ದಾವಣಗೆರೆ : ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ್ರ ಬಗ್ಗೆ ನಮಗೆಲ್ಲಾ ಗೌರವ ಇದೆ.. ಅವರ ಬಗ್ಗೆ ಕಾಳಜಿಯೂ ಇದೆ. ಅವರ ವಯಸ್ಸಿಗೆ ಎಲ್ರೂ ಗೌರವ ಕೊಡ್ಲೇಬೇಕು. ಆದ್ರೆ ನಿನ್ನೆ ದೇವೇಗೌಡ್ರು ಕೊಟ್ಟ ಆ ಒಂದು ಸ್ಟೇಟ್​ಮೆಂಟ್ ಇದೀಗ ಡಿಕೆಶಿ ವಿರುದ್ಧ ಸಮರ ಸಾರಿದಂತಿದೆ.. ಜತೆಗೆ ತಮ್ಮ ಪುತ್ರ ಹೆಚ್​ಡಿಕೆ ಇತ್ತೀಚೆಗೆ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿದ್ದನ್ನ ಸಮರ್ಥಿಸಿಕೊಂಡಂತಿದೆ. ಹಾಗಾದ್ರೆ ಏನಿದು ಹೆಚ್​​ಡಿ ದೇವೇಗೌಡರು ಆರೋಪ ಮಾಡಿದಂತೆ ಡಿಕೆಶಿ 9 ವರ್ಷದ ಹೆಣ್ಣು ಮಗು ಕಿಡ್ನಾಪ್ ಕಹಾನಿ..? 28 ವರ್ಷದ ಹಿಂದಿನ ಹಳೆಯ ಘಟನೆಯನ್ನ ಈಗ ಕೆದಕುತ್ತಿರೋದ್ಯಾಕೆ ದಳಪತಿಗಳು ಅಂದ್ರಾ.?

ಜೆಡಿಎಸ್ ನಾಯಕರು ಹೆಣ್ಣು ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡಿರೋದು ಇದೇ ಮೊದಲೇನೂ ಅಲ್ಲ.  ಈ ಹಿಂದೆ 2019ರಲ್ಲಿ ಸುಮಲತಾ ಅವರು ಮಂಡ್ಯ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಅವರ ಬಗ್ಗೆ ದಳಪತಿಗಳು ಹೇಗೆಲ್ಲಾ ನಾಲಿಗೆ ಹರಿಬಿಟ್ಟಿದ್ರು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ.. ಪರಿಸ್ಥಿತಿ ಹೀಗಿರೋವಾಗ್ಲೇ, ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಸಾಲು ಸಾಲು ಯೋಜನೆಗಳನ್ನ ಜಾರಿಗೆ ತಂದಿದೆ.. ಶಕ್ತಿ ಯೋಜನೆಯ ಮೂಲಕ ರಾಜ್ಯದ ಎಲ್ಲ ಮಹಿಳೆಯರು ಸರ್ಕಾರಿ ಬಸ್​​ಗಳಲ್ಲಿ ರಾಜ್ಯದ ಉದ್ದಗಲಕ್ಕೂ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. ಅದೇ ರೀತಿ ಮನೆಯೊಡತಿಗೆ ಪ್ರತಿ ತಿಂಗಳು 2000 ರೂಪಾಯಿ ಕೊಡ್ತಾಯಿದೆ.

ಅಷ್ಟೇ ಅಲ್ಲ, ರಾಜ್ಯದ ಎಲ್ಲ ಮನೆಗಳಿಗೆ 200 ಯೂನಿಟ್​ ವರೆಗೂ ಉಚಿತವಾಗಿ ವಿದ್ಯುತ್ ಕೊಡ್ತಾಯಿದೆ. ಇದ್ರಿಂದ ನಮ್ಮ ರಾಜ್ಯದ ಹೆಣ್ಮಕ್ಕಳ ಆರ್ಥಿತಿ ಸ್ಥಿತಿ ಉತ್ತಮವಾಗುತ್ತಿದೆ. ಆದ್ರೆ ಪರಿಸ್ಥಿತಿ ಹೀಗಿರೋವಾಗ್ಲೇ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್​​ನ ಗ್ಯಾರಂಟಿ ಯೋಜನೆಗಳನ್ನ ಟೀಕಿಸುವ ಭರದಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಮಹಿಳೆಯವರ ಬಗ್ಗೆ ಒಂದು ಮಾತು ಹೇಳಿದ್ರು. ಅದೇನು ಅನ್ನೋದನ್ನ ಒಮ್ಮೆ ಕೇಳಿಸಿಕೊಂಡು ಬಿಡಿ.

ನನ್ನ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ ಅಂತೇಳಿ ಮಾಜಿ ಸಿಎಂ ಹೆಚ್​ಡಿಕೆ ಹೇಳಿದ್ರು. ಹಾಗಾದ್ರೆ ದಾರಿ ತಪ್ಪೋದು ಅಂದ್ರೆ ಏನರ್ಥ ಕುಮಾರಸ್ವಾಮಿಯವರೇ ಅಂತೇಳಿ ಮಹಿಳಾ ಮಣಿಗಳು ಕುಮಾರಸ್ವಾಮಿ ಅವರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ರು. ಹೀಗೆ ರಾಜ್ಯದ ಮಹಿಳೆಯರು ಕುಮಾರಸ್ವಾಮಿಯವರ ಹೇಳಿಕೆಯನ್ನ ಖಂಡಿಸಿ ವಾಗ್ದಾಳಿಯನ್ನ ನಡೆಸಿದ್ರು. ಇತ್ತ ರಾಜ್ಯ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿ ಕುಮಾರಸ್ವಾಮಿಯವರ ವಿರುದ್ಧ ಕಿಡಿಕಾರಿತ್ತು. ಯಾರು ಮಹಿಳೆಯರನ್ನು ಕೀಳಾಗಿ ಕಾಣುತ್ತಾರೋ ಅವರ ಅವನತಿ ಶುರುವಾಗಿದೆ ಎಂದರ್ಥ. ಮಹಾಭಾರತ, ರಾಮಾಯಣ ಮಹಾಕಾವ್ಯಗಳಲ್ಲಿ ಸಹ ಮಹಿಳೆಯರ ಘನತೆಗೆ ಚ್ಯುತಿ ತಂದಿದ್ದವರು ಕುಸಿದು ಹೋದರು. ಈಗ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಅವನತಿ ಶುರುವಾಗಿದೆ, ಹಾಗಾಗಿ ಇವರ ಮಹಿಳಾ ವಿರೋಧಿ ಧೋರಣೆ ಹೆಚ್ಚುತ್ತಿದೆ. ಒಂದೆಡೆ ಬಿಜೆಪಿಯ ಸಂಜಯ್ ಪಾಟೀಲ್ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗುರಿಯಾಗಿಸಿ ಇಡೀ ಮಹಿಳಾ ಸಮುದಾಯವನ್ನು ಅವಮಾನಿಸಿದ್ದಾರೆ. ಮತ್ತೊಂದೆಡೆ ಹೆಚ್​ಡಿ ಕುಮಾರಸ್ವಾಮಿ ಅವರು ಮಹಿಳೆಯರನ್ನು ಕೀಳಾಗಿ ಕಂಡಿದ್ದಾರೆ. ಕೌರವರು ಹಾಗೂ ರಾವಣನಂತೆ ಬಿಜೆಪಿ ಜೆಡಿಎಸ್ ಪಕ್ಷಗಳು ಕೂಡ ಸರ್ವನಾಶವಾಗುವುದು ಖಂಡಿತ ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕುಟುಕಿತ್ತು.

ಇತ್ತ ಇದೇ ವಿಚಾರಕ್ಕೆ ಸಂಬಂದಿಸಿದಂತೆ ಡಿಸಿಎಂ ಡಿಕೆಶಿ ಮತ್ತು ಸಿಎಂ ಸಿದ್ರಾಮಯ್ಯ ಕೂಡ ರಿಯಾಕ್ಟ್ ಮಾಡಿ, ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ರು. ಹೀಗೆ ಎಲ್ಲ ಕಡೆಯಿಂದ್ಲೂ ಲಾಕ್ ಆದ ಕುಮಾರಸ್ವಾಮಿಯವರಿಗೆ ಮಂಡ್ಯದಲ್ಲಿ ಸೋಲೋ ಭೀತಿ ಶುರುವಾಗಿತ್ತು ಎನ್ನಲಾಗುತ್ತಿದೆ. ಜೊತೆಗೆ ಮಂಡ್ಯ, ಹಾಸನ ಮತ್ತು ಕೋಲಾರ ಮೂರು ಕ್ಷೇತ್ರಗಳಲ್ಲಿ ಕುಮಾರಸ್ವಾಮಿಯವರ ಈ ಹೇಳಿಕೆಗೆ ಮಹಿಳೆಯರು ರೊಚ್ಚಿಗೆದ್ದಿದ್ರು. ಇದ್ರಿಂದ ಡ್ಯಾಮೇಜ್ ಕಂಟ್ರೋಲ್​​ಗೆ ಮುಂದಾಗಿರೋ ದಳಪತಿಗಳು ದೇವೇಗೌಡ್ರಿಂದ ಒಂದು ಹೇಳಿಕೆ ಕೊಡಿಸಿದ್ದಾರೆ ಅದೇನು ಅನ್ನೋದನ್ನ ನೀವೇ ನೋಡಿ.

ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಹೆಚ್​ಡಿಕೆ ಹೇಳೋ ಪ್ರಕಾರ ಇದು 1996 – 97ರಲ್ಲಿ ನಡೆದ ಘಟನೆಯಂತೆ. ಆಗ 9 ವರ್ಷದ ಮಗುವನ್ನ ಕಿಡ್ಯಾಪ್ ಮಾಡಿ ಒಂದು ಕುಟುಂಬದ ಆಸ್ತಿಯನ್ನ ಡಿಕೆ ಶಿವಕುಮಾರ್ ಅವರು ಬರೆಸಿಕೊಂಡಿದ್ರು.. ಅದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ ಅಂತೇಳಿ ದಳಪತಿಗಳು ಹೇಳ್ತಾಯಿದ್ದಾರೆ. ಇದಕ್ಕೆ ಡಿಕೆಶಿ ರಿಯಾಕ್ಟನ್ ಏನ್ ಗೊತ್ತಾ?

ದಳಪತಿಗಳ ಬಳಿ ದಾಖಲೆ ಇದ್ರೆ ಬಿಡುಗಡೆ ಮಾಡ್ಲಿ.. ಮಾಧ್ಯಮಗಳ ಮುಂದೆ ಬಂದು ಇಂಥ ಹೇಳಿಕೆಗಳನ್ನ ಕೊಡೋದ್ಯಾಕೆ.? ಅವರ ಚಿಲ್ಲರೆ ಸ್ಟೇಟ್​​ಮೆಂಟ್​ಗಳಿಗೆ ನಾನು ರಿಯಾಕ್ಟ್ ಮಾಡಲ್ಲ ಅಂತೇಳಿ ಡಿಕೆಶಿ ಹೇಳಿದ್ದಾರೆ. ನಿಮಗೆ ಗೊತ್ತಿರ್ಲಿ, ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪೆನ್​​ಡ್ರೈವ್​ ದಾಖಲೆ ಇದೆ ಅಂತೇಳಿದ್ದ ಕುಮಾರಸ್ವಾಮಿ, ಇದುವರೆಗೂ ಅದನ್ನ ಬಿಡುಗಡೆ ಮಾಡಿಲ್ಲ. ಈಗ ತಮ್ಮ ಹೇಳಿಕೆಯ ವಿರುದ್ಧ ಮಹಿಳೆಯರು ರಾಜ್ಯಾಧ್ಯಂತ ರೊಚ್ಚಿಗೆದ್ದಿದ್ದು ಕಾಂಗ್ರೆಸ್ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದೆ.. ಹೀಗಾಗಿ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಳ್ಳಲು ದಳಪತಿಗಳು ಹಳೆ ಪ್ರಕರಣವೊಂದನ್ನ ಹೊರ ತರೋ ಮಾತುಗಳನ್ನ ಆಡ್ತಿದ್ದಾರಾ ಅನ್ನೋ ಅನುಮಾನ ವ್ಯಕ್ತವಾಗ್ತಾಯಿದೆ. ಅಷ್ಟೇ ಅಲ್ಲ., ಡಿಕೆಶಿ ಕಿಡ್ಯಾಪ್ ಕಹಾನಿಯನ್ನ ಮುಂದಿಟ್ರೆ ಕುಮಾರಸ್ವಾಮಿ ರಾಜ್ಯದ ಮಹಿಳೆಯರ ಬಗ್ಗೆ ಕೊಟ್ಟಿದ್ದ ಕೇವಲವಾದ ಹೇಳಿಕೆ ಮನ್ನಾ ಆಗುತ್ತಾ.? ದಳಪತಿಗಳ ಈ ಹೇಳಿಕೆಗಳು ಮತ್ತು ನಡೆಯ ಬಗ್ಗೆ ನೀವೇನಂತಿರಾ?

Share.
Leave A Reply

Exit mobile version