ದಾವಣಗೆರೆ : ಬಿಜೆಪಿಯಿಂದ ಇನ್ನೂ ಹಲವು ನಾಯಕರು ಬಿಜೆಪಿಗೆ ಸೇರ್ತಾರೆ ಅಂತ ಸಚಿವ ಎಸ್.ಎಸ್.ಮಲ್ಲಿ ಕಾರ್ಜುನ್ ಹೇಳಿದರು.
ನಗರದ ದಾವಣಗೆರೆ ನಿವಾಸದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಹಲವು ನಾಯಕರಿಗೆ ಕಾಂಗ್ರೆಸ್ ಶಾಲು ಹೊದಿಸಿ ಮಾತನಾಡಿದರು.
ಈಗ ಒಬ್ಬರನ್ನು ಕರೆ ತಂದಿದ್ದೇವೆ. ಇನ್ನಷ್ಟುನಾಯಕರು, ಕಾರ್ಯಕರ್ತರು ಬಿಜೆಪಿಯಿಂದ ಬೇಸತ್ತು ಕಾಂಗ್ರೆಸ್ ಸೇರಲಿದ್ದಾರೆ.ಈಗಾಗಲೇ ಬಿಜೆಪಿ ಪಕ್ಷದ ವಿರುದ್ಧ ಹಲವರು ಮುನಿಸಿಕೊಂಡಿದ್ದಾರೆ. ಯಾರ್ಯಾರು ಬರುತ್ತಾರೆ ಎಂಬುದನ್ನು ಕಾದು ನೋಡಿ ಎಂದು ಹೇಳಿದರು. ಇದಾದ ಬಳಿಕ ಬಿಜೆಪಿಯಲ್ಲಿ ರೆಬೆಲ್ ಆಗಿದ್ದ ಮಾಜಿ ಶಾಸಕ ಗುರುಸಿದ್ದನಗೌಡ ಕಾಂಗ್ರೆಸ್ ಗೆ ಸೇರುತ್ತಾರ ಎಂಬ ಪ್ರಶ್ನೆಗೆ ಹಂಗೇನಿಲ್ಲ ಅಂದ್ರು. ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದಿದೆ ಎಂದಿದ್ದಕ್ಕೆ ಅದೇನೂ ಗೊತ್ತಿಲ್ಲ ಅಂದ್ರು.
ಬಿಜೆಪಿ ದುರಾಡಳಿತ, ಮಾನವೀಯತೆ ಇಲ್ಲದ ಕಾರಣ ವಾಗೀಶ್ ಸ್ವಾಮಿ ಮತ್ತವರ ಸ್ನೇಹಿತರು, ಜೊತೆಗಾರರು, ಬೆಂಬಲ ನೀಡಿದಂಥ ನಾಯಕರ ಜೊತೆ ಕಾಂಗ್ರೆಸ್ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ. ಸಾಕಷ್ಟು ಜನರು ಕಾಂಗ್ರೆಸ್ ಗೆ ಬರುತ್ತಿದ್ದು, ಅವರೆಲ್ಲರನ್ನೂ ಸ್ವಾಗತಿಸುತ್ತಿದ್ದೇನೆ ಎಂದು ತಿಳಿಸಿದರು.
ವಾಗೀಶ್ ಸ್ವಾಮಿ ಅವರು ಕಾಂಗ್ರೆಸ್ ಪಕ್ಷದಿಂದ ಸಿದ್ದಾಂತ ನಂಬಿ ಪಕ್ಷವನ್ನು ಬೇಷರತ್ತಾಗಿ ಬೆಂಬಲಿಸಿದ್ದು, ಪಕ್ಷದ ವತಿಯಿಂದ ವಾಗೀಶ್ ಸ್ವಾಮಿ ಮತ್ತವರ ಅಪಾರ ಬೆಂಬಲಿಗರನ್ನುಆತ್ಮೀಯವಾಗಿ ಸ್ವಾಗತಿಸುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ಹರಿಹರ ಜೆಡಿಎಸ್ ಅಧ್ಯಕ್ಷ ಕಾಂಗ್ರೆಸ್ ಗೆ
ಹರಿಹರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಬೀಬುಲ್ಲಾ ಗನ್ನಾ ಸೇರಿದಂತೆ ಜೆಡಿಎಸ್ ನೂರಾರು ಪದಾಧಿಕಾರಿಗಳು ಜೆಡಿಎಸ್ ಪಕ್ಷವನ್ನು ತೊರೆದು ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ನಂದಿಗಾವಿ ಶ್ರೀನಿವಾಸ್, ಮಾಜಿ ಶಾಸಕ ಎಸ್.ರಾಮಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಜೆಡಿಎಸ್ ಪಕ್ಷದ ಪದಾಧಿಕಾರಿಗಳಾದ ಅಬ್ದುಲ್ ರಶೀದ್, ಅಬ್ದುಲ್ ಬಾಷೀರ್, ಅಬ್ದುಲ್ ಕರೀಮ್, ಹನೀಫ್ ಸಾಬ್, ಸೈಯದ್ ಅಫ್ರೀದಿ, ಅಬ್ದುಲ್, ಮುನೀರ್, ರಜಾಕ್ ಸಾಬ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಪ್ರಮುಖರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಎಸ್.ಬಸಪ್ಪ, ಕೃಷ್ಣ ಸಾ ಭೂತೆ, ವಕೀಲ ಎಂ. ನಾಗೇಂದ್ರಪ್ಪ, ರೇವಣಸಿದ್ದಪ್ಪ, ಶಂಕರ ಖಟಾವಕರ್, ಸೈಯದ್ ಸನಾವುಲ್ಲಾ, ಹಾಲೇಶ್ ಗೌಡ, ಕೆ.ಕೆ.ರಫೀಕ್, ಅಲೀಂ ಬಾಷಾ, ಜಾಕೀರ್ ಸಾಬ್, ನಜೀರ್ ಹುಸೇನ್, ಎನ್.ಹುಲಿಗೇಶ್, ಕಾಂಗ್ರೆಸ್ ಹಿರಿಯ ಮುಖಂಡರು ಮತ್ತು ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ:
ಹರಿಹರ ನಗರದ ಅಮರಾವತಿ ಮಲ್ಲೇಶಪ್ಪ ಅವರ ಮಕ್ಕಳಾದ ಎಬಿಎಂ ವಿಜಯ್ ಕುಮಾರ್ ಮತ್ತು ನಗರಸಭೆ ಸದಸ್ಯರಾದ ಎಬಿಎಂ ವಿಶ್ವನಾಥ್ ಅವರು ಎಸ್.ಎಸ್. ಮಲ್ಲಿಕಾರ್ಜುನ್, ನಂದಿಗಾವಿ ಶ್ರೀನಿವಾಸ್, ಮಾಜಿ ಶಾಸಕ ಎಸ್.ರಾಮಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಹರಿಹರ ಶಾಸಕ ಪರಮಾಪ್ತ ಕೈಗೆ
ಹರಿಹರ ಶಾಸಕ ಬಿ.ಪಿ ಹರೀಶ್ ಆಪ್ತರು, ಆರ್.ಎಸ್.ಎಸ್.ಕಟ್ಟಾಳು, ಹಿಂದೂಪರ ಹೋರಾಟಗಾರರಾದ ಎಬಿಎಂ ವಿಜಯ್ ಕುಮಾರ್ ಮತ್ತು ನಗರಸಭೆ ಸದಸ್ಯರಾದ ಎಬಿಎಂ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆಗೊಂಡರು. ಇದರಿಂದ ಹರಿಹರದಲ್ಲಿ ಕೈಗೆ ಇನ್ನಷ್ಟು ಬಲ ಬಂದಿದೆ.
ವಾಗೀಶ್ ಸ್ವಾಮಿ ಹೇಳಿದ್ದೇನು
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷ ಮತ್ತು ದಾವಣಗೆರೆಯಲ್ಲಿ ಎಸ್ಸೆಸ್ ಮಲ್ಲಿಕಾರ್ಜುನ್ ಅವರ ಜನಪರ ಕಾರ್ಯಕ್ರಮಗಳಿಗೆ ಮನಸೋತು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದೇನೆ.ಬಿಜೆಪಿ ನನ್ನನ್ನು ಉಚ್ಚಾಟಿಸಿಲ್ಲ. ನಾನು ಇವತ್ತಿನವರೆಗೂ ಬಿಜೆಪಿಯಲ್ಲೇ ಇದ್ದೆ. ಆದ್ರೆ, ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ. ಬಿಜೆಪಿಯಲ್ಲಿಸರ್ವಾಧಿಕಾರ ಧೋರಣೆ ಹೆಚ್ಚಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಎಲ್ಲಾ ವರ್ಗದವರಿಗೂ ಸಿಗುತ್ತಿದೆ. ಸಿದ್ದರಾಮಯ್ಯರ ಜನಪ್ರಿಯ ಕಾರ್ಯಕ್ರಮಗಳು, ಆಡಳಿತ ವೈಖರಿ, ಎಸ್. ಎಸ್. ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಹೇಳಿದರು.
ಸೇರ್ಪಡೆಗೊಂಡವರ ವಿವರ:
ವಾಗೀಶ್ ಸ್ವಾಮಿ ಅವರೊಂದಿಗೆ ಮಲೆಬೆನ್ನೂರಿನ ಪುರಸಭೆಯ ಸದಸ್ಯರಾದ ಗೌಡ್ರು ಮಂಜುನಾಥ್, ಅಕ್ಕಮ್ಮ ಬಿ.ಸುರೇಶ್, ಹೆಚ್.ಕೆ.ಸುಧಾ ಪಿ.ಆರ್.ರಾಜು ಮತ್ತು ಮಂಜುನಾಥ್ ಬಿ ಹಾಗೂ ಮುಖಂಡರುಗಳಾದ ಮಾಜಿ ಸದಸ್ಯ ಸುರೇಶ್ ಬಿ., ಚಂದ್ರಪ್ಪ ಬಿ., ಗೋವಿನಹಾಳು ದಯಾನಂದ್, ರಾಜಪ್ಪ ಕೆ.ಜಿ., ಕಡೆಮನಿ ದೇವೇಂದ್ರಪ್ಪ ಹೊಳೆಸಿರಿಗೆರೆ, ಮಂಜುನಾಥ್ ಸಿರಿಗೆರೆ, ಮಲ್ಲೇಶಪ್ಪ ಮಾಳಿಗಿ, ಪ್ರಕಾಶ್, ಕಡ್ಲೆಗೊಂದಿ ಕೇಶವಮೂರ್ತಿ, ಓಬಳೇಶಪ್ಪ ಲೋಕಿಕೆರೆ, ಮಂಜಣ್ಣ ಕುರಿ, ಆನಂದಪ್ಪ ಕಲ್ಕೆರೆ ಕ್ಯಾಂಪ್, ನಾಗಣ್ಣ ಸುಲ್ತಾನಿಪುರ, ಎನ್.ಬಿ.ಗಂಗಾಧರಪ್ಪ ವಕೀಲರು ಹೊಳೆ ಸಿರಿಗೆರೆ, ಪಂಚಮಸಾಲಿ ಸಮಾಜದ ಅಶೋಕಣ್ಣ, ವಿಜಯಕುಮಾರ್ ಹದಡಿ, ಎಲ್.ಆರ್.ಕರಿಯಣ್ಣ ಸುಲ್ತಾನಿಪುರ, ನಿಂಗಪ್ಪ ಮೆಣಸಿನಕಾಯಿ, ಶ್ರೀನಿವಾಸ ಭಜರಂಗಿ, ಆಕಾಶ್, ಬಿ. ಮಹಾರುದ್ರಪ್ಪ ಸೇರಿದಂತೆ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ, ಹರಿಹರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರ್, ಯೂನಿಯನ್ ಬ್ಯಾಂಕ್ನ ಸಿರಿಗೆರೆ ರಾಜಣ್ಣ, ಜಿಲ್ಲಾ ಪಂಚಾಯಿತಿಮಾಜಿ ಸದಸ್ಯ ಬೆಳ್ಳೂಡಿ ಬಸವರಾಜ್, ಮಂಜುನಾಥ ಪಟೇಲ್, ಆನಂದಪ್ಪ, ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಪ್ರಕಾಶ್ ಪಾಟೀಲ್, ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಹುಲ್ಮನಿ ಗಣೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.