ಕಾಂಗ್ರೆಸ್​​​ಗೆ ಸಮನಾಗಿ ಮತ ಚಲಾಯಿಸಿದ್ರೆ, ಕೊಳಗೇರಿ ನಿವಾಸಿಗಳಲ್ಲಿ ಶೇಕಡ 60 ಪರ್ಸೆಂಟ್ ಜನ ಕಾಂಗ್ರೆಸ್​​ಗೆ ಮತ್ತು ಬಿಜೆಪಿಗೆ 40 ಪರ್ಸೆಂಟ್ ಜನ ವೋಟ್ ಹಾಕಬಹುದು ಎಂದಿದ್ದಾರೆ. ಇನ್ನ ಈ ಕ್ಷೇತ್ರದಲ್ಲಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರೇ ಹೆಚ್ಚಾಗಿದ್ದು, ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿಯೋ ಸಾಧ್ಯತೆ ಇದೆ ಅಂತೇಳಿ ವಿಶ್ಲೇಷಿಸಿದ್ದಾರೆ.

ಹಾಗಾದ್ರೆ ಸಿದ್ದು ಮತ್ತು ಡಿಕೆಶಿ ಪರಿಶ್ರಮ, ಮೂವರು ಸಚಿವರು ಸೇರಿ ಐವರು ಕಾಂಗ್ರೆಸ್​​ ಶಾಸಕರನ್ನ ಹೊಂದಿರೋ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಕೈ ವಶವಾಗುತ್ತಾ.? ರಾಜಕೀಯ ವಿಶ್ಲೇಷಣೆಗಳು ನಿಜವಾಗ್ತಾವಾ?

Share.
Leave A Reply

Exit mobile version