ದಾವಣಗೆರೆ : ರಾಜ್ಯ ಬಿಜೆಪಿಯಲ್ಲಿ ಬುಗಿಲೆದ್ದಿರುವ ಆಂತರಿಕ ಸಂಘರ್ಷಗಳು ಕೊನೆಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ಅವರದ್ದೇ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಕೊನೆಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ತಮ್ಮದೆ ಪಕ್ಷದ ವಿರೋಧಿಗಳಿಗೆ ಕೌಂಟರ್ ಕೊಟ್ಟಿದ್ದಾರೆ. ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಹಾಗಾದ್ರೆ ವಿಜಯೇಂದ್ರ ಹೇಳಿದ್ದೇನು? ವಿರೋಧಿಗಳಿಗೆ ಕೊಟ್ಟ ಸಂದೇಶ ಸರಿನಾ? ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಧಿಕಾರ ವಹಿಸಿಕೊಂಡ ನಂತರ ಬಿಜೆಪಿಯ ಇನ್ನೊಂದು ಬಣ ಕತ್ತಿ ಮಸಿಯುತ್ತಿದೆ. ಒಳಗೊಳಗೆ ಸಂಚು ರೂಪಿಸುವ ಜತೆಗೆ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಬೆಳಗಾವಿ ಸಾಹುಕಾರ ರಮೇಶ ಜಾರಕಿಹೊಳಿ, ಮಾಜಿ ಸಂಸದ ಪ್ರತಾಪ್‌ಸಿಂಹ ಸೇರಿ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಿಜಯೇಂದ್ರ ವಿರುದ್ಧ ಹೊಂದಾಣಿಕೆ ರಾಜಕೀಯ ಹಾಗೂ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ.

ಇಷ್ಟು ದಿನ ಸೈಲೆಂಟ್‌ಆಗಿದ್ದ ವಿಜಯೆಂದ್ರ ಈಗ ವೈಲೆಂಟ್‌ಆಗಿದ್ದಾರೆ. ಪಕ್ಷದ ಬೆಳವಣಿಗೆಗಾಗಿ ನಾನು ವಿರೋಧಿಗಳ ಟೀಕೆಗಳನ್ನು ಸ್ವೀಕಾರ ಮಾಡುತ್ತೇನೆ ಎಂದಿದ್ದ ವಿಜಯೇಂದ್ರ ಶನಿವಾರ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಜರುಗಿದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಜತೆಗೆ ತಮ್ಮದೇ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿರಿದ್ದಾರೆ.

ನಾನು ಯಾರನ್ನು ಮೆಚ್ಚಿಸಲು ರಾಜ್ಯಾಧ್ಯಕ್ಷ ಆಗಿಲ್ಲ. ಯಾರನ್ನೂ ಓಲೈಸಲು ಕೆಲಸ ಮಾಡುತ್ತಿಲ್ಲ. ಕರ್ನಾಟಕದಲ್ಲಿ ಬಿಜೆಪಿಯನ್ನು ಮತಷ್ಟು ಬಲ ಪಡೆಸಲು ಹಾಗೂ ನನ್ನ ಕಾರ್ಯಕ್ಷಮತೆ ನೋಡಿ ವರಿಷ್ಠರು ನನಗೆ ಜವಾಬ್ದಾರಿ ನೀಡಿದ್ದಾರೆ. ಆ ಜವಾಬ್ದಾರಿಯನ್ನು ನಾನು ಶಿರಸಾಷ್ಟವಾಗಿ ಪಾಲನೆ ಮಾಡಿ ಪಕ್ಷವನ್ನು ಕಟ್ಟುತ್ತಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತರಿಗೆ ಉತ್ತರದಾಯಿ ಆಗಿರುತ್ತೇನೆ. ವಿರೋಧಿಗಳ ಟೀಕೆ, ಟಿಪ್ಪಣಿಗಳಿಗೆ ಜಗ್ಗುವ ಮಾತೇ ಇಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಎನ್ನುವ ಹುದ್ದೆ ನನಗೆ ಮಾತ್ರವಲ್ಲ ಎಲ್ಲರಿಗೂ ಶಾಶ್ವತ. ನಾನು ಸದಾಕಾಲ ಬಿಜೆಪಿ ಕಾರ್ಯಕರ್ತ ಎನ್ನುವ ಭಾವನೆಯಿಂದ ಪಕ್ಷವನ್ನು ಕಟ್ಟುತ್ತಿದ್ದೇನೆ. ಪಕ್ಷದಲ್ಲಿ ಅನೇಕರು ಹಿರಿಯ ನಾಯಕರು ಇದ್ದರೂ ಕೇಂದ್ರ ನಾಯಕರು ನನ್ನ ಮೇಲೆ ಭರವಸೆ ಇಟ್ಟು ನಾಯಕತ್ವದ ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತಿದ್ದೇನೆ. ವಿರೋಧಿಗಳ ಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ.

ಒಟ್ಟಿನಲ್ಲಿ ಎರಡ್ಮೂರು ದಿನಗಳಿಂದ ಸೈಲೆಂಟ್‌ಆಗಿದ್ದ ವಿಜಯೇಂದ್ರ ಈಗ ವೈಲೆಂಟ್‌ಆಗಿದ್ದಾರೆ. ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿ ವಿನಾಕಾರಣ ಟೀಕೆ ಮಾಡಿದರೆ ಸುಮ್ಮನೆ ಬಿಡಲ್ಲ ಎಂದಿದ್ದಾರೆ.

Share.
Leave A Reply

Exit mobile version