ಭದ್ರಾವತಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶ್ವನಗರ ಅರಬಿಳಚಿ ಕ್ಯಾಂಪ್ ಇಲ್ಲಿ  ಮೂರು ಕಾರ್ಯಕ್ರಮ ಗಳನ್ನು ಆಯೋಜಿಸಿ ಗಮನ ಸೆಳೆಯಿತಲ್ಲದೇ ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು.

ಶಿಕ್ಷಕ ಸಾಹಿತಿಗಳು ಹಾಗೂ ಸಂಪನ್ಮೂಲ ವ್ಯಕ್ತಿ ರಂಗನಾಥ ಕೆ ಎನ್ ಶಾಲೆ ಬಿಟ್ಟ ಮಕ್ಕಳ ಬಗ್ಗೆ, ನನ್ನ ಶಾಲೆ ನನ್ನ ಕೊಡುಗೆ, ವಿದ್ಯಾಂಜಲಿ ಕಾರ್ಯಕ್ರಮದಲ್ಲಿ ಆಗುವ ಅನುಕೂಲಗಳನ್ನು ಕುರಿತು ಮತ್ತು ಎಸ್ ಡಿ ಪಿಯ ಪರಿಚಯ ಮತ್ತು ಮಕ್ಕಳಿಗೆ ಮನೆಯಲ್ಲಿ ಕಲಿಕಾ ಪರಿಸರವನ್ನು ನಿರ್ಮಿಸುವ ಹೊಣೆ ಪೋಷಕರದು ಎಂಬ ವಿಷಯಗಳನ್ನು ತಿಳಿಸಿದರು.

ಮಕ್ಕಳ ಪ್ರತಿಭೆಯನ್ನು ಕಂಡ ಪೋಷಕರು ಸಂತೃಪ್ತರಾದರು. ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ 1 ರಿಂದ 8 ನೇ ತರಗತಿಯ ಮಕ್ಕಳು ಭಾಗವಹಿಸಿ, ತಮ್ಮಲಿರುವ ಪ್ರತಿಭೆಗಳನ್ನು ಪ್ರದರ್ಶಿಸಿದರು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಿಥಲನ್ ರಾಕೇಟ್ ಉಡಾವಣೆ ಮಾಡಿ ಪ್ರಥಮ ಬಹುಮಾನ ಪಡೆದನು. ಪ್ರಾಣಿ ಸಂಗ್ರಹಾಲ ಯದಲ್ಲಿ ನೀರಿನ ಶುದ್ಧೀಕರಣ ಮಾಡಿ ದ್ವಿತೀಯ ಹಾಗೂ ಸಾನಿಯಾ ಮಿರ್ಜಾ ಜಲಚಕ್ರ ನಿರ್ಮಿಸಿ ತೃತೀಯ ಬಹುಮಾನ ಪಡೆದರು. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಭರತ್ ಎಂ ಶಾಖದ ಪ್ರಸರಣ ಹಾಗೂ ಸರಳ ಸೂಕ್ಷ್ಮದರ್ಶಕ ತಯಾರಿಸಿ ಪ್ರಥಮ ಹಾಗೂ ಹರಿಪ್ರಿಯಾ ಆರ್ ಕುಣಿಯುವ ಮೇಣದ ಬತ್ತಿ ಮಾಡಿ ದ್ವಿತೀಯ ಮತ್ತು ಒಂದನೇ ತರಗತಿಯ ಮನ್ವಿತಾ ನೀರಿನಲ್ಲಿ ಕಣಗಳ ಜೋಡಣೆ ಮಾಡಿ ತೃತೀಯ ಸ್ಥಾನ ಪಡೆದರು. ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ವಿಜ್ಞಾನ ಚಿತ್ರಗಳ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಾಯಿತು. ಟಿಜಿಟಿ ಶಿಕ್ಷಕಿ ನಾಗಲಕ್ಷ್ಮಿಯವರ ತರಬೇತಿ ಮತ್ತು ಪ್ರೋತ್ಸಾಹ ಉತ್ತಮವಾಗಿತ್ತು.

ಗ್ರಾಮಸ್ಥರಾದ ದೇವರಾಜ್ ಮಾತನಾಡಿದರು. ನಂತರ ನಡೆದ ಶಾರದಾ ಪೂಜಾ ಕಾರ್ಯಕ್ರಮ ಪೋಷಕರು ಹಾಗೂ ಮಕ್ಕಳ ಸಂಭ್ರಮದಲ್ಲಿ ಅದ್ಧೂರಿಯಾಗಿ ಮೂಡಿಬಂದಿತು. ಗ್ರಾಮ ಪಂಚಾಯಿತಿ ಸದಸ್ಯರಾದ ಸುಶೀಲಮ್ಮ, ರಾಜು ಎ. ವಿಜಯ ವೆಂಕಟೇಶ್ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.ಬಡ್ತಿ ಮುಖ್ಯ ಶಿಕ್ಷಕಿ ಸಾವಿತ್ರಮ್ಮ ಎಸ್ ಸ್ವಾಗತಿಸಿ, ಪೂಜಾಕಾರ್ಯ ನೆರವೇರಿಸಿದರು.

Share.
Leave A Reply

Exit mobile version