ದಾವಣಗೆರೆ : ಸರ್ವೆಜನ ಸುಖಿನೋ ಭವಂತು ಎಂಬ ಧೇಯದಿಂದ ಯಾವುದೇ ಪ್ರತಿಫಲ ಬಯಸದೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ತನ್ನದೇ ಆದಂತಹ ಮುಂದಾಲೋಚನೆ, ಸೂಕ್ಷ್ಮ ಗ್ರಾಹಿ ದೂರದೃಷ್ಟಿವುಳ್ಳಂತಹ ಒಬ್ಬ ಯುವ ನಾಯಕನನ್ನು ನಾವೆಲ್ಲ ಯಾವುದೇ ಜಾತಿ, ಜನಾಂಗ, ಧರ್ಮ ಭೇದವಿಲ್ಲದೆ ಮತನೀಡಬೇಕೆಂದು ಕರ್ನಾಟಕ ಸ್ವಾಭಿಮಾನಿ ರೈತರ, ಕಾರ್ಮಿಕರ ಪಕ್ಷ ಮನವಿ ಮಾಡಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪಕ್ಷದ ಅಧ್ಯಕ್ಷ ಜಿ.ಎಸ್.ನಾಗರಾಜ ಮಾತನಾಡಿ, ಇದುವರೆಗೂ ನಮ್ಮನ್ನು ಆಳಿದ ರಾಜಕೀಯ ಪಕ್ಷಗಳೆಲ್ಲವೂ ಸಹ 40-50 ವರ್ಷಗಳಿಂದ ಒಂದೇ ಕುಟುಂಬದ ಅಥವಾ ಒಂದೇ ಕೋಮಿನ ಹಿಡಿತದಲ್ಲಿ ತಮ್ಮ ರಾಜಕೀಯ ನೆಲೆಯನ್ನು ಸ್ಥಾಪಿಸಿ ಕೊಂಡಿದ್ದು, ಅದಕ್ಕೆ ಪರ್ಯಾಯ ಮಾರ್ಗವೇ ಇಲ್ಲ ಎಂಬಂತಾಗಿದೆ. ಅಲ್ಲದೆ ಸುಮಾರು 40 ವರ್ಷಗಳಿಂದ ರೈತ ಹೋರಾಟಗಳನ್ನು ಇದುವರೆಗೂ ನಡೆಸಿಕೊಂಡು ಬಂದಿದ್ದು, ಸಂಘಟನೆ ಮೂಲಕ ಕೆಲವೇ ಕೆಲವು ಪ್ರಕರಣಗಳಲ್ಲಿ ಜಯ ಕಂಡುಕೊಂಡಿವೆ. ಕೆಲವರು ತಮ್ಮದೇ ಪ್ರಾಂತೀಯ ಬಣಗಳನ್ನು ಸೃಷ್ಟಿಸಿಕೊಂಡು ಪರಸ್ಪರ ದೂಷಿಸುತ್ತಾ ತಮ್ಮ ನೈಜ ಶಕ್ತಿಯನ್ನು ಕಳೆದುಕೊಂಡಿದ್ದು, ಚುನಾವಣೆಗಳಲ್ಲಿ ರೈತಪರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮಟ್ಟದಲ್ಲಿಲ್ಲ. ಇದೊಂದು ವಿಪರ್ಯಾಸವೇ ಸರಿ ಎಂದರು.

ಇಂತಹ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಜಿ.ಬಿ. ವಿನಯಕುಮಾ‌ರ್, ದಾವಣಗೆರೆ ಜಿಲ್ಲೆ ಅಲ್ಲದೇ ಇಡೀ ಕರ್ನಾಟಕದ ಪ್ರಜ್ಞಾವಂತ ಮತದಾರರಲ್ಲಿ ತನ್ನ ಚಿಕ್ಕವಯಸ್ಸಿನಲ್ಲಿಯೇ ಸಮಾಜಮುಖಿ ಕಾರ್ಯಕ್ರಮಗಳು, ಯುವಜನ ಸಬಲೀಕರಣ. ಉನ್ನತ ವ್ಯಾಸಂಗಕ್ಕೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳು, ಗ್ರಾಮೀಣ ಪ್ರದೇಶದ ಅವಿದ್ಯಾವಂತ, ತಿಳುವಳಿಕೆ ಮಟ್ಟ ಕಡಿಮೆ ಇರುವಂತಹ ಅಮಾಯಕರ ಪಾಲಿಗೆ ಕಾಡಿನಲ್ಲಿ ಹೊಂಬಾಳೆ ಸಿಕ್ಕಿದ ಹಾಗೇ ಜನಮನದಲ್ಲಿ ತನ್ನ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿದ್ದಾರೆ‌ ಎಂದು ಹೇಳಿದರು.

ಆದ್ದರಿಂದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ನಂ.28 ಗ್ಯಾಸ್ ಸಿಲಿಂಡರ್ ಗುರುತಿಗೆ ತಮ್ಮ ಮತ ನೀಡಿ ಇವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವ ಮೂಲಕ ಮಧ್ಯ ಕರ್ನಾಟಕದಿಂದ ಇಡೀ ರಾಜ್ಯದ ಮೂಲೆ ಮೂಲೆಗೂ ಯುವ, ಉತ್ಸಾಹಿ, ರೈತ ಪರ ಕಾಳಜಿ ಇರುವ ವ್ಯಕ್ತಿಯನ್ನು ಗೆಲ್ಲಿಸಿದ ಕೀರ್ತಿ ದಾವಣಗೆರೆಗೆ ಸಲ್ಲುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಡಿ.ಕೆ.ಶಾಸ್ತ್ರಿ, ಜಯಣ್ಣ, ಚಂದ್ರು ಬಸವಂತಪ್ಪ ಇದ್ದರು.

Share.
Leave A Reply

Exit mobile version