ದಾವಣಗೆರೆ : ಸಂಸದೆ ಪ್ರಭಾ ಮಲ್ಲಿಕಾರ್ಜುನ್ ವಿರುದ್ಧ ಸಿಡಿದೆದ್ದ ವಿನಯ್ ಕುಮಾರ್ ರನ್ನು ಕಾಂಗ್ರೆಸ್ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ವಿನಯ್ ಕುಮಾರ್ ಪಕ್ಷೇತರರಾಗಿ ಸ್ಪರ್ಧಿಸಿದ್ದು, ಕೈ ನಾಯಕಿಗೆ ನಡುಕ ಉಂಟು ಮಾಡಿದ್ದರು. ಸ್ವತಃ ಸಿಎಂ ಸಿದ್ದರಾಮಯ್ಯ ಬಂದು ವಿನಯ್ ಕುಮಾರ್ ಗೆ ಮತ ಹಾಕಬೇಡಿ ಎಂದಿದ್ದರು. ಹೀಗಿದ್ದರೂ ವಿನಯ್ ಕುಮಾರ್ ನಲವತ್ತು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಇವೆಷ್ಟು ಕಾಂಗ್ರೆಸ್ ಮತಗಳಾಗಿದ್ದವು. ಅಲ್ಲದೇ ಬಿಜೆಪಿಗೆ ವರದಾನವಾಗಿತ್ತು. ಸಿಎಂ ಸಿದ್ದರಾಮಯ್ಯ ವಿರುದ್ದ ಆರೋಪ ಬಂದಾಗ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಮಲ್ಲಿಕಾರ್ಜುನ್ ಸಿಎಂ ಪರ ಇಲ್ಲ ಎಂದು ಪತ್ರಿಕಾಗೋಷ್ಠಿ ನಡೆಸಿದ್ದರು.
ಈ ನಡುವೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪ ಕೂಡ ಪತ್ರಿಕಾಗೋಷ್ಠಿ ನಡೆಸಿ ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಹೇಳಿದ್ದರು. ಈ ಬೆನ್ನೇಲ್ಲೆ ಪಕ್ಷ ವಿನಯ್ ಕುಮಾರ್ ರನ್ನು ಉಚ್ಚಾಟನೆ ಮಾಡಿದೆ. ಪಕ್ಷದ ಕಾರ್ಯಕರ್ತರು, ನಾಯಕರುಗಳಾಗಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬಾರದೆಂದು ಪತ್ರಿಕಾ ಪ್ರಕಟಣೆ ಮೂಲಕ ಪಕ್ಷದ ಚೇರಮನ್ ಕೆ.ರೆಹಮಾನ್ ಖಾನ್ ತಿಳಿಸಿದ್ದಾರೆ.