ನಂದೀಶ್ ಭದ್ರಾವತಿ, ದಾವಣಗೆರೆ

ಕರ್ನಾಟಕದ ಲೋಕಸಭೆ ಚುನಾವಣೆ ಫಲಿತಾಂಶ ಬಿಜೆಪಿ ಹೈಕಮಾಂಡ್ ನಾಯಕರಿಗೆ ಖುಷಿಕೊಟ್ಟಿದೆ. ಸ್ವತ: ಪ್ರಧಾನಿ ನರೇಂದ್ರ ಮೋದಿ ಎನ್ಡಿಎ ಸಂಸದರ ಸಭೆಯಲ್ಲಿ ರಾಜ್ಯದ ಸಾಧನೆ ಕುರಿತು ಮೆಚ್ಚುಗೆ ಮಾತಾಡುವ ಮೂಲಕ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಂಘಟನಾ ಚತುರತೆ, ನಾಯಕತ್ವವನ್ನು ಗುಣಗಾನ ಮಾಡಿದ್ದರು. ಹೈಕಮಾಂಡ್ ನಾಯಕರ ಮೆಚ್ಚುಗೆ ಮಾತು ಹಾಗೂ ಅಮಿತ್ ಶಾ ಅಭಯ ಹಸ್ತದಿಂದ ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪವರ್ಫುಲ್ ಲೀಡರ್ ಹಾಗಾದ್ರೆ, ಬಿಜೆಪಿ ಯಂಗ್ ಮಾಸ್ ಲೀಡರ್ಗೆ ಅಮಿತ್ ಶಾ ಕೊಟ್ಟ ಭರವಸೆ ಏನು? ಬಿಎಸ್ವೈ ವಿರೋಧಿ ಬಣ ಮೂಲೆ ಸೇರಿದ್ಯಾಕೆ? ಶಾ ಕೊಟ್ಟ ಟಾಸ್ಕ್ ಯಾವುದು?

ರಾಜ್ಯ ಬಿಜೆಪಿಯಲ್ಲೀಗ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪವರ್ ಫುಲ್ ಲೀಡರ್. ಲೋಕಸಭೆ ಚುನಾವಣೆ ಆರು ತಿಂಗಳ ಮುಂಚೆ ಅಧ್ಯಕ್ಷಗಿರಿ ವಹಿಸಿಕೊಂಡು, ಪಕ್ಷವನ್ನ ಗೆಲುವಿನ ದಡ ಮುಟ್ಟಿಸಿದ ಬಿವೈವಿ ಸಾಧನೆಗೆ ಪಿಎಂ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ.

ಫಲಿತಾಂಶದ ಬಳಿಕ ಮೊದಲ ಬಾರಿಗೆ ಈಚೆಗೆ ದೆಹಲಿ ಪ್ರವಾಸ ಕೈಗೊಂಡಿದ್ದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಈ ವೇಳೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಕೆಲ ಬೆಳವಣಿಗೆಗಳ ಬಿಜೆಪಿ ಚಾಣಕ್ಯ ಅಮಿತ್‌ ಶಾ ಅವರ ಗಮನಕ್ಕೆ ತಂದಿದ್ದರು. ಇಂತಹ ಭಿನ್ನಾಭಿಪ್ರಾಯ ನಿಗ್ರಹಿಸಲು ಸಂಪೂರ್ಣ ಅಧಿಕಾರ ಅಮಿತ್‌ ಶಾ ಅವರು ವಿಜಯೇಂದ್ರಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅದಲ್ಲದೇ ಮುಂಬರುವ ಸರಣಿ ಚುನಾವಣೆಗಳಿಗೆ ಪಕ್ಷ ಸಿದ್ಧಗೊಳಿಸುವ ಯೋಜನೆಗಳಿಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಮಿತ್‌ ಶಾ ಅವರಿಂದ ಅನುಮೋದನೆ ಪಡೆದಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಪಕ್ಷದ ಸಾಧನೆಗೆ ಅಮಿತ್‌ ಶಾ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಜುಲೈನಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಅದಕ್ಕೂ ಮುನ್ನ ಮಾಡಬೇಕಾದ ಟಾಸ್ಕ್‌ಗಳ ಪಟ್ಟಿಯನ್ನು ಅಮಿತ್‌ ಶಾ ಅವರು ಬಿವೈ ವಿಜಯೇಂದ್ರಗೆ ನೀಡಿದ್ದಾರೆ. ಅದರಂತೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ
ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್‌ನ ದುರಾಡಳಿತದ ವಿರುದ್ಧ ಹೋರಾಟ ಮುಂದುವರಿಸುವ ಸೂಚನೆ ನೀಡಿದ್ದಾರೆ ರಾಜ್ಯಾಧ್ಯಕ್ಷ
ವಿಜಯೇಂದ್ರ.

ಹೈಕಮಾಂಡ್ ನಾಯಕರು ವಿಜಯೇಂದ್ರ ಬೆಂಬಲಕ್ಕೆ ನಿಂತಿದ್ದರಿಂದ ಫಲಿತಾಂಶದ ಬಳಿಕ ಸಣ್ಣಗೆ ಭುಸುಗುಡತ್ತಿದ್ದ ಬಿಎಸ್ವೈ ವಿರೋಧಿ ಬಣದ ನಾಯಕರೀಗ ಮೌನಕ್ಕೆ ಶರಣಾಗಿದ್ದಾರೆ. ಲೋಕಸಭೆಯಲ್ಲಿ ತಮ್ಮದೆ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಕೊಡಿಸದ ಬಸನಗೌಡ ಪಾಟೀಲ್ ಯತ್ನಾಳ್, ಹರಿಹರ ಶಾಸಕ ಬಿಪಿ ಹರೀಶ್ ಅವರಿಗೆ ಪಕ್ಷದ ಶಿಸ್ತು ಉಲ್ಲಂಘಸಿದರೇ ಶಿಸ್ತು ಕ್ರಮ ಗ್ಯಾರಂಟಿ ಎಂಬ ಸಂದೇಶ ಡೆಲ್ಲಿಯಿಂದಲೇ ಬಂದಿದ್ದರಿಂದ ಮೌನದ ಮೊರೆ ಹೊಕ್ಕಿದ್ದಾರೆ.

ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಸಂಘಟನೆ ಚುರುಕುಗೊಂಡಿದೆ, ಪಕ್ಷದ ವರ್ಚಸ್ಸು ಹೆಚ್ಚಿದೆ ಜೊತೆಗೆ ಕಾರ್ಯಕರ್ತರಲ್ಲಿ ಉತ್ಸಾಹ ಹಿಮ್ಮಡಿಸಿದೆ ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರ ಧ್ವನಿಗೆ ಈಗ ಬಲ ಬಂದಿದೆ. ಇಂತಹ ಪಕ್ಷದ ಮುಜುಗರ ತಂದ್ರೆ ಸಹಿಸಲು ಸಾಧ್ಯವಿಲ್ಲಎಂಬ ಹೈಕಮಾಂಡ್ ನಾಯಕರು ರಾಜ್ಯದ ಕೆಲ ನಾಯಕರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.ಒಟ್ಟಾರೆ.. ರಾಜ್ಯ ಬಿಜೆಪಿಯಲ್ಲಿಗ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪವರ್ಪುಲ್ ಲೀಡರ್..

Share.
Leave A Reply

Exit mobile version